ಅಧಿಕಾರಿಗಳ ವಿರುದ್ಧ ಸಿಇಓಗೆ ದೂರು ನೀಡಲು ಚಿಂತನೆ
ಕೋಲಾರ: ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಡಿ.23 ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಆಹ್ವಾನಿಸಿ ಕೂರಲು ಆಸನದ ವ್ಯವಸ್ಥೆ ಮಾಡದೆ ಅಪಮಾನ ಮಾಡಿರುವ ಕಾರ್ಯಕ್ರಮದ ಸಂಘಟಕರ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲು ಸಂಘದ ಮುಖಂಡರು ಚಿಂತನೆ ಮಾಡಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಸಂಘದ ಪದಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಪ್ರಭಾರ ಬಿಇಒ ರಾಮಚಂದ್ರರೆಡ್ಡಿ ಹಾಗೂ ಬಿ.ಆರ್.ಪಿ ಗೋಪಿನಾಥ್ ವಿರುದ್ಧ ಗುರುವಾರ ಜಿಪಂ ಸಿಇಓ ಅವರಿಗೆ ದೂರು ನೀಡುವ ಸಾಧ್ಯತೆ ಇದೆ.
ಡಿ.23 ರಂದು ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ 90 ಸಾವಿರ ರು. ಇಲಾಖೆಯಿಂದ ಬಿಡುಗಡೆ ಆಗಿದ್ದರೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಿಲ್ಲ, ಸ್ಪರ್ಧೆಗಳಿಗೆ ತಾಲೂಕಿನಿಂದ ಸುಮಾರು 1 ಸಾವಿರ ಮಕ್ಕಳು, ಪೋಷಕರು, 150ಕ್ಕೂ ಹೆಚ್ಚು ತೀರ್ಪುಗಾರರು ಬಂದಿದ್ದರು. ಇವರಿಗೆ ಆಸನಗಳ ವ್ಯವಸ್ಥೆ ಸರಿಯಾಗಿರಲಿಲ್ಲ, ವೇದಿಕೆಯ ಮೇಲೆ ಕೇವಲ 5 ಹಾಗೂ ಮಕ್ಕಳು ಹಾಗೂ ತೀರ್ಪುಗಾರರು ಕೂರಲು 20 ಕುರ್ಚಿಗಳನ್ನು ಹಾಕಿದ್ದರಿಂದ ಕಾರ್ಯಕ್ರಮ ಅಸ್ತವ್ಯಸ್ತಗೊಳ್ಳುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗ,ಇತ್ತೀಚೆಗೆ ನಡೆದ ಎಲ್ಲಾ ಕಾರ್ಯಕ್ರಮಗಳೂ ಬೇಕಾಬಿಟ್ಟಿಯಾಗಿ ನಡೆದಿದ್ದು ಇದಕ್ಕೆ ಡಿಡಿಪಿಐ ಮತ್ತು ಬಿಇಓ ಅವರ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ಮೇಲಿನ ಅಪಾರವಾದ ನಂಬಿಕೆಯೇ ಕಾರಣವೆಂದು ಆರೋಪಿಸಿ ದೂರು ನೀಡಲು ಮುಂದಾಗಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಗೆ ಕ್ಷೇತ್ರದ ಶಾಸಕರು ಗೈರು ಹಾಜರಾಗಿದ್ದರು, ಡಿಡಿಪಿಐ ಹಾಗೂ ಬಿಇಓ ಸಹ ಬಂದಿರಲಿಲ್ಲ, ಪ್ರಭಾರ ಬಿಇಓ ರಾಮಚಂದ್ರರೆಡ್ಡಿ ಹಾಗೂ ಬಿ.ಆರ್.ಪಿ ಗೋಪಿನಾಥ್ ಅವರುಗಳು ತಮಗಿಷ್ಟ ಬಂದಂತೆ ಕಾರ್ಯಕ್ರಮ ನಡೆಸಿ ಇಲಾಖೆಯ ಮಾನ ಮಾರ್ಯದೆ ಹರಾಜು ಹಾಕಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕಳೆದ ಎರಡು ತಿಂಗಳಿಂದ ಶಿಕ್ಷಕರಿಗೆ ವೇತನ ಇಲ್ಲದೆ ಸಮಸ್ಯೆಯಾಗಿದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಬಿಇಓ ರಜೆ ಹಾಕಿ ಹೋಗಿದ್ದಾರೆ, ಈ ಎಲ್ಲರದ ನಡುವೆ ಪ್ರತಿಭಾ ಕಾರಂಜಿಯನ್ನು ವ್ಯವಸ್ಥಿತವಾಗಿ ನಡೆಸದ ಅಧಿಕಾರಿಗಳಿಗೆ ಬುದ್ಧಿ ಹೇಳಿ ಮುಂದೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ನಿಗಾ ವಹಿಸಬೇಕೆಂದು ತಿಳಿಸಲಿದ್ದಾರೆನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

