ಕೋಲಾರ

'ಪಂಚೇಂದ್ರಿಯಗಳ ಹತೋಟಿಯಿಂದ ಮುಕ್ತಿ ಮಾರ್ಗದೆಡೆಗೆ ಸಾಗಲು ಸಾಧ್ಯ'

Published On :

ಗೌರಿಬಿದನೂರು: ದೇಹದಲ್ಲಿನ ಪಂಚೇಂದ್ರಿಯಗಳನ್ನು ಹತೋಟಿಗೆ ತಂದಾಗ ಮಾತ್ರ ಮನುಷ್ಯನು ಮುಕ್ತಿ ಮಾರ್ಗದೆಡೆ ಸಾಗಲು ಸಾಧ್ಯ ಎಂದು ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾ ಚಾರ್ಯವರ್ಯ ಮಹಾಸ್ವಾಮೀಜಿಗಳು ಶ್ರೀ ಕ್ಷೇತ್ರ ಕನಕಗಿರಿ ಅಭಿಪ್ರಾಯಪಟ್ಟರು.
ಅವರು ತಾಲೂಕು ಗುಂಡ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಭಗವಾನ್ 1008ನೇ ಶೀತಲನಾಥ ತೀರ್ಥಂಕರ ಹಾಗೂ ಗುಟ್ಟೆ ಬ್ರಹ್ಮದೇವರ27ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ದೇಶದಲ್ಲಿ ದೇವಾಲಯಗಳು ಮತ್ತು ಪುಣ್ಯ ಸ್ಥಳಗಳನ್ನು ಉಳಿಸಿ ಬೆಳೆಸುವ ಕಾಯಕ ಆಗಬೇಕಿದೆ ಎಂದು ತಿಳಿಸಿದರು.
ಉಪಸಭಾಪತಿ ಎನ್.ಹೆಚ್. ಶಿವಶಂಕರರೆಡ್ಡಿ ಮಾತನಾಡುತ್ತ ಜೈನ ಧರ್ಮ ಪುರಾತನವಾಗಿದ್ದು ಈ ಸಮುದಾಯದವರು ಮೂಲತಃ ಸರಳ ಜೀವಿಗಳು ಶಾಂತಿ ಪ್ರೀಯರು ಸ್ನೇಹ ಜೀವಿಗಳು ಅನ್ಯ ಧರ್ಮದವರನ್ನು ಗೌರವಿಸುವ ಜನ ಹಾಗೂ ಈ ಧ್ಛ್ಗದವರು ಪರಾವಲಂಬಿರಾಗದೆ ಸ್ವಾಭಿಮಾನದಿಂದ ಬದುಕುವ ಜನ ಎಂದು ಶ್ಲಾಘಿಸಿದರು. ಈ ಭಾಗದ ದೇವಾಲಯಕ್ಕೆ ಸ್ಞಜ್ಗರದಿಂದ ಅನುದಾನಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಮುಖ್ಯವಾಗಿ ದೇವಾಲಯಕ್ಕೆ ರಸ್ತೆ, ಕುಡಿಯುವ ನೀರು, ಇನ್ನಿತರ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಮಾಡಿಸುವಾಗಿ ತಿಳಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ನೀಲಾ ಮಂಜುನಾಥ್ ಐ.ಎ.ಎಸ್ ಮಾತನಾಡುತ್ತ ನೈಸರ್ಗಿಕ ಮತ್ತು ಧಾಮಿಕ ಪರಂಪರೆ ಉಳಿಸಿ ಬೆಳೆಸುವ ಕಾಯಕವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು. ಟ್ರಸ್ಟ್ ಅಧ್ಯಕ್ಷ ಪ್ರಸನ್ನಯ್ಯ ಜಿ.ಪಂ. ರಾಘವೇಂದ್ರ ಹನುಮಾನ್, ಜಿತೇಂದ್ರ ಕುಮಾರ್ ಅಧ್ಯಕ್ಷರು ದಿಗಂಬರ ಜೈನ್ ಅಸೋಸಿಯೇಶನ್ ಬೆಂಗಳೂರು, ಕೆ.ಆರ್, ನಿರಂಜನ್,ಬ್ರಹ್ಮದೇವಯ್ಯ, ಭಾಗವಹಿಸಿದ್ದರು. ಜೈನ ಗಣ್ಯರನ್ನು ಸನ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.