ಕೋಲಾರ

ಶಾಶ್ವತ ನೀರಾವರಿ ಕಲ್ಪಿಸದಿದ್ದರೆ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ

Published On :

ಬಂಗಾರಪೇಟೆ: ಐದು ವರ್ಷದೊಳಗೆ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸದಿದ್ದರೆ ನಾನು ಮುಂದಿನ ವಿಧಾನಸಭೆ ಚುನಾವಣೆಗೆ ಸ್ವರ್ದಿಸುವುದಿಲ್ಲ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಶಪಥ ಮಾಡಿದರು.
ತಾಲೂಕಿನಲ್ಲಿ ಕೈಗೊಂಡಿರುವ ಹಳ್ಳಿಗೆ ನಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಶಾಸಕರು, ಈ ಹಿಂದೆ ಕ್ಷೇತ್ರವನ್ನು ಆಳಿದ ಹಲವು ಮಂದಿ ಶಾಸಕರು ಚುನಾವಣೆ ವೇಳೆ ಮಾತ್ರ ಗ್ರಾಮಗಳಿಗೆ ಬಂದು ಮತ ಪಡೆಯಲು ಸುಳ್ಳು ಭರವಸೆ ನೀಡಿ ನಂತರ ಮತ್ತೆ ಇತ್ತ ಮುಖ ಹಾಕುತ್ತಿರಲಿಲ್ಲ, ಆದ್ದರಿಂದ ಶಾಶ್ವತ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದವು. ನಾನು ಯಾವುದೇ ಅಧಿಕಾರದ ವ್ಯಾಮೋಹ ಮತ್ತು ಹಣ ಸಂಪಾದಿಸಲು ರಾಜಕೀಯಕ್ಕೆ ಬಂದಿಲ್ಲ, ಬದಲಾಗಿ ಗ್ರಾಮೀಣ ಜನರ ಸೇವೆ ಮಾಡಲು ಬಂದಿರುವ ಬಂದಿರುವ ಕೆಲಸ ಮಾಡಿಯೇ ತೀರುವುದಾಗಿ ತಿಳಿಸಿದರು.
ಶಾಸಕರು ಭೇಟಿ ನೀಡಿದ ಪ್ರತಿ ಗ್ರಾಮದಲ್ಲಿಯೂ ಕುಡಿಯುವ ನೀರು, ರಸ್ತೆ, ದೇವಸ್ಥಾನಕ್ಕೆ ಹಣ, ದಲಿತರ ಕಾಲೋನಿಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಅಲ್ಲದೆ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿರುವ ಉದ್ದೇಶ ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಕೂಲಿ ಕಾರ್ಮಿಕರು ಕೂಲಿಗಾಗಿ ವಲಸೆ ಹೋಗದೆ ಅವರ ಸ್ಥಳದಲ್ಲೇ ಕೂಲಿ ಸಿಕ್ಕಿ ಅವರೂ ಸ್ವಾವಲಂಬಿಗಳಾಗಿ ಜೀವಿಸಲು ಜಾರಿಗೆ ತಂದಿದೆ. ಇದನ್ನು ಕೂಲಿ ಕಾರ್ಮಿಕರು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ತಾಪಂ ಇಒ ಕೆ.ಎಸ್ .ಭಟ್, ಪಂಚಾಯ್ತಿ ಅಧ್ಯಕ್ಷ ಜುಂಜನಹಳ್ಳಿ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಎಸ್.ಎಂ. ಗೋಪಾಲ್, ತಿಮ್ಮರಾಯಪ್ಪ, ಬಾಲಪ್ಪ, ವೆಂಕಟೇಶಪ್ಪ,ಪಿಡಿಒ ಲೋಕೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.