ಕಾಲುಬಾಯಿ ರೋಗ; ಮಾಲಿಕರಿಗೆ ಪರಿಹಾರ ನೀಡಲು ಆಗ್ರಹ
ಕ.ಪ್ರ.ವಾರ್ತೆ ಮುಳಬಾಗಲು ಡಿ. 26
ತಾಲೂಕಿನಲ್ಲಿ ಕಾಲುಬಾಯಿ ಜ್ಜರದಿಂದ 700 ಕ್ಕೂ ಹೆಚ್ಚಿನ ಜಾನುವಾರುಗಳು ಸಾವಿಗೀಡಾಗಿದ್ದು ತಕ್ಷಣ ನಪರಿಹಾರ ನೀಡಲು ಮುಳಬಾಗಲು ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ತಾಲೂಕು ಅಧ್ಯಕ್ಷ ಎಚ್.ಕೋಡಿಹಳ್ಳಿ ನಾರಾಯಣರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ನ ರೈತಾಪಿಗಳು ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಕಾಲುಬಾಯಿ ಜ್ಜರದ ಕಾರಣವಾಗಿ ಸಾವಿಗೀಡಾದ ಜಾನುವಾರುಗಳಿಂದ ರೈತಾಪಿಗಳು ಅರ್ಥಿಕವಾಗಿ ತೊಂದರೆಗೀಡಾಗಿದ್ದಾರೆ, ರೈತಾಪಿಗಳಿಗೆ ಸರ್ಕಾರ ನೀಡಿದ ಭರವಸೆಯಂತೆ ಇಂದಿನವರೆವಿಗೂ ಒಂದು ರುಪಾಯಿ ಪರಿಹಾರ ಸಿಕ್ಕಿಲ್ಲವೆಂದು ಆರೋಪಿಸಿದ ಸಭೆ ಒಂದು ವಾರದಲ್ಲಿ ಪರಿಹಾರ ನೀಡದ ಪಕ್ಷದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳು(ಟಿಸಿ) ಸುಟ್ಟು ಹೋಗುತ್ತಿದ್ದು ತಾಲ್ಲೂಕಿನಲ್ಲಿರುವ ಎಲ್ಲಾ ಟಿಸಿಗಳಿಗೂ ದುರಸ್ತಿ ಮಾಡಿಸಬೇಕು, ವೈರಿಂಗ್ ಮಾಡಿಸಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟರೆ ಬೆಸ್ಕಾಂ ವತಿಯಿಂದ ಸಾಗಣೆಕೆ ಮಾಡಬೇಕು ಯಾವುದೇ ಕಾರಣಕ್ಕೂ ರೈತರಿಂದ ಹಣ ಪಡೆಯಬಾರದು, ಬೆಸ್ಕಾಂ ಕಾರಣವಾಗಿ ರೈತಾಪಿಗಳು ಬೆಳೆ ನಷ್ಟ ಉಂಟಾದರೇ ಬೆಸ್ಕಾಂ ಅದನ್ನು ಭರಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ವಕೀಲ ಮಹೇಂದ್ರಗೌಡ ಮಾಹಿತಿ ನೀಡಿದರು. ಬೆಸ್ಕಾಂ ಮತ್ತು ವಿದ್ಯುತ್ ಸಮಸ್ಯೆಗಳ ಕುರಿತು ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ್ ಭಾಸರಘಟ್ಟ ಮಾಹಿತಿ ನೀಡಿದರು. ಜಿಲ್ಲಾ ಕಿಸಾನ್ ಸಂಘ ಗೌರವಾಧ್ಯಕ್ಷ ಗೋವಿಂದಪ್ಪ, ಅಧ್ಯಕ್ಷ ಬಳಪನಹಳ್ಳಿ ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣಪ್ಪ, ಖಜಾಂಚಿ ಬೇತಮಂಗಲ ಗೋವಿಂದಪ್ಪ ಸಂಜೀವಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎ. ಅಪ್ಪಾಜಿಗೌಡ,ಅಧ್ಯಕ್ಷ ನಾರಾಯಣರೆಡ್ಡಿ, ಮುರುಕನಕುಂಟೆ ಗೋವಿಂದಯ್ಯ, ರಾಂಬಾಬು ಭಾಗವಹಿಸಿದ್ದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

