ಕೋಲಾರ

ಕರಿಬಸವಯ್ಯಗೆ ಗೀತನಮನ

Published On :

ಕೋಲಾರ: ಜಯ ಕರ್ನಾಟಕ ಸಂಘಟನೆಯಿಂದ ಭಾನುವಾರ ಹಾಸ್ಯ ನಟ ದಿ. ಕರಿಬಸವಯ್ಯನವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನಗರದ ಸರ್ಕಾರಿ ಬಸ್‌ನಿಲ್ದಾಣ ಸಮೀಪ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಕಾರ್ಯಕರ್ತರು ದಿ.ಕರಿಬಸವಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿಯನ್ನು ಬೆಳಗಿಸಿ ಒಂದು ನಿಮಿಷ ಕಾಲ ಮೌನ ಆಚರಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು. ಇದೇ ಸಂದರ್ಭದಲ್ಲಿ ಜನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಮತ್ತು ತಂಡದಿಂದ ಗೀತಗಾಯನ ನಡೆಸಿಕೊಡಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಆರ್. ತ್ಯಾಗರಾಜು ಮಾತನಾಡಿ, ಕರ್ನಾಟಕ ರಾಜ್ಯವು ಕಂಡಂತಹ ಅಪ್ರತಿಮ ಚಲನಚಿತ್ರ ಹಾಸ್ಯ ಕಲಾವಿದರಲ್ಲಿ ಕರಿಬಸವಯ್ಯ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು. ಕೀಲುಕೋಟೆ ಅಂಜನಪ್ಪ, ಎನ್. ಮಂಜುನಾಥ್, ಗಾಂಧಿನಗರ ರಾಜಣ್ಣ, ಕಲಾವಿದ ವಿಷ್ಣು, ಜನ್ನಘಟ್ಟ ಕೃಷ್ಣಮೂರ್ತಿ, ಎಂ. ವೆಂಕಟಪ್ಪ,  ಎಸ್.ಆರ್. ನಾರಾಯಣಸ್ವಾಮಿ, ಉಮಾಶಂಕರ್,  ಎಸ್. ರಾಮಚಂದ್ರಯ್ಯ, ನಾಗಸುಂದರ್, ಬಂಬೂಬಜಾರ್ ಮಂಜು, ಐಸ್. ನಾಗರಾಜ್, ಕೀಲುಕೋಟೆ ಮಂಜು, ಗಂಗಾಧರ್.ಆರ್. ಹೊಲ್ಲಂಬಳ್ಳಿ ಚಂದ್ರಶೇಖರ್ (ಶಂಕರ್), ಕೂರಗಂಡಹಳ್ಳಿ ಕೆ.ಆರ್. ಕೃಷ್ಣೇಗೌಡ, ಹೆಚ್.ಆರ್. ರಾಜೇಂದ್ರ,  ಬಾಲಕೃಷ್ಣಪ್ಪ, ನರಸಿಂಗ್, ಶ್ರೀನಿವಾಸ್, ವೆಂಕಟೇಶ್, ಶ್ರೀರಾಂ, ವಿಭೂತಿಪುರ ನಾರಾಯಣಸ್ವಾಮಿ, ಅರ್ಜುನ್  ಇದ್ದರು.
ಕೆಇಎಸ್ ಶಾಲೆಯಲ್ಲಿ ಸ್ನೇಹ ಸಮ್ಮಿಲನ
ಚಿಂತಾಮಣಿ: ಶ್ರೀ ಕ್ಷೇತ್ರ ಕೈವಾರದಲ್ಲಿನ ಕೆಇಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1999 ನೇ ಸಾಲಿನ 7ನೇ ತರಗತಿಯ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಡಗರ ಸಂಭ್ರಮದಿಂದ ಹಿಂದೆ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕವೃಂದದ ನಡುವೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ನಂಜುಂಡಪ್ಪ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಕೈವಾರ ಎನ್.ಶ್ರೀನಿವಾಸ ಭಾಗವಹಿಸಿದ್ದರು. ಶಿಕ್ಷಕ ಮಂಜುನಾಥ, ಗೋಪಿನಾಥ್, ಟಿ.ಸಿ.ನಾರಾಯಣಸ್ವಾಮಿ, ಬಿ.ಪಿ.ಕೃಷ್ಣಪ್ಪ, ಆರ್.ಲಕ್ಷ್ಮಿನಾರಾಯಣಶೆಟ್ಟಿ ಭಾಗವಹಿಸಿದ್ದರು. ಟಿ.ವಿ.ಪ್ರಮೋದ್, ವಿದ್ಯುತ್ ಅಭಿಯಂತರ ಉದಯ್ ಕಿರಣ್, ಪೇರ್‌ಪಾಷ, ವಕೀಲೆ ಜಾನಕಿ, ಆರಕ್ಷಕ ರವಿ, ವ್ಯಾಪಾರಸ್ಥ ಕೆ.ಎನ್.ಮಂಜುನಾಥ, ಶಿಕ್ಷಕಿ ಮಮತ ಮತ್ತಿತರರು ಶಾಲೆಗೆ ವಿವಿಧ ನೆನಪಿನ ಕಾಣಿಕೆಗಳ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.