ಕೋಲಾರ

ಸಿರಿಗನ್ನಡ ವೇದಿಕೆಯಿಂದ ಜಿಎಸ್ಎಸ್ಗೆ ಶ್ರದ್ಧಾಂಜಲಿ

Published On :

ಕೋಲಾರ: ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯ ಅಂತರಗಂಗೆ ರಸ್ತೆಯಲ್ಲಿ ಜಿಲ್ಲಾ ಸಿರಿಗನ್ನಡ ವೇದಿಕೆ ವತಿಯಿಂದ ಸೋಮವಾರ ರಾತ್ರಿ ನಾಡಿನ ಹಿರಿಯ ಸಾಹಿತ್ಯ ರತ್ನ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆಯ ಅಧ್ಯಕ್ಷ ಡಾ.ಕೆ.ಎಂ.ಜೆ ಮೌನಿ, ಜಿಎಸ್ಎಸ್ ಅಭಿಮಾನಿಗಳಾದ ಪೋಸ್ಟ್ ನಾರಾಯಣಸ್ವಾಮಿ, ಶರಣಪ್ಪ ಗಬ್ಬೂರು, ಮಹೇಶ್ರಾವ್ ಕದಂ, ಹನೀಫ್ ಸಾಬ್, ಉದಯಕುಮಾರ್, ಡಿ. ಶಿವಕುಮಾರ್, ಸೀಕಲ್ ನರಸಿಂಹಪ್ಪ, ಟಿ. ಸುಬ್ಬರಾಯಪ್ಪ, ಶಿವಲಿಂಗಪ್ಪ, ಶರಣಪ್ಪ ಜಮಾದಾರ್, ಹೆಚ್.ಆರ್. ಹರೀಶ್ ಇದ್ದರು.

ಜಿಎಸ್ಎಸ್ ನಿಧನಕ್ಕೆ ಸಂತಾಪ
ಚಿಂತಾಮಣಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನದ ಪ್ರಯುಕ್ತ ಶಿಲ್ಪ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ವರದಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೌನ ಆಚರಣೆ ಮಾಡಿ ಶಾಲೆ ತರಗತಿಗಳಿಗೆ ರಜೆ ನೀಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಆರ್. ನರಸಿಂಹಪ್ಪ ಮಾತನಾಡಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ ಎಂದು ತಿಳಿಸಿದರು. ಪ್ರಾಥಮಿಕ ಶಾಲಾ ಸಿಬ್ಬಂದಿ, ಪ್ರೌಢಶಾಲಾ ಸಿಬ್ಬಂದಿ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.