ಕೋಲಾರ

ಅಪರಿಚಿತ ಗುಂಪು ದಾಳಿ, ಲಕ್ಷಾಂತರ ರು. ನಗದು ದೋಚಿ ಪರಾರಿ

Published On :

ಚಿಂತಾಮಣಿ: ಪೊಲೀಸರ ಸೋಗಿನಲ್ಲಿ ಬಂದ ಅಪರಿಚಿತ ಗುಂಪೊಂದು ಅಂದರ್‌ಬಾಹರ್ ಆಡುತ್ತಿದ್ದ ಜೂಜಕ್ಕಿಟ್ಟಿದ್ದ ಲಕ್ಷಾಂತರ ರು. ಹಣ ದೋಚಿ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದೂರನ್ನು ಸ್ವೀಕರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಘಟನೆ ವಿವರ: : ತಾಲೂಕಿನ ಚಿಂತಾಮಣಿ - ಮದನಪಲ್ಲಿ ರಸ್ತೆಯ ರೈಲ್ವೆ ಅಂಡರ್‌ಪಾಸ್ ಬಳಿ 23 ರಂದು ಸೋಮವಾರ ಸಂಜೆ  ತೋಪೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಟಾಟಾ ಸುಮೋ ವಾಹನದಲ್ಲಿ ಪೊಲೀಸರೆಂದು ಹೇಳಿ ದಾಳಿ ನಡೆಸಿ ಸುಮಾರು 3 ಲಕ್ಷ ರು. ನಗದು ಮತ್ತು ಆಡುತ್ತಿದ್ದವರ ಮೈಮೇಲಿದ್ದ ಚಿನ್ನದ ಕತ್ತಿನ ಸರ ಹಾಗೂ ಬೆಲೆ ಬಾಳುವ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿರುವ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದರೂ ಇಲ್ಲಿನ ಸ್ಥಳೀಯ ಪೊಲೀಸರು ಇದರ ಬಗ್ಗೆ ಇಲಾಖಾ ತನಿಖೆ ನಡೆಸದೇ ಇರುವ ಬಗ್ಗೆ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬಲ್ಲ ಮೂಲಗಳ ಪ್ರಕಾರ ತಾಲೂಕಿನ ಬಟ್ಲಹಳ್ಳಿ ಠಾಣೆಯ ಕೃಷ್ಣಪ್ಪ ಮತ್ತು ರಾಜಣ್ಣ ಎಂಬುವವರು ಜೂಜಾಟದಲ್ಲಿ ತೊಡಗಿದವರ ಮಾಹಿತಿ ನೀಡಿ ಅಪರಿಚಿತ ವ್ಯಕ್ತಿಗಳನ್ನು ದಾಳಿ ಮಾಡಲು ಸಂಚು ರೂಪಿಸಿರಬಹುದೆಂದು ಈ ಪ್ರದೇಶದ ಜನರು ಅಂತೆ ಕಂತೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ತಾಲೂಕಿನ ಕುರುಬೂರು ಗ್ರಾಮದ ಮಲ್ಲಿಕಾರ್ಜುನ ಗೌಡ ಎಂಬ ವ್ಯಕ್ತಿ 1.30 ಲಕ್ಷ ರು. ಗಳಷ್ಟು ನಿಖರವಾದ ಮಾಹಿತಿ ಇದ್ದು, ದೂರು ನೀಡಲು ಬಂದಂತಹ ಹಣ ಕಳೆದುಕೊಂಡ ದೂರುದಾರನ ಪಿರ್ಯಾದೆಯನ್ನು ಸ್ಥಳೀಯ ಪೊಲೀಸರು ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಡಿವೈಎಸ್‌ಪಿ ಸಾಹೇಬರನ್ನು ಘಟನೆ ಬಗ್ಗೆ ವಿಚಾರಿಸಿದಾಗ ತಮ್ಮ ಗಮನಕ್ಕೆ ಏನೂ ಬಂದಿಲ್ಲವೆಂದು ತಿಳಿಸಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.