ಸಮುದಾಯ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ: ವಿಜಯಕುಮಾರ್
ಮಾಲೂರು: ಸಮಾಜದ ಎಲ್ಲ ರಂಗದಲ್ಲೂ ಪ್ರಗತಿ ಸಾಧಿಸಲು ವಿಫಲದ ಹಿನ್ನೆಲೆ ತಾಲೂಕಿನಲ್ಲಿ 3500 ಸಂಖ್ಯೆಯಲ್ಲಿ ಸಮುದಾಯದ ಜನರಿದ್ದರೂ ಸಮಾಜದ ಮುಖ್ಯ ವಾಹಿನಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಧರ್ಮರಾಯ ದೇವಾಲಯ ಸಮಿತಿ ಅಧ್ಯಕ್ಷ ಎಂ.ಪಿ.ವಿಜಯಕುಮಾರ್ ಹೇಳಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ ಭಾನುವಾರ ವಹ್ನಿಕುಲ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘದ ಕಚೇರಿ ಹಾಗೂ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಮಾಜವು ಶೈಕ್ಷಣಿಕ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾಜದ ಇತರೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಮಾಲೂರು ತಾಲೂಕಿನ ವಹ್ನಿಕುಲ ಸಂಘ ಹಾಗೂ ಧರ್ಮರಾಯ ದೇವಾಲಯ ಸಮಿತಿ ಶ್ರಮಿಸುತ್ತಿದೆ ಎಂದರು.
ತಾಲೂಕಿನಲ್ಲಿ ನಮ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ಜನಾಂಗದ ಅಭಿವೃದ್ಧಿಗಾಗಿ ಹಲವರು ಮಹನೀಯರು ಶ್ರಮಿಸಿದ್ದು, ಅವರನ್ನು ನೆನಪಿಸಿಕೊಳ್ಳಬೇಕಾಗಿದೆ. ಸಮುದಾಯ ಸಂಘಟನೆಗಾಗಿ ಸಂಘದ ಪದಾಧಿಕಾರಿಗಳು ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನಾಂಗದವರ ಪ್ರಗತಿಗಾಗಿ ಮಾಹಿತಿ ಕಲೆ ಹಾಕಲಿದ್ದಾರೆ. ಜನಾಂಗದ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಬೆಂಗಳೂರು ಪೂರ್ವ ತಾಲೂಕು ತಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಸ್ಥಳೀಯ ತಿಗಳರ ಸಂಘವು ಸಂಘಟನೆಯಲ್ಲಿ ಶಕ್ತಿಯುತವಾಗಿ ಬೆಳೆದಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ರಾಜ್ಯದ ಇತರಡೆ ಇರುವ ಸಮುದಾಯದ ಸಂಘಗಳಿಗೆ ಮಾದರಿಯಾಗಿದೆ. ತಾಲೂಕಿನ ಸಮುದಾಯಗಳ ಮಾಹಿತಿ ದಾಖಲಿಸಿಲು ಕಂಪ್ಯೂಟರ್ ನೀಡುತ್ತಿರುವುದಾಗಿ ತಿಳಿಸಿದರು.
ಧರ್ಮರಾಯ ದೇವಾಲಯ ಸಮಿತಿ ಖಂಜಾಚಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಮುದಾಯ ವಿಫಲವಾಗುತ್ತಿದೆ. ಇತರೆ ಸಮುದಾಯಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ನಮ್ಮ ಸಮುದಾಯಕ್ಕೆ ನೀಡದೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಜನಾಂಗದವರು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಪಂಗಿ ರಾಮನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಜಗದೀಶ್, ರಾಜ್ಯ ಸಮಿತಿಯ ಬಾಬು ಅದಿತ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಸದಸ್ಯೆ ರತ್ಮಮ್ಮ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಪುರಸಭೆ ಮಾಜಿ ಉಪಾಧ್ಯಕ್ಷ ರಾಜಪ್ಪ, ಮಾಜಿ ಸದಸ್ಯ ಟಿ.ರಾಮಚಂದ್ರ, ಗ್ರಾ.ಪಂ. ಸದಸ್ಯರಾದ ಪುರ ನಾಗರಾಜ್, ಭಾಗ್ಯಮ್ಮ ಮುನಿರಾಜು, ಜಯಲಕ್ಷ್ಮಮ್ಮ ಕೃಷ್ಣಪ್ಪ, ತಿಗಳ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಜಯರಾಂ, ಸಂಘದ ಗೌರವಾಧ್ಯಕ್ಷ ಎಂ.ಪಿ.ನಾಗರಾಜ್, ಕಾರ್ಯದರ್ಶಿ ಈಶ್ವರ್, ಎಂ.ಕೃಷ್ಣಪ್ಪ, ಎಂ.ಪಿ. ರಾಮಚಂದ್ರ, ಎಂ.ಪಿ. ಗಿರಿಯಪ್ಪ, ವೆಂಕಟೇಶ್, ಕೋಡಿಹಳ್ಳಿ ವೆಂಕಟೇಶ್, ರೋಜಾ ರಾಜಪ್ಪ, ಕೆ.ಇ.ಬಿ. ನಾರಾಯಣಪ್ಪ, ಪುರ ವೆಂಕಟೇಶ್, ಬಾಲಾಜಿ, ಜಿ.ವಿ.ಕುಮಾರ್, ಲಕ್ಕೂರು ಶ್ರೀನಿವಾಸ್, ಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

