ಕೋಲಾರ

ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಫಲಿತಾಂಶ; ಡಾ. ಸುದರ್ಶನ್

Published On :

ಗೌರಿಬಿದನೂರು: ವಿದ್ಯಾರ್ಥಿ ದೆಸೆಯಿಂದಲೇ ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಫಲಿತಾಂಶವನ್ನು ಸಾಧಿಸಲು ಸಾಧ್ಯ ಎಂದು ಆಚಾರ್ಯ ಕಾಲೇಜಿನ ಉಪನ್ಯಾಸಕ ಡಾ. ಸುದರ್ಶನ್ ಅಭಿಪ್ರಾಯಪಟ್ಟರು. ಅವರು ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ವಿದ್ಯಾನಗರದಲ್ಲಿ ನ ಮಾಜಿ ಯೋಧರಾದ ಟಿ.ಎಂ. ತುಕಾರಾಂರಾವ್ ಅವರ ಪುತ್ರಿ ಕುಮಾರಿ ಡಾ. ಕಿರಣ.ಟಿ ಅವರಿಗೆ ಅಭಿನಂಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಯೋಧ ತುಕಾರಾಂರಾವ್ ಪುತ್ರಿಯಾದ ಕುಮಾರಿ ಡಾ. ಕಿರಣ್. ಟಿ. ಎಂಬಿಬಿಎಸ್, ಎಂಎಸ್ (ಒಬಿಜಿ)ಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ2013ನೇ ಮೇ ತಿಂಗಳಲ್ಲಿ ನಡೆದ ಮಾಸ್ಟರ್ ಆಫ್ ಸರ್ಜರಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದು, ಇವರನ್ನು ಅಭಿನಂದಿಸಿ ತಾಲೂಕು ಮಾಜಿ ಸೈನಿಕರ ಸಂಘ ಸನ್ಮಾನಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು. ಗೌರವಾಧ್ಯಕ್ಷರಾದ ಕ್ಯಾಪ್ಟನ್ ಸತೀಶ್ ಮಾತನಾಡಿ ಸೈನಿಕರು ತಮ್ಮ ಕರ್ತವ್ಯದಲ್ಲಿ ಸಂಸಾರದೊಂದಿಗೆ ಊರೂರು ತಿರುಗುವುದೇ ಹೆಚ್ಚು, ಅವರ ಮಕ್ಕಳ ವ್ಯಾಸಂಗದ ಕಡೆ ಗಮನಹರಿಸಬೇಕೆಂದರು. ತಾಲೂಕು ಅಧ್ಯಕ್ಷ ಅಶ್ವತ್ಥನಾರಾಯಣ ಮಾತನಾಡಿದರು. ಮಾಜಿ ಸೈನಿಕರಾದ ತುಕಾರಾಂರಾವ್ ಪತ್ನಿ ಮಂಜುಳ, ಅಶ್ವತ್ಥನಾರಾಯಣ ಹಾಗೂ ಅವರ ಪತ್ನಿ ಪದ್ಮಾವತಿ, ಭೂಪಾಲರೆಡ್ಡಿ, ಶ್ರೀನಿವಾಸರೆಡ್ಡಿ, ರಮೇಶ್, ನಾರಾಯಣಪ್ಪ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.