ಕೋಲಾರ

ಕಾಂಗ್ರೆಸ್ ಸೇರಲು ಕೃಷ್ಣಯ್ಯ ಶೆಟ್ಟಿಗೆ ಅವಕಾಶ ಕಲ್ಪಿಸಿ

Published On :

ಕ.ಪ್ರ.ವಾರ್ತೆ, ಮಾಲೂರು, ಜು.1
ಮಾಲೂರು ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅನಿವಾರ್ಯವಾಗಿ ಬೇಕಾಗಿದ್ದು, ಬೇಷರತ್ತಾಗಿ ಪಕ್ಷಕ್ಕೆ ಬರುತ್ತಿರುವ ಅವರನ್ನು ಕೆಪಿಸಿಸಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು ಹಾಗೂ ಚೆನ್ನರಾಯಪ್ಪ ಮಾತನಾಡಿ, ಕಳೆದೆ 3 ವಿಧಾನಸಭೆ ಸೇರಿದಂತೆ ಹಿಂದಿನ 8 ವರ್ಷಗಳಲ್ಲಿ ತಾಲೂಕಿನಲ್ಲಿ ನಡೆದಿರುವ ಎಲ್ಲ ಹಂತದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿರುವುದು ಎಲ್ಲಿರಿಗೂ ತಿಳಿದ ವಿಷಯ. ಕಳೆದೆ 9 ವರ್ಷಗಳ ಕಾಲ ತಾಲೂಕಿನಲ್ಲಿ ಆಡಳಿತ ನಡೆಸಿ ಕಳೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರನಾಗಿ ಸ್ಪರ್ಧಿಸಿ 38 ಸಾವಿರ ಮತ ಪಡೆದಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಬೇಷರತ್ ಆಗಿ ಪಕ್ಷದಲ್ಲಿ ಸೇರಲು ಮನವಿ ಸಲ್ಲಿಸಿದ್ದಾರೆ. ಅವರನ್ನು ಪಕ್ಷಕ್ಕೆ ತಕ್ಷಣ ಸೇರಿಸಿಕೊಳ್ಳಬೇಕು ಎಂದು ಅಗ್ರಹಿಸಿದರು.
ಕೆಪಿಸಿಸಿ ಸದಸ್ಯ ರಘುನಾಥ್ ಮಾತನಾಡಿ, ತಾಲೂಕಿನಲ್ಲಿ 4 ಜಿಪಂ ಸದಸ್ಯರು, 16 ತಾ.ಪಂ. ಸದಸ್ಯರು ಹಾಗೂ ಗ್ರಾ.ಪಂ. ಸದಸ್ಯರನ್ನು ಹೊಂದಿರುವ ಕೃಷ್ಣಯ್ಯ ಶೆಟ್ಟಿ ಅವರು ಪಕ್ಷಕ್ಕೆ ಬಂದರೆ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಶಾಲಿಯಾಗಿ ಸಂಘಟಿಸಲು ಉತ್ತೇಜನ ಸಿಗಲಿದೆ. ಈ ಹಿಂದಿನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಮರು ಸೇರ್ಪೆಡೆಗೊಂಡ ಕೆಲವು ಮುಖಂಡರು ಕೃಷ್ಣಯ್ಯ ಶೆಟ್ಟಿರವರ ಪಕ್ಷ ಸೇರ್ಪಡೆ ವಿರೋಧಿಸುತ್ತಿದ್ದಾರೆ. ಅಂತಹ ಮುಖಂಡರಿಂದ ಪಕ್ಷ ಉದ್ಧಾರವಾಗಲು ಸಾಧ್ಯವಿಲ್ಲ ಎಂದರು.
ಈಗಾಗಲೇ ಕೃಷ್ಣಯ್ಯ ಶೆಟ್ಟಿ ಬೆಂಬಲಿಗರು ಎಲ್ಲರೂ ಕಾಂಗ್ರೆಸ್ ಸೇರಿದ್ದು, ಶೆಟ್ಟಿರ ಸೇರ್ಪಡೆ ಅಡ್ಡಿಯಿಂದ ಅವರೆಲ್ಲರೂ ಗೊಂದಲದಲ್ಲಿ ಇದ್ದಾರೆ. ಲೋಕಸಭೆ ಚುನಾವಣೆ ಹತ್ತಿರದಲ್ಲಿ ಇರುವಾಗ ಕೃಷ್ಣಯ್ಯ ಶೆಟ್ಟಿ ಅವರ ಸೇರ್ಪಡೆ ಇಲ್ಲಿನ ಸಂಸದ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ.  ರಾಜ್ಯದಲ್ಲಿ 24 ಪಕ್ಷದ ಸಂಸದರನ್ನು ಆಯ್ಕೆ ಆಗಬೇಕೆಂಬ ಕೆಪಿಸಿಸಿ ಆಶಯಕ್ಕೆ ಸಹಕಾರಿಯಾಗಲಿದೆ ಎಂದರು.
ಶೆಟ್ಟರ ಪಕ್ಷಕ್ಕೆ ಸೇರ್ಪಡೆ ಸಂಬಂಧ ತಾಲೂಕು ಕಾಂಗ್ರೆಸ್‌ನ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿಗಳು, ಪುರಸಭೆ ಸದಸ್ಯರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲ ಪ್ರಮುಖರು ಕೃಷ್ಣಯ್ಯ ಶೆಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಕೆಪಿಸಿಸಿಗೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಚೆನ್ನಕೇಶವ, ವಕೀಲ ಸೋಮಶೇಖರ್, ಜಿ.ಪಂ. ಮಾಜಿ ಸದಸ್ಯ ರಾಜಣ್ಣ ಮಾತನಾಡಿದರು.
ಪುರಸಭೆ ಸದಸ್ಯರಾದ ಲಕ್ಷ್ಮಿನಾರಾಯಣ್, ಸಿ.ಪಿ. ನಾಗರಾಜ್, ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಆಶೋಕ್‌ಕುಮಾರ್, ಜೆ.ಎಂ. ಸುರೇಶ್ ಕುಮಾರ್, ಚಂದ್ರ ರೆಡ್ಡಿ, ಪ್ರವೀಣ್, ಕಾಂತಮ್ಮ, ಜಯಂತಿ, ಮೋಹನ್, ರಾಜಗೋಪಾಲ್ ರೆಡ್ಡಿ, ಸೊಣ್ಣಪ್ಪ ಸೇರಿದಂತೆ ಐವತ್ತು ಹೆಚ್ಚು ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.