ಸವಲತ್ತು ಸದ್ಬಳಸಿಕೊಳ್ಳಿ: ರಾಮಮೂರ್ತಿ
ಮುಳಬಾಗಲು: ಕಂದಾಯ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ನಿಗದಿತ ಅವಧಿಯಲ್ಲಿ ಪಡೆವ ಅವಕಾಶವಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ನುಡಿದರು.
ತಾಲೂಕಿನ ದುಗ್ಗಸಂದ್ರ ಗ್ರಾಮದ ನಾಡ ಕಚೇರಿಯಲ್ಲಿ ಶನಿವಾರ ಕಂದಾಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ 36 ಸೇವೆಗಳು ಜಾರಿಯಲ್ಲಿದ್ದು ಹೋಬಳಿ ಮಟ್ಟದಲ್ಲಿ ಈ ಸೇವೆಗಳು ಸಿಗುತ್ತದೆಂದು ಹೇಳಿದರು.
ತಾವರೆಕೆರೆ ಗ್ರಾಮದ ಟೆ.ಸಿ.ಮುನಿಯಪ್ಪನವರು ಮಾತನಾಡಿ ಕೆರೆಯ ಒತ್ತುವರಿ ಕಾರಣದಿಂದ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲವೆಂದು ಆರೋಪಿಸಿ ಕೆರೆ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು.
ತಾ.ಪಂ.ಸದಸ್ಯ ರಾಜಪ್ಪ, ಗ್ರಾ.ಪಂ.ಅಧ್ಯಕ್ಷೆ ಶಂಕರಮ್ಮ, ತಾವರೆಕೆರೆ ರಮೇಶ್, ಕೃಷ್ಣಮ್ಮ, ಜಿ.ಕೆ.ವೆಂಕಟರಾಮಯ್ಯ, ರಾಜಸ್ವನಿರೀಕ್ಷಕ ಸುಬ್ರಮಣ್ಯಂ. ಸತ್ಯಪ್ಪನವರ್, ವಕೀಲ ವೆಂಕಟರೆಡ್ಡಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

