ಕೋಲಾರ

ಆದಿರೆಡ್ಡಿಪಲ್ಲಿ ಗ್ರಾಮಸ್ಥರ ಪ್ರತಿಭಟನೆ (ಸುದ್ದಿ ಸಂಕ್ಷೇಪ)

Published On :

ಬಾಗೇಪಲ್ಲಿ: ಕಳೆದ ಆರು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಕೊಳವೆ ಬಾವಿಯಲ್ಲಿ ಪಂಪು ಮೋಟಾರ್ ಅಳವಡಿಸಬೇಕೆಂದು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿ ತಾಲೂಕಿನ ಆದಿರೆಡ್ಡಿಪಲ್ಲಿ ಗ್ರಾಮಸ್ಥರು ಪಟ್ಟಣದ ಜಿ.ಪಂ ತಾಂತ್ರಿಕ ಉಪ ವಿಭಾಗದ ಕಚೇರಿಯ ಮುಂದೆ ಧರಣಿ ನಡೆಸಿದರು. ಕೂಡಲೇ ಗ್ರಾಮದ ಕೊಳವೆ ಬಾವಿಗೆ ಪಂಪು ಮೋಟಾರ್ ಅಳವಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಶಿಡ್ಲಘಟ್ಟದಲ್ಲಿ ಹೀಗೊಂದು ಪ್ರೇಮ ವಿವಾಹ
ಶಿಡ್ಲಘಟ್ಟ: ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗದೇ ತಡ ಮಾಡುತ್ತಿದ್ದ ಯುವಕನನ್ನು ಹಿಡಿದು ಸಾರ್ವಜನಿಕರೇ ಮದುವೆ ಮಾಡಿಸಿದ ಘಟನೆ ನಡೆದಿದೆ. ತಾಲೂಕಿನ ಭಕ್ತರಹಳ್ಳಿ ಗ್ರಾಮದ ರವಿಕುಮಾರ್ ಹಾಗೂ ಕಾವ್ಯಶ್ರೀ ಎಂಬ ಯುವಕ- ಯುವತಿಯರು ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದು, ಯುವಕನ ಮನೆಯವರು ಮದುವೆ ಮಾಡಲು ಹಿಂದೇಟು ಹಾಕಿ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಯುವತಿಯ ಪೋಷಕರು ಹಾಗೂ ಗ್ರಾಮಸ್ಥರು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದರು. ಇದರಿಂದ ಮದುವೆಯಾಗಲು ನನಗೆ ಇನ್ನೂ ಸಮಯಾವಕಾಶ ಬೇಕು ಎಂದು ಯುವಕ ಪಟ್ಟು ಹಿಡಿದಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ತಾಲೂಕು ಕಚೇರಿಯ ಮುಂಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿಯಲ್ಲಿ ಸಾರ್ವಜನಿಕವಾಗಿ ತಾಳಿ ಕಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಸಂದರ್ಭದಲ್ಲಿ ಮುಖಂಡರಾದ ರಾಮಕೃಷ್ಣಪ್ಪ, ಕೆ.ಮುತ್ತುಕದಹಳ್ಳಿ ನಾರಾಯಣಸ್ವಾಮಿ, ದೇವರಮಳ್ಳೂರು ಸೊಣ್ಣಪ್ಪ, ದಸಂಸ ಸಂಘಟನಾ ಸಂಚಾಲಕ ಚಲಪತಿ, ಭಕ್ತರಹಳ್ಳಿ ಪ್ರತೀಶ್ ಹಾಜರಿದ್ದರು.

ವೃತ್ತಿ ಕೌಶಲ್ಯ ತರಬೇತಿ ಕಾರ್ಯಗಾರ
ಗೌರಿಬಿದನೂರು: ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಜರಬಂಡ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಪಿ.ಇ.ಜಿ.ಇ.ಎಲ್. ಮಾದರಿ ಕ್ಲಸ್ಟರ್ ಸಹಯೋಗದೋಂದಿಗೆ ಮೀನಾ ತಂಡದ ಹೆಣ್ಣು ಮಕ್ಕಳಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.  ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಿ.ಆರ್.ಪಿ. ಮರಿಯಪ್ಪ, ಹೆಣ್ಣು ಮಕ್ಕಳ ಅಭಿವೃದ್ಧಿಗೆ ಸರ್ಕಾರಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದು ಕೌಶಲ್ಯ ಅಭಿವೃದ್ಧಿ ವೃತ್ತಿತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸಿ ಪ್ರತಿ ಹೆಣ್ಣು ಮಕ್ಕಳು ಕಲಿಯುವಲ್ಲಿ ಆಸಕ್ತಿವಹಿಸಿ ಎಂದರು. ಕಾರ್ಯಕ್ರಮದಲ್ಲಿ ವೃತ್ತಿ ತರಬೇತಿ ಶಿಕ್ಷಕ ರಾಮಕೃಷ್ಣಪ್ಪ ಮೀನ ತಂಡದ ಹೆಣ್ಣು ಮಕ್ಕಳಿಗೆ ಪೆನಾಯಿಲ್ ತಯಾರಿಕೆ, ಆಯಿಲ್, ಸೋಪು, ಸಬೀನ ಪೌಡರ್, ಕ್ಯಾಂಡಲ್ ತಯಾರಿಕೆ, ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಬಳಸಿ ಪ್ರಾತ್ಯಕ್ಷಿಕೆ ಮೂಲಕ ತಯಾರಿಸಿ ತಿಳಿಸಿಕೊಡಲಾಯಿತು. ಹೂಗಿಡಗಳಿಗೆ ಕಸಿ ಮಾಡುವುದು, ಪೋಷಣೆ, ಹೂ ಗಿಡಗಳ ಸಂರಕ್ಷಣೆ ಪ್ರತ್ಯಕ್ಷಿತೆ ಗುಲಾಬಿ ತೋಟದಲ್ಲಿ ರೈತ ಗಂಗಾಧರಪ್ಪ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಮುನಿಲಕ್ಷಮ್ಮ, ಮೀನ ತಂಡದ ಸಂಚಾಲಕಿ ವಿ.ಸಂಧ್ಯಾ, ಶಿಕ್ಷರಾದ ಸುರೇಶ್.ವೈ, ಗಂಗಾಧರಪ್ಪ, ಸೌಮ್ಯ, ಶಿವಶಂಕರ್ ಹಾಗೂ ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಭಾಗವಹಿಸಲು ಮನವಿ
ಗುಡಿಬಂಡೆ: ಬಿಎಸ್‌ಆರ್ ಪಕ್ಷದ ರಾಜ್ಯಾಧ್ಯಕ್ಷ ಶಿವಪ್ಪ ನೇತೃತ್ವದಲ್ಲಿ ಈ ತಿಂಗಳ 13 ರಂದು ರಾಯಬೊರಿನಲ್ಲಿ ನಡೆಯುವ ಪ.ಜಾತಿ ಮತ್ತು ಪ.ವರ್ಗಗಳ ಬೃಹತ್ ಸಮಾವೇಶಕ್ಕೆ ಬಾಗೇಪಲ್ಲಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಜನಾಂಗದ ಮುಖಂಡರು ಭಾಗವಹಿಸಬೇಕೆಂದು ಪಕ್ಷದ ಮುಖಂಡ ಹಾಗೂ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಸಾಮಿ ಮೊಧೆ ಡಾ.ಲಕ್ಷೀನಾರಾಯಣ ಮನವಿ ಮಾಡಿದ್ದಾರೆ. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ  ಜನ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೇಯಿಂದ ಈ ಕುರಿತು ಈಗಾಗಲೇ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಬಾಗೇಪಲ್ಲಿ ಕ್ಷೇತ್ರದ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಕ್ಷ ಬಲಗೊಳ್ಳಲು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಪಕ್ಷದ ಯುವ ಮುಖಂಡ ವೆಂಕಟರಮಣರೆಡ್ಡಿ (ಸಮರ) ಮಾತನಾಡಿ ಪಕ್ಷಕ್ಕೆ ಯುವಕರಿಂದ ಅಪಾರ ಬೆಂಬಲ ಸಿಗುತ್ತಿದ್ದು ಮುಂದಿನ ಸಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರ್ಪಡೆಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಮಂಡಿಕಲ್ ಶ್ರೀರಾಮರೆಡ್ಡಿ, ರಮೇಶ್, ಆಟೋ ಶ್ರೀನಿವಾಸ್, ಸನಾವುಲ್ಲಾ, ಗೆದ್ದೋಳ್ಳ ಸೀನಪ್ಪ, ಅಫ್ಜಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.