'ಸಮಾಜ ಸುಧಾರಣೆಗೆ ನಾಟಕ ಕಲೆ ಪೂರಕ'
ಕ.ಪ್ರ.ವಾರ್ತೆ , ಚಿಕ್ಕಬಳ್ಳಾಪುರ , ಜು. 1
ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಸಮಾಜ ಸುಧಾರಣೆಗೆ ನಾಟಕ ಕಲೆ ಇಂದಿಗೂ ಎಂದಿಗೂ ಅಮರ. ನಾಟಕ ಪ್ರದರ್ಶನಗಳು ಪ್ರತಿಯೊಬ್ಬರೂ ನೋಡುವ ಮೂಲಕ ರಂಗ ಕಲಾವಿದರಿಗೆ ನಿರಂತರ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಕೋಡಿರಂಗಪ್ಪ ತಿಳಿಸಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಅನನ್ಯ ಕಲಾ ರಂಗ ವೇದಿಕೆಯ ವತಿಯಿಂದ ಜನಮನದಾಟದ ಹೆಗ್ಗೋಡು ಅಭಿನಯಿಸಿದ ಎ.ರೇವತಿಯವರು ರಚಿತ 'ಬದುಕು ಬಯಲು' ರೂಪಕದ ನೈಜ ಘಟನೆಯ ಹಿಜ್ರಾಗಳ ಬದುಕನ್ನು ಕುರಿತಾದ ಕನ್ನಡದ ಪ್ರಪ್ರಥಮ ನಾಟಕ ಪ್ರದರ್ಶನದಲ್ಲಿ ನಾಟಕ ಪ್ರದರ್ಶನಕ್ಕೆ ವೃತ್ತ ನಿರೀಕ್ಷಕ ಎಸ್. ಮಹೇಶ್ಕುಮಾರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ, ಭಾರತೀಯ ಕಲೆ ಸಂಸ್ಕೃತಿಗೆ ವಿಶಿಷ್ಠ ಸ್ಥಾನ-ಮಾನಗಳಿವೆ. ದೊರೆಸ್ವಾಮಿ ಎಂಬ ಹೆಸರಿನ ಗಂಡು ಮಗು ಸೇಲಂ ಜಿಲ್ಲೆಯ ನಮಕ್ಕಲಲ್ತಾಲ್ಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿ ಕಾಲ ಕ್ರಮೆಣ ರೇವತಿಯಾಗಿ ತನ್ನೆಲ್ಲಾ ನೋವು ವ್ಯಥೆಗಳ ನೈಜ ಚಿತ್ರಣಗಳನ್ನು ಚಿತ್ರಿಸಿ ಇಂದು ಒಂದು ನಾಟಕ ರೂಪಕಕ್ಕೆ ತಂದು ತಮ್ಮ ಮುಂದೆ ಸಾದರ ಪಡಿಸುತ್ತಿರುವುದು ಕಷ್ಟದ ಕೆಲಸವೇ. ಇಂತಹ ನೈಜ ಚಿತ್ರಗಳನ್ನು ನೋಡುವ ಮೂಲಕ ಅವರ (ಹಿಜ್ರಾಗಳ) ಬದುಕಿಗೆ ನಾಂದಿಯಾಡಬೇಕು ಎಂದರು.
ಶೋಷಿಸಲ್ಪಡುವ ಇಂದಿನ ಸಮಾಜದಲ್ಲಿ ಶೋಚನೀಯವಾಗಿ ಕಾಣುವ ಜನರಿದ್ದಾರೆ. ಅವರೂ ಸಹಾ ನಮ್ಮೊಳಗೆ ಒಬ್ಬರಾಗಿ ಹುಟ್ಟಿ ದೇಹದಲ್ಲಿಯೇ ಬದಲಾದ ಸನ್ನಿವೇಶಕ್ಕೆ ಅವರು ದಾಸರಾಗಿ ಹಿಜ್ರಾಗಳಾಗುತ್ತಾರೆ.ಅಂಥಹ ಎಷ್ಟೋ ಮಂದಿ ದೇಶವ್ಯಾಪಿ ಹಿಜ್ರಾಗಳಿದ್ದಾರೆ ಅವರ ಬದುಕನ್ನು ಹಸನು ಮಾಡಿದ್ದಂತಾಗಲಿದೆ ಮಾತ್ರವಲ್ಲ ಆ ಪ್ರಯತ್ನದಿಂದಲಾದರೂ ನಮ್ಮ ಮನಸ್ಸು ಪರಿವರ್ತನೆಯಾಗಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿ. ರಾಜಾಕಾಂತ್ ಮಾತನಾಡಿ, ಜೀವ-ಜೀವನಕ್ಕೆ ಸಂಬಂಧಿಸಿದ ಕಥಾನಕವಾದ ರೂಪಕವನ್ನು ರಂಗಕರ್ಮಿಗಳು ಜನರ ಮುಂದೆ ಇಟ್ಟು ಅವರಿಗೂ ಸುಂದರ ಬದುಕಿವೆ ಉತ್ತಮ ವಾತಾವರಣ ಕಲ್ಪಿಸುವ ಸಣ್ಣ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹಿಜ್ರಾಗಳನ್ನು ಪರಿಶಿಷ್ಟರಿಗಿಂತ ಕಡೆಯದಾಗಿ ನೋಡುವ ಈ ಲೋಕಕ್ಕೆ ನಾಟಕದ ಮೂಲಕ ನೈಜ ಘಟನೆ ಏನೆಂಬುದನ್ನು ತೋರ್ಪಡಿಸಿದಂತಾಗಲಿದೆ ಎಂದರು. ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಧಾ ವೆಂಕಟೇಶ್ ಮಾತನಾಡಿ, ಸಂಸ್ಕೃತಿಯನ್ನು ಆಹ್ಲಾದಿಸುವ ಜೊತೆ-ಜೊತೆಗೆ ಪ್ರತಿಭೆ, ಕಲೆ ಮತ್ತು ಸಂಗೀತವನ್ನು ರೂಢಿಸಿಕೊಂಡು ದೇಶೀಯ ಸಂಸ್ಕತಿಯನ್ನು ಎತ್ತಿ ಹಿಡಿಯಬೇಕು ಎಂದರು.
ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ಯಾಮ್ಸುಂದರ್ ಅಧ್ಯಕ್ಷತೆ ವಹಿಸಿ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗುವ ಕ್ರಿಯೆಯ ಬಗ್ಗೆ ಮತ್ತು ಅವರ ನಡವಳಿಕೆಯ ಬಗ್ಗೆ ತಿಳಿಸಿದರು. ಅನನ್ಯ ಕಲಾ ರಂಗ ವೇದಿಕೆಯ ಗಾ.ನ. ಅಶ್ವತ್ ಮಾತನಾಡಿ, ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಹಿಜ್ರಾ ಕುರಿತಾದ ನಾಟಕವನ್ನು ರಂಗ ಭೂಮಿ ಕಲಾವಿದರು ನೀಡುತ್ತಿದ್ದು, ನಮ್ಮ ಅನನ್ಯ ಕಲಾ ರಂಗ ವೇದಿಕೆ ಸಹಾ ಇಂತಹ ಅನೇಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಸಮಾಜದ ಉತ್ತಮ ಬೆಳವಣಿಗೆಯತ್ತಾ ಹೆಜ್ಜೆ ಇಡುವುದೇ ನಮ್ಮ ಧ್ಯೇಯ ಎಂದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಶೇಷಾದ್ರಿ ಉಪಸ್ಥಿತರಿದ್ದರು. ಪತ್ರಕರ್ತ ಎಂ. ಕೃಷ್ಣಪ್ಪ ನಿರೂಪಿಸಿದರು. ಶಿಕ್ಷಕ ವಿ. ನಾರಾಯಣಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

