ಕೋಲಾರ

ಗೃಹಿಣಿ ಮೇಲೆ ಹಲ್ಲೆ: ನಗ ನಾಣ್ಯ ದರೋಡೆ

Published On :

ಮಾಲೂರು: ಪರಿಚಿತರಂತೆ ಬಾಗಿಲು ತಟ್ಟಿ ಒಳ ನುಗಿದ್ದ ದರೋಡೆಕೋರರು ಮನೆ ಒಡತಿ ಮೇಲೆ ಹಲ್ಲೆ ಮಾಡಿ 9 ಲಕ್ಷ ನಗದು ಸೇರಿದಂತೆ 18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಲಕ್ಕೂರು ಗ್ರಾಮದಲ್ಲಿ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಲಕ್ಕೂರು ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಗೋಪಾಲಪ್ಪ ಎಂಬವರ ಮನೆಯಲ್ಲಿ ಘಟನೆ ನೆಡೆದಿದ್ದು,ದರೋಡೆಕೋರರಿಂದ ಹಲ್ಲೆಗೆ ಒಳಗಾದ ಗೋಪಾಲಪ್ಪರವರ ಪತ್ನಿ ರಾಧಮ್ಮರಿಗೆ ಸ್ಥಳೀಯ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಘಟನೆ ವಿವರ: ತರಕಾರಿ ವ್ಯಾಪಾರ ಮಾಡುವ ಗೋಪಾಲಪ್ಪ ಎಂದಿನಂತೆ ಗುರುವಾರ ಬೆಳಗ್ಗಿನ ಜಾವ 3 ರ ಸುಮಾರಿಗೆ ತನ್ನ ಮಗ ಮಂಜುನಾಥ್ ಜೊತೆಯಲ್ಲಿ ಬೆಂಗಳೂರಿನ ಹೆಚ್ಎಎಲ್ ಗೆ ತರಕಾರಿಗಳನ್ನು ದ್ವಿಚಕ್ರವಾಹನದಲ್ಲಿ ವ್ಯಾಪಾರಕ್ಕೆ ಎಂದು ತೆಗೆದುಕೊಂಡು ಹೋಗಿದ್ದು, 4 ಗಂಟೆ ಸುಮಾರಿಗೆ ದರೋಡೆಕೋರರು ಬಂದು ಬಾಗಿಲನ್ನು ಬಡೆದಿದ್ದಾರೆ. ಗಂಡನೇ ಬೇಗ ವಾಪಸ್ಸು ಬಂದಿರಬಹುದು ಎಂಬ ನಂಬಿಕೆಯಲ್ಲಿ ಬಾಗಿಲು ತೆಗೆದ ರಾಧಮ್ಮಳನ್ನು ತಳ್ಳಿಕೊಂಡು ಒಳ ನುಗ್ಗಿದ್ದ ನಾಲ್ಕು ಜನ ದರೋಡೆಕೊರರು ಆಕೆಯ ಮೇಲೆ ಹಲ್ಲೆ ಮಾಡಿದರಲ್ಲದೇ ಆಕೆಯ ಕೈ ಕಾಲು ಕಟ್ಟಿ ಹಾಕಿದ್ದಾರೆ. ಗುರುತು ಸಿಗಬಾರದೆಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ದರೋಡೆಕೋರರು ಮನೆಯಲ್ಲಿದ್ದ ಲಾಕರ್ ಹಾಗೂ ಬೀರ್ಗಳನ್ನು ಹೊಡೆದು 9 ಲಕ್ಷ ರು.ನಗದು ಹಾಗೂ 600 ಗ್ರಾಂ ಚಿನ್ನ ದೋಚಿದ್ದಾರೆ. ಹೆಚ್ಎಎಲ್ ಮಾರುಕಟ್ಟೆಯಿಂದ ಬೆಳಗ್ಗಿನ ಜಾವ 5 ರ ಸುಮಾರಿಗೆ ವಾಪಸ್ಸಾದ ಗೋಪಾಲಪ್ಪ ರವರಿಗೆ ತಮ್ಮ ಹೆಂಡತಿಯನ್ನು ಕಟ್ಟಿ ಹಾಕಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪೊಲೀಸರು ಪ್ರಕರಣ ದಾಖಾಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.