ಕೋಲಾರ

ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ 2 ಬೋನಸ್

Published On :

ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ.
ಜನವರಿ 1ರಿಂದ ಈ ನಾಲ್ಕು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ಹೆಚ್ಚಳವಾಗಲಿದೆ. ಇದರಿಂದಾಗಿ ಸಾಮಾನ್ಯ ಹಾಲಿನ ಮಾರಾಟ ದರಕ್ಕಿಂತ ಹೆಚ್ಚು ದರ ಹಾಲು ಉತ್ಪಾದಕರಿಗೆ ಸಿಗಲಿದೆ.
ಪ್ರಸ್ತುತ ಹಾಲು ಒಕ್ಕೂಟಗಳಿಂದ ಈ ಜಿಲ್ಲೆಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ 25 ನೀಡಲಾಗುತ್ತಿತ್ತು. ಜನವರಿ 1ರಿಂದ ಇನ್ನೂ 2 ಹೆಚ್ಚಳ ಅಂದರೆ 27 ಸಿಗಲಿದೆ. ಇದರ ಜತೆಗೆ ಸರ್ಕಾರ ನೀಡುವ ಪ್ರೋತ್ಸಾಹಧನ 4 ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 31 ಸಿಗುತ್ತದೆ. ಆದರೆ, ಸಾಮಾನ್ಯ ಹಾಲಿನ ಮಾರಾಟ ದರ 30.
ಕೆಎಂಎಫ್ ಅಂಗಸಂಸ್ಥೆಗಳಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬೆಂಗಳೂರು ಡೇರಿ) ಮತ್ತು ಕೋಲಾರ ಹಾಲು ಒಕ್ಕೂಟ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 2 ಹೆಚ್ಚಳ ಮಾಡಲು ತೀರ್ಮಾನಿಸಿದೆ. ಆದರೆ, ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ.
ಕಳೆದ ಸೆಪ್ಟೆಂಬರ್ನಲ್ಲಿ ಹಾಲು ಮಾರಾಟ ದರವನ್ನು 2 ಹೆಚ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಹಕರಿಂದ ಲಭಿಸುವ ಹೆಚ್ಚುವರಿ ಮೊತ್ತವನ್ನು ಹಾಲು ಒಕ್ಕೂಟಗಳ ಮೂಲಸೌಕರ್ಯ ಸುಧಾರಣೆ, ಸಾಲ ಮರುಪಾವತಿಗಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಇದರಿಂದ ಹಾಲು ಮಾರಾಟ ದರ ಹೆಚ್ಚಳವಾಗಿದ್ದರೂ ಅದರಿಂದ ರೈತರಿಗೆ ಅನುಕೂಲ ಆಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮೊತ್ತ ಬಳಸಿ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುವ ಹಾಲು ಒಕ್ಕೂಟಗಳು ಉಳಿದ ಮೊತ್ತವನ್ನು ರೈತರಿಗೆ ಪಾವತಿಸಬೇಕಿತ್ತು. ಅದರಂತೆ ಜನವರಿ 1ರಿಂದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ಹೆಚ್ಚುವರಿಯಾಗಿ ನೀಡಲು ಎರಡೂ ಹಾಲು ಒಕ್ಕೂಟಗಳು ಮುಂದಾಗಿವೆ.
ಮಾರಾಟ ದರದಲ್ಲಿ ಬದಲಾವಣೆ ಇಲ್ಲ: ಸೆಪ್ಟೆಂಬರ್ನಲ್ಲಿ ಹಾಲು ಮಾರಾಟ ದರ ಏರಿಸಿದ್ದು, ಆ ಸಂದರ್ಭದಲ್ಲಿ ರೈತರಿಗೆ ಪಾಲು ನೀಡದ ಕಾರಣ ಇದೀಗ ರೈತರಿಗೆ ಆ ಮೊತ್ತವನ್ನು ಪಾವತಿಸಲಾಗುತ್ತಿದೆ. ಹೀಗಾಗಿ ಹಾಲು ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹಾಲು ಒಕ್ಕೂಟಗಳು ಸ್ಪಷ್ಟಪಡಿಸಿವೆ. ಹಾಲು ಖರೀದಿ ದರ ಹೆಚ್ಚಿಸುತ್ತಿರುವುದರಿಂದ ಈ ಭಾಗದ 9 ಲಕ್ಷ ಹಾಲು ಉತ್ಪಾದಕರಿಗೆ ಪ್ರಯೋಜನವಾಗಲಿದೆ. ಸೋಮವಾರ ದರ ಏರಿಕೆ ಕುರಿತು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಒಕ್ಕೂಟದ ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.