ಕುವೆಂಪು ಯುಗದ-ಜಗದ ಕವಿಗಳಾಗಿದ್ದರು; ಮಾವೆಂ. ತಮ್ಮಯ್ಯ
ಮಾಲೂರು: ರಾಷ್ಟ್ರಕವಿ ಕುವೆಂಪು ಕೇವಲ ಕವಿತೆ ಬರೆಯುವ ಕವಿಯಾಗಿರಲಿಲ್ಲ. ಅವರು ಯುಗದ-ಜಗದ ಕವಿಗಳಾಗಿ ವಿಶ್ವಮಾನವರಾಗಿ ಪ್ರಖ್ಯಾತಿಯಾದವರು ಎಂದು ವಿಮರ್ಶಕ ಮಾ.ವೆಂ. ತಮ್ಮಯ್ಯ ಹೇಳಿದರು.
ಅವರು ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಪ್ರಗತಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತ ಗುಡಿ ಮಸೀದಿ ಬಿಟ್ಟು ಹೊರಬನ್ನಿ ವಿಶ್ವ ಮಾನವರಾಗಿ ಅಂತ ಹೇಳಿದ ನಾಡೋಜ ಕುವೆಂಪುರವರ ಜಾಗವನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಆಕ್ರಮಿಸುವುದು ಸಾಧ್ಯವಿಲ್ಲ ಎಂದ ತಮ್ಮಯ್ಯ ಕುವೆಂಪು ರವರಿಗೆ ಕುವೆಂಪು ಸಾಟಿ ಎಂದರು. ಅವರ ಕಾದಂಬರಿ, ಕವನ ಸಂಕಲನಗಳನ್ನು ಇಂದಿನ ವಿದ್ಯಾರ್ಥಿಗಳು ಅಭ್ಯಸಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವೇದಿಕೆ ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ ಆನಂದ್ ಹಾಗೂ ಎಸ್ಐ ಮಂಜುನಾಥ್ ಮಾತನಾಡಿದರು. ಸಮಾರಂಭಕ್ಕೂ ಮೊದಲು ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಸದಸ್ಯ ಎಂ. ರಾಮಮೂರ್ತಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ, ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಲಕ್ಕೂರು ನಾಗರಾಜ್, ತಾಲೂಕು ಅಧ್ಯಕ್ಷ ನಟೇಶ್, ಚಂದ್ರಶೇಖ ಪ್ರಗತಿ ಕಾಲೇಜಿನ ವ್ಯವಸ್ಥಾಪಕ ರವಿ ಜೆ. ರೆಡ್ಡಿ, ವಿಜಿ, ಲಕ್ಷ್ಮೀಕಾಂತ, ಕಾರ್ತಿಕ್, ಆಂಜಿ, ಸೀತಾರ, ಅರುಣ, ಶ್ರೀನಾಥ್, ಮಂಜು, ಗಿರೀಶ್, ರಾಜೇಶ್, ಅರುಣ್ಸಿಂಗ್, ಶ್ವೇತಾ, ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

