120 ಮಕ್ಕಳಿರುವ ಶಾಲೆಗೆ ದೈಹಿಕ ಶಿಕ್ಷಕರು ಬೇಡವೇ
ಚಿಕ್ಕಬಳ್ಳಾಪುರ: ಸರ್ಕಾರ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕ ಕೊರತೆಯಿದ್ದರೂ ಭರ್ತಿ ಮಾಡಿಲ್ಲ. 240 ಮಕ್ಕಳಿರುವ ಶಾಲೆಗೆ ಒಬ್ಬರು ದೈಹಿಕ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ ಎನ್ನುತ್ತದೆ. ಹಾಗಾದರೆ 120 ಮಕ್ಕಳನ್ನು ಹೊಂದಿರುವ ಶಾಲೆಗೆ ದೈಹಿಕ ಶಿಕ್ಷಕರು ಬೇಡವೇ ದೈಹಿಕ ಶಿಕ್ಷಣ ಕೊಡುವುದು ಬೇಡವೇ. ಒಂದು ಕಡೆ ಪ್ರೋತ್ಸಾಹಿಸಲಾಗುತ್ತಿದೆ. ಮತ್ತೊಂದೆಡೆ ಕ್ರೀಡಾಪಟುಗಳು ಸಮಸ್ಯೆಗಳಿಂದ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ.
ಇವು ಜಿಪಂ ಭಾಂಗಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸಲು ಕ್ರೀಡಾ ನೀತಿಗಳನ್ನು ರೂಪಿಸುವ ಸಲುವಾಗಿ ಕ್ರೀಡಾ ಕ್ಷೇತ್ರಗಳಲ್ಲಿನ ನಿಪುಣರು, ಕ್ರೀಡಾಪಟುಗಳು, ವಿವಿಧ ವರ್ಗದ ಜನರಿಂದ ಸಲಹೆಗಳನ್ನು ಸ್ವೀಕರಿಸಲು ಕರೆದಿದ್ದ ಸಭೆಯಲ್ಲಿ ಗುರುವಾರ ಕೇಳಿ ಬಂದ ಪ್ರಶ್ನೆಗಳು.
ಸಲಹೆಗಳನ್ನು ನೀಡುವುದರ ಜತೆಗೆ ಹಲವರು ದೋಷಗಳನ್ನು ಸಭೆಯಲ್ಲಿ ಎತ್ತಿ ತೋರಿಸುವ ಕೆಲಸವನ್ನೂ ಮಾಡಿದರು.
ಪ್ರಕಾಶ್ ಮಾತನಾಡಿ, ಕ್ರೀಡೆಗಳಲ್ಲಿ ಸಾಧನೆಯನ್ನು ತೋರಲು ನಿರಂತರವಾಗಿ ಅಭ್ಯಾಸ ಮಾಡಬೇಕು. ಕ್ರೀಡಾಕೂಟಗಳು ಹತ್ತಿರ ಬಂದಾಗ ಯುದ್ದಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಕ್ರೀಡಾಪಟುಗಳನ್ನು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡುವುದಲ್ಲ. ಆದರೆ, ಇದೇ ಜಿಲ್ಲೆಯಲ್ಲಾಗುತ್ತಿರುವುದು. ಕ್ರೀಡಾಕೂಟಗಳಿಗೆ ಬಜೆಟ್ ಮಾದರಿಯಲ್ಲಿಯೇ ಯೋಜನೆ, ವೇಳಾಪಟಿ ಇರಬೇಕು. ಅಕ್ಟೋಬರ್ನಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಂಡಾಗ ಪರೀಕ್ಷೆಗಳ ಹಿತದೃಷ್ಟಿಯಿಂದ ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾಕೂಟಗಳಿಗೆ ಕಳುಹಿಸುವುದಿಲ್ಲ. ಓದಬೇಕೆಂಬ ಒತ್ತಡವನ್ನು ಹಾಕುತ್ತಾರೆ. ಮತ್ತೊಂದೆಡೆ ಶಾಲೆಯಲ್ಲಿ ಪ್ರೋತ್ಸಾಹ ನೀಡುವಂತಹ ಕೆಲಸವಾಗುತ್ತದೆ. ಇದರ ನಡುವೆ ಮಕ್ಕಳು ನಲುಗಿ ಹೋಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ದೈಹಿಕ ಶಿಕ್ಷಕ ಮಾರುತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಕ್ರೀಡಾ ನೀತಿಗಳನ್ನು ರೂಪಿಸುವಾಗ ಕ್ರೀಡಾಪಟುಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಜಿತ್ ಪ್ರಸಾದ್, ಮಕ್ಕಳ ಕ್ರೀಡೆಯ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಮಾತನಾಡಿ, ಕ್ರೀಡಾಪಟುಗಳಿಗೆ ಸಮರ್ಪಕವಾಗಿ ಸೌಲಭ್ಯಗಳು, ಪ್ರೋತ್ಸಾಹ ಸಿಗುತ್ತಿಲ್ಲ. ಇದನ್ನ ಗಮನದಲ್ಲಿಟ್ಟುಕೊಂಡು ಕ್ರೀಡಾಪಟುಗಳಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಬೇಕೆಂದರು.
ಸಭೆಯಲ್ಲಿ ಹಾಕಿ ಒಲಂಪಿಕ್ ತಂಡದ ಮಾಜಿ ನಾಯಕ ಎಂ.ಪಿ.ಗಣೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಆಯುಕ್ತ ಆನಂದನ್, ಅಂತಾರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಬಿ.ಸಿ.ರಮೇಶ್, ಜಿಲ್ಲಾಧಿಕಾರಿ ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

