ಕೋಲಾರ

ಮದ್ದೂರಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ

Published On :

ಮಾಲೂರು:  ಮಾಲೂರಿನ ಹೊರವಲಯದ ಮದ್ದೂರಮ್ಮ ದೇವಿಯ ನೂತನ ಉತ್ಸವಮೂರ್ತಿ ಅದ್ಧೂರಿ ಮೆರವಣಿಗೆ ಶುಕ್ರವಾರ ರಾತ್ರಿ ಜರುಗಿತು.
ರಾಜೀವ್ ನಗರದ ಬಳಿಯ ಮದ್ದೂರಮ್ಮ ದೇವಿ ದೇಗುಲಕ್ಕೆ 80000 ವೆಚ್ಚದಲ್ಲಿ ನೂತನ ಉತ್ಸವ ಮೂರ್ತಿ ತಯಾರಲಾಗಿಸಿದೆ. ಪ್ರತಿಮೆಯನ್ನು ಧಾರ್ಮಿಕ ವಿಧಿಯಂತೆ ದೇವಾಲಯಕ್ಕೆ ಬರಮಾಡಿಕೊಳ್ಳುವ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹರಕೆ ಹೊತ್ತವರು ಉತ್ಸವ ಮೂರ್ತಿಯನ್ನು ತಮ್ಮ ಗ್ರಾಮಗಳಿಗೆ ತೆಗೆದುಕೊಂಡು ಹೋಗಬಹುದು ಎಂದು ಸಮಿತಿ ಆಂಜಿನಪ್ಪ ತಿಳಿಸಿದರು.
ಭಕ್ತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿದರು. ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆದ ಉತ್ಸವ ಮೂರ್ತಿಯನ್ನು ಧಾರ್ಮಿಕ ವಿಧಿಯಂತೆ ಮದ್ದೂರಮ್ಮ ದೇವಿ ದೇವಾಲಯಕ್ಕೆ ಕರೆ ತರಲಾಯಿತು. ದೇವಾಲಯ ಮಂಡಳಿಯ ಅಪ್ಪಾಜಿ ಗೌಡ, ಬಾರ್ ಸೋಮಣ್ಣ, ರವಿ ಸೇರಿದಂತೆ ನೂರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.