ಶ್ರೀಮನ್ಮಾಧವತೀರ್ಥ ಸಂಸ್ಥಾನದಲ್ಲಿ ಕೋಟಿ ವೆಚ್ಚದಲ್ಲಿ ವೀರರಾಮದೇವರ ದೇಗುಲ ಸಿದ್ಧ
ಕೋಲಾರ: ತಾಲೂಕಿನ ತಂಬಿಹಳ್ಳಿಯ ಪುರಾಣ ಪ್ರಸಿದ್ಧ ಶ್ರೀಮನ್ಮಾಧವತೀರ್ಥ ಮೂಲ ಸಂಸ್ಥಾನದಲ್ಲಿ ವೀರರಾಮದೇವರ ನಿತ್ಯಪೂಜೆಗಾಗಿ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಸುಂದರವಾದ ಪೂಜಾ ಮಂದಿರ ಕಾವ್ಯಧಾಮದ ಉದ್ಘಾಟನೆ ಇದೇ ಫೆ.13 ರಂದು ನೆರವೇರಲಿದೆ ಎಂದು ಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾಸಾಗರ ಮಾಧವತೀರ್ಥರು ತಿಳಿಸಿದರು.
ಅವರು ಗುರುವಾರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವಾಲಯದ ಉದ್ಘಾಟನೆ ಅಂದು ಬೆಳಿಗ್ಗೆ 7 ಗಂಟೆಗೆ ನೆರವೇರಲಿದ್ದು ಭರತ ಖಂಡದ ಪವಿತ್ರ ನದಿಗಳಿಂದ ತಂದ ಮರಳು, ದ್ವಾರಕೆಯ ಗೋಪಿಚಂದನ, 1108 ಚಕ್ರಾಂಕಿತಗಳು, 12 ಸಾಲಿಗ್ರಾಮಗಳೊಂದಿಗೆ ವೀರರಾಮ ದೇವರಿಗೆ ಪ್ರಥಮ ಪೂಜೆ ಸಲ್ಲಿಸಲಾಗುವುದೆಂದು ವಿವರಿಸಿದರು.
ಶ್ರೀ ವಿಜಯಮಾಧವತೀರ್ಥರ ಕನಸು ಸಾಕಾರಗೊಳಿಸಲು ಈ ಹಿಂದಿನ ಶ್ರೀ ಪ್ರಸನ್ನಶೂರ ಮಾಧವತೀರ್ಥರು ದಶಕದ ಹಿಂದೆ ಪೂಜಾಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದು 2011 ಮೇ 8ರಂದು ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿ ಈಗ ಕಾಮಗಾರಿ ಪೂರ್ಣಗೊಂಡಿದ್ದು ಇನ್ನು ಮುಂದೆ ಭಕ್ತರಿಗೆ ವೀರರಾಮದೇವರ ದರ್ಶನ ನಿರಂತರವಾಗಿ ಸಿಗಲಿದೆ ಎಂದರು.
ಚನ್ನೈನ ಅಡಿಯಾರ್ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದವರು 8.50ಲಕ್ಷ ರು. ವೆಚ್ಚದಲ್ಲಿ ದಶಾವತಾರ ವರ್ಣನೆಯ ಸುಂದರ ಸಿಂಹದ್ವಾರ ನಿರ್ಮಿಸಿ ಕೊಟ್ಟಿದ್ದಾರೆ, ಆಂಧ್ರಪ್ರದೇಶದ ಶಿಲ್ಪಿಗಳು ಕಾವ್ಯಧಾಮದ ಒಳಾವರಣವನ್ನು ರಾಮಾಯಣದ ವರ್ಣರಂಜಿತ ಚಿತ್ರಗಳ ಮೂಲಕ ಚಂದಗೊಳಿಸಿದ್ದಾರೆ. ಪ್ರತಿ ಚಿತ್ರಕ್ಕೂ ಪೂರಕವಾಗಿ ತಾವು ಕನ್ನಡದಲ್ಲಿ ರಚಿಸಿರುವ ಕವಿತೆಗಳನ್ನು ಬರೆಸಲಾಗಿದೆ. ದೇವಾಲಯದ ನಾಲ್ಕು ಮೂಲೆಗಳಲ್ಲಿ ಗದಾಪಾಣಿ ಭೀಮಸೇನ, ಗರುಡವಾಹನ ನಾರಾಯಣ, ವೀರಬಾಹು ಹನುಮಾನ್ಮ್ತ್ತು ಮಧ್ವಾಚಾರ್ಯರ ವಿಗ್ರಹಗಳು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
ದೇವಮೂಲೆಯಲ್ಲಿ ವಾಸ್ತುದೋಷ ಪರಿಹಾರದ ಸಲುವಾಗಿ ನಿಲ್ಲಿಸಿರುವ ಸ್ತಂಭದಲ್ಲಿ ಕೂರ್ಮ, ಮತ್ಸ್ಯ, ನಾರಾಯಣ, ಗೋವರ್ಧನಗಿರಿಧಾರಿಯ ಪ್ರತಿಮೆಗಳನ್ನು ಬಿಂಬಿಸಲಾಗಿದೆ. ಕಾವ್ಯಧಾಮದ ಪ್ರೇರಕ, ನಿರ್ಮಾಪಕ ಶಕ್ತಿಯೆಲ್ಲ ವೀರರಾಮ ದೇವರೇ ಆಗಿರುವುದರಿಂದ ಕಟ್ಟಡ ತಲೆಯೆತ್ತಲು ತಾವಾಗಿಯೇ ಮುಂದೆ ಬಂದು ನೆರವಾದವರನ್ನು ಉಲ್ಲೇಖಿಸಲು ಹೋಗಿಲ್ಲ.
ಶ್ರೀಗಳು ಸಂಸ್ಥಾನದಲ್ಲಿದ್ದಾಗ ನೂತನ ಮಂದಿರದಲ್ಲಿ ಸಂಸ್ಥಾನ ಪೂಜೆ ಸಲ್ಲಿಸಿದ ಬಳಿಕ ವಿಗ್ರಹವನ್ನು ಜೋಪಾನವಾಗಿಡಲು ಸುಭದ್ರವಾದ ಶ್ರೀರಾಮದೇವರ ಅಂತ-ಗೃಹವನ್ನು ಸಿದ್ದಪಡಿಸಿದೆ. ಏಕಕಾಲಕ್ಕೆ ವಿವಿಧ ಮಠಗಳ ಮೂವರು ಪೀಠಾಧಿಪತಿಗಳು ತಮ್ಮ ಆರಾಧ್ಯದೇವರಿಗೆ ಪೂಜೆ ಸಲ್ಲಿಸಲು ಅನುವಾಗುವಂತೆ ಮೂಲ ವೀರರಾಮ ಪೀಠ, ವ್ಯಾಸಪೀಠ, ದಾಸಪೀಠಗಳನ್ನು ನಿರ್ಮಿಸಿದೆ. ವೇದಿಕೆ ಎಡಭಾಗದಲ್ಲಿ ವೀರ ರಾಮಚಂದ್ರ ಸ್ತುತಿ ನವರತ್ನಮಾಲ ಮತ್ತು ಬಲಭಾಗದಲ್ಲಿ ಎಷ್ಟು ಚೆಲುವನೋ ರಾಮ ಕೀರ್ತನೆಯನ್ನು ಕೆತ್ತಿಸಲಾಗಿದ್ದು ಶ್ರೀ ಮಠದಲ್ಲಿ ಈ ತಿಂಗಳ 11ರಿಂದ 25ರವರೆಗೆ ಮೂಲ ವೀರರಾಮ ದೇವರ ಕಾವ್ಯಧಾಮ ಪ್ರವೇಶ, ಮಧ್ವನವಮಿ, ಮಹಾಭಾರತ ವ್ಯಾಸಪೌರ್ಣಿಮಾ ಮಹೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
11ರಂದು ಪಲಿಮಾರು ಮಠದ ಶ್ರೀಗಳು, 23ರಂದು ಮಂತ್ರಾಲಯದ ಯತಿಗಳು. ಶ್ರೀಪಾದರಾಜ ಮಠದ ಶ್ರೀಗಳು, 25ರಂದು ಪೇಜಾವರ ಅಧೋಕ್ಷಜ ಮಠದ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಮಾಹಿತಿ ಶ್ರೀ ವಿದ್ಯಾಸಾಗರ ಮಾದವ ತೀರ್ಥರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

