ಕೋಲಾರ

ಮಾನಸಿಕ ಆರೋಗ್ಯದಿಂದ ಸಮರ್ಥ ಕೆಲಸ ಸಾಧ್ಯ: ಡಿಸಿ

Published On :

ಚಿಕ್ಕಬಳ್ಳಾಪುರ: ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ 2013ನೇ ಸಾಲಿನ ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಂತಿ ಸುವ್ಯವಸ್ಥೆ, ಕಾನೂನು ಪರಿಪಾಲನೆಯಾಗುವಲ್ಲಿ ಪೊಲೀಸರ ಕರ್ತವ್ಯ ಮಹತ್ತರವಾದುದು. ಪೊಲೀಸರು ಅನೇಕ ಬಾರಿ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಒತ್ತು ಕೊಡಬೇಕೆಂದು ಸಲಹೆ ನೀಡಿದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುವುದರ ಜತೆಗೆ ಛಲವನ್ನು ಮೂಢಿಸುತ್ತದೆ. ಇದರಿಂದ ಪೊಲೀಸರು ಹೆಚ್ಚಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕೆಂದರು.
ಎಸ್ಪಿ ಎನ್. ಶಿವಪ್ರಸಾದ್ ಮಾತನಾಡಿ, ಪ್ರತಿ ವರ್ಷ ಪೊಲೀಸರಿಗಾಗಿ ಕ್ರೀಡಾಕೂಟಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಂಡು ಬರಲಾಗುತ್ತಿದೆ. ಇಂತಹ ಕ್ರೀಡಾಕೂಟಗಳು ಪೊಲೀಸರಿಗೆ ಒತ್ತಡವನ್ನು ದೂರ ಮಾಡುತ್ತದೆ, ಅಲ್ಲದೇ ಪ್ರೋತ್ಸಾಹವನ್ನು ನೀಡುತ್ತದೆ ಎಂದು ತಿಳಿಸಿದರು.  ಡಿ.ವೈ.ಎಸ್.ಪಿ. ಸಣ್ಣ ತಿಮ್ಮಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.
ಗಮನ ಸೆಳೆದ ಸ್ಪರ್ಧಿಗಳು: ಸದಾ ಖಾಕಿ ಸಮವಸ್ತ್ರವನ್ನು ಧರಿಸಿಕೊಂಡು ಮುಂಗೋಪದಲ್ಲಿಯೇ ಕರ್ತವ್ಯ ನಿರ್ವಹಿಸುವ ಪೊಲೀಸರು ನಗುಮೊಗದ ಜತೆಗೆ ಪೈಪೋಟಿಯಲ್ಲಿ ಕ್ರೀಡಾಕೂಟದಲ್ಲಿ ಗಮನ ಸೆಳೆದರು.
ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ ನಲ್ಲಿ ಪೊಲೀಸರಿಗಾಗಿ ಕ್ರೀಡೆಗಳನ್ನು ಕೈಗೊಳ್ಳಲಾಯಿತು.ಪೇದೆಗಳು, ಮುಖ್ಯ ಪೇದೆಗಳು, ಸಬ್‌ಇನ್ಸ್‌ಪೆಕ್ಟರುಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಕ್ರೀಡಾ ಉತ್ಸಾಹದಲ್ಲಿ ಕಂಡು ಬಂದರು. ಬಹುಮಾನವನ್ನು ಗೆಲ್ಲಬೇಕೆಂಬ ಛಲದಲ್ಲಿ ಸ್ಪರ್ಧೆಗಿಳಿದು ತಮ್ಮ ಎದುರಾಳಿಗೆ ಪೈಪೋಟಿ ನೀಡಿದರು.ಇದರಿಂದ ಠಾಣೆಯಿಂದ ಠಾಣೆಗೆ ಸ್ಪರ್ಧೆ ಜೋರಾಗಿತ್ತು. ಮತ್ತೊಂದೆಡೆ ವಿಜೇತರನ್ನು ಬೆಂಬಲಿಗರು ಎತ್ತಿಕೊಂಡು ಕುಣಿದಾಡಿದರು. ಶುಕ್ರವಾರ ಓಟ, ಡಿಸ್ಕಸ್ ಥ್ರೋ ಸೇರಿದಂತೆ ವಿವಿಧ ಕ್ರೀಡೆಗಳನ್ನು ಕೈಗೊಳ್ಳಲಾಗಿದ್ದು ಶನಿವಾರ ಮತ್ತು ಭಾನುವಾರ ಸಹ ಕ್ರೀಡಾಕೂಟ ನಡೆಯಲಿದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.