ಕೋಲಾರ

ರಾತ್ರಿ 12 ಆದರೂ ಸಿಗಲಿಲ್ಲ ಹಾಸಿಗೆ

Published On :

ತಾಲೂಕಿನ ಕೊಂಡೇನಹಳ್ಳಿಯ ದೊಡ್ಡ ನರಸಿಂಹಪ್ಪ ನಾಯಕ್ ಭಾನುವಾರ ಸಂಜೆ ಮೂಗಿನಲ್ಲಿ ರಕ್ತ ಹೆಚ್ಚಿಗೆ ಬಂದು ತೀವ್ರವಾಗಿ ಅಸ್ವಸ್ಥರಾಗಿದ್ದು, ತಕ್ಷಣ 108ಗೆ ಕರೆ ಮಾಡಿರುವ ಅವರ ಮಗ ವೆಂಕಟಪ್ಪನಾಯಕ್ ಗಾಬರಿಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಹಾಸಿಗೆಯ ಕೊರತೆಯಿಂದ ಬಹಳ ಹೊತ್ತು ಅವರು ಕಾಯಬೇಕಾಯಿತು.
ಕೊನೆಗೆ ಅಸ್ವಸ್ಥರಾದ ದೊಡ್ಡ ನರಸಿಂಹಪ್ಪ ನಾಯಕ್ ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಕೊಠಡಿಯ ಬಾಗಿಲಿನ ಮುಂಭಾಗ ಮಲಗಿಕೊಂಡೇ ನೋವನ್ನು ಅನುಭವಿಸಿದರು. ರಾತ್ರಿ 12 ಆದರೂ ಹಾಸಿಗೆ ಸಿಗಲಿಲ್ಲ. ಇದರಿಂದ ಅವರ ಸಂಬಂಧಿಕರು ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೇ ಇಂತಹ ಪರಿಸ್ಥಿತಿಯಿದ್ದಾಗ ನಾವು ಮತ್ತೆಲ್ಲಿಗೆ ಹೋಗುವುದು. ನಂಬಿ ಬರುವ ಜನರನ್ನು ಸಮಸ್ಯೆಗೆ ತಳ್ಳುವ ಬದಲು ಆಸ್ಪತ್ರೆಯನ್ನು ಮುಚ್ಚಿ ಬಿಡಿ. ಒಬ್ಬ ರೋಗಿ ಈ ರೀತಿಯೇ ಸಾಯಬೇಕಾ ಎಂದು ಕಿಡಿಕಾರಿದರು. ಆಸ್ಪತ್ರೆಯಲ್ಲಿ ಹಾಸಿಗೆಯಿಲ್ಲ, ಕಟ್ಟಡ ಸಾಕಾಗುತ್ತಿಲ್ಲ. ನೀವೇ ಆಸ್ಪತ್ರೆಗೆ ಒಂದು ಕಟ್ಟಡ ಕಟ್ಟಿಸಿಕೊಟ್ಟು ಬಿಡಿ ಎಂದು ಚಿಕಿತ್ಸೆ ನೀಡಬೇಕಾದವರಿಂದಲೇ ವ್ಯಂಗ್ಯವಾಗಿ ಕೇಳಿ ಬಂದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.  
ಈ ನಡುವೆ ಭಾನುವಾರ ರಾತ್ರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಅವಶ್ಯಕವಿದ್ದ ಐದಾರು ಮಂದಿ ರೋಗಿಗಳು ಆಗಮಿಸಿದ್ದರು. ಅದೇ ಸಮಯದಲ್ಲಿ ಒಳರೋಗಿಗಳಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ಇವರಿಗೆಲ್ಲಾ ಚಿಕಿತ್ಸೆ ನೀಡಲು ಮಾತ್ರ ಒಬ್ಬರೇ ವೈದ್ಯರಿದ್ದದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.