ಬಾಗೇಪಲ್ಲಿ ಕುರುಬ ಸಂಘದ ಮಾಜಿ, ಹಾಲಿ ಅಧ್ಯಕ್ಷರ ಟೀಕಾಸ್ತ್ರ
ಬಾಗೇಪಲ್ಲಿ: ಸ್ಥಳೀಯ ಕುರುಬ ಸಂಘದ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷರ ನಡುವೆ ಮಾತಿನ ಟೀಕಾ ಸಮರ ನಡೆಯುತ್ತಿದ್ದು ವಿವಾದ ಸೃಷ್ಟಿಸಿದೆ.
ತಮ್ಮ ವಿರುದ್ಧ 9 ಕ್ರಿಮಿನಲ್ ಕೇಸ್ ದಾಖಲಾಗಿವೆ ಎಂದು ತಾಲೂಕು ಕುರುಬ ಸಂಘದ ಮಾಜಿ ಅಧ್ಯಕ್ಷ್ಯ ಹೆಚ್.ಎ.ನಾರಾಯಣಸ್ವಾಮಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ನನ್ನ ಮೇಲೆ ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಆರೋಪವನ್ನು ಸಾಬೀತುಪಡಿಸಿದರೂ ನಾನು ಈ ತಾಲೂಕನ್ನೇ ಬಿಟ್ಟು ಹೋಗುವುದಾಗಿ ತಾಲೂಕು ಕುರುಬ ಸಂಘದ ನೂತನ ಅಧ್ಯಕ್ಷ ಮುನಿಸ್ವಾಮಿ ಸವಾಲು ಹಾಕಿದ್ದಾರೆ.
ಹಿಂದಿನ ಅಧ್ಯಕ್ಷ ಹೆಚ್.ಎ. ನಾರಾಯಣಸ್ವಾಮಿ 13 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದು ಹಲವಾರು ಅವ್ಯವಹಾರ ನಡೆಸಿ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ತಾಲೂಕು ಕುರುಬ ಸಂಘದ ಸ್ವಯಂಘೋಷಿತ ಅಧ್ಯಕ್ಷ ಹೆಚ್.ಎ. ನಾರಾಯಣಸ್ವಾಮಿಯೇ ಹೊರತು ನಾನಲ್ಲ. ನನ್ನನ್ನು ಕುರುಬ ಸಂಘದ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಮತ್ತು ತಾಲೂಕು ಕುರುಬ ಸಂಘದ ಮುಖಂಡರ ಸಮ್ಮುಖದಲ್ಲಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಸಹಿಸದೇ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವುದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನೂತನ ಸಮಿತಿ ರಚನೆ ಬಗ್ಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಸಮಿತಿಗಳಿಂದ ಅನುಮೋದನೆ ಪಡೆದಿರುವಂತಹ ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ನನ್ನ ಮೇಲೆ 9 ಕ್ರಿಮಿನಲ್ ಕೇಸು ಇದೆ ಹೇಳಿ ಅಪಪ್ರಚಾರ ಮಾಡುತ್ತಿರುವವರು ಸಾಬೀತು ಮಾಡಿದಲ್ಲಿ ನಾನು ತಾಲೂಕು ಬಿಟ್ಟು ಹೋಗುತ್ತೇನೆ. ಇಲ್ಲದಿದ್ದಲ್ಲಿ ಅವರು ತಾಲೂಕನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪದಾಧಿಕಾರಿಗಳ ಪಟ್ಟಿ: ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಮಲ್ಲಪ್ಪ, ಕಾರ್ಯದರ್ಶಿ ಕೆ.ವಿ.ರಾಮಚಂದ್ರಪ್ಪ, ಖಜಾಂಚಿ-ಹೆಚ್.ವಿ.ಚಂದ್ರಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ. ಆದಿನಾರಾಯಣಪ್ಪ, ವಿ. ನಾರಾಯಣಸ್ವಾಮಿ. ಕಾರಕೂರಪ್ಪ, ಎಂ.ಎಸ್. ನಂಜುಂಡಪ್ಪ, ಎನ್. ಶ್ರೀನಿವಾಸ, ಡಿ.ಎಂ. ಬಾಬು, ಪಿ.ಆರ್. ಶಿವಪ್ಪ, ಎ.ಮಂಜುನಾಥ್, ಆರ್. ಶ್ರೀನಿವಾಸಪ್ಪ. ಎಂ.ಬಿ. ಅಮರನಾರಾಯಣ, ಕೆ.ಬಿ. ರವಣಪ್ಪ, ಕಾರಕೂರಪ್ಪ, ಶ್ರೀನಿವಾಸಗೌಡ, ಪ್ರಭಾಕರ್, ಶಿವಶಂಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಮುನಿಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

