ತಾಲೂಕು ಅಭಿವೃದ್ಧಿಗೆ ಜಿಪಂನಿಂದ 12.60 ಕೋಟಿ ನೆರವು
ಕನಕಪುರ: ತಾಲೂಕಿನ ಅಭಿವೃದ್ಧಿಗಾಗಿ ಜಿಪಂ ವತಿಯಿಂದ ಅಲ್ಪಕಾಲದಲ್ಲಿಯೇ 12.60 ಕೋಟಿ ಅನುದಾನ ನೀಡಲಾಗಿದೆ. ಅವುಗಳ ಸಮರ್ಪಕ ಬಳಕೆ ಬಗ್ಗೆ ವಿವರ ಪಡೆಯಲು ಸಭೆ ನಡೆಸುತ್ತಿದೆ ಎಂದು ಜಿಪಂ ಅಧ್ಯಕ್ಷ ಮುದ್ದುರಾಜ್ ಯಾದವ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬರದ ಬೇಗೆಯಿಂದ ಕಂಗೆಟ್ಟಿರುವ ಕನಕಪುರ ತಾಲೂಕಿನಲ್ಲಿ ಆದ್ಯತೆ ಮೇರೆಗೆ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳು ವಂತೆ ಆದೇಶ ನೀಡಿ,ಕುಡಿಯುವ ನೀರಿನ ಕಾಮಗಾರಿಗೆ ಎಷ್ಟೇ ವೆಚ್ಚವಾದರೂ ಜಿಪಂ ವತಿಯಿಂದ ನಿರ್ವಹಿಸಲಾಗುವುದು,ಎಂದು ತಿಳಿಸಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಜಿಪಂ ಅಧ್ಯಕ್ಷ ಮುದ್ದುರಾಜ್ ಅವರೊಂದಿಗೆ ತಾಲೂಕಿನ ಜಿಪಂ ಸದಸ್ಯರು ಮಾತಿನ ಚಕಮಕಿ ನಡೆಸಿದರು.
ಜಿಪಂ ವಿರೋಧ ಪಕ್ಷದ ನಾಯಕ ಇಕ್ಬಾಲ್ ಹುಸೇನ್ ಮಾತನಾಡಿ, ತಾಲೂಕಿಗೆ ಜಿಪಂ ಅಧ್ಯಕ್ಷರು ದಿಢೀರ್ ಭೇಟಿ ನೀಡಿದ್ದಾರೆ. ಯಾವುದೇ ಚುನಾಯಿತ ಸದಸ್ಯರ ಗಮನಕ್ಕೆ ಭೇಟಿಯ ಸಂಗತಿ ತಿಳಿದಿಲ್ಲ. ಕರ್ತವ್ಯಲೋಪ ಎಸಗಿದ್ದಾರೆ. ಜಿಪಂ ಅಧ್ಯಕ್ಷರು ರೋಲ್ಕಾಲ್ಗಾಗಿಯೇ ಆಗಮಿಸಿದ್ದಾರೆ, ಎಂದು ಟೀಕಿಸಿದರು. ಜಿಪಂ ಸದಸ್ಯರಾದ ನಳಿನಾ ರವಿಶಂಕರ್, ವೆಂಕಟೇಶಯ್ಯ, ಗೀತಾ ಈಶ್ವರ್ ದನಿಗೂಡಿಸಿದರು.
ಯಾದವ್ ಅವರು ಮಾತನಾಡಿ, ಕನಕಪುರ ತಾಲೂಕಿನಲ್ಲಿ ಆಶ್ರಯ ಹಾಗೂ ಬಸವ ವಸತಿ ಯೋಜನೆಗಳಲ್ಲಿ ಒಬ್ಬರೇ ವ್ಯಕ್ತಿಗಳು ಹಲವಾರು ಬಾರಿ ಸವಲತ್ತುಗಳನ್ನು ಅನುಭವಿಸಿರುವುದು ಕಂಡುಬಂದಿದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ತಾಪಂ ಅಧ್ಯಕ್ಷೆ ನಾಗರತ್ನ ಶಿವಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಜಿ.ಜೆ.ನಾಯಕ್ ಕಲಾಪಗಳನ್ನು ಮಂಡಿಸಿದರು. ಜಿಪಂ ಸದಸ್ಯರು, ತಾಪಂ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

