ಶಂಕಿತ ಡೆಂಘೀಜ್ವರಕ್ಕೆ ಯುವಕ ಬಲಿ
ಗೌರಿಬಿದನೂರು: ಶಂಕಿತ ಡೆಂಘೀರೋಗಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ದಿನ್ನೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಾರಾಯಣಪ್ಪ ಎಂಬವರ ದ್ವಿತೀಯ ಪುತ್ರ ಕೃಷ್ಣ (21) ಮೃತಪಟ್ಟನು.
ಐಟಿಐ ವಿದ್ಯಾಭ್ಯಾಸ ಮುಗಿಸಿ ಅಪ್ರೆಂಟಿಸ್ಗೆ ಹೋಗಲು ಗ್ರಾಮದಲ್ಲಿ ವಾಸವಾಗಿದ್ದ ಕೃಷ್ಣನಿಗೆ ಕೆಲ ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ತಾಲೂಕು ಕೇಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ ಮೇರೆಗೆ ಅಲ್ಲಿನ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರುವಂತೆ ಸಲಹೆ ನೀಡಿದ್ದರು.
ಹೆಚ್ಚಿನ ಚಿಕಿತ್ಸೆ ಅಗತ್ಯದ ನಿಮಿತ್ತ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಶನಿವಾರ ಬೆಳಗ್ಗೆ 5.30ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು. ಕೃಷ್ಣನ ಸ್ನೇಹಿತ ಬಾಲು ಎಂಬವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆ ಕೊರತೆ: ಗ್ರಾಮದ ಚರಂಡಿಗಳ ಕಲುಷಿತ ನೀರು ಕೊಳವೆಬಾವಿಯಲ್ಲಿ ಶೇಖರಣೆ ಆಗಿರುವುದರಿಂದ ನೀರು ಬಳಕೆ ಮಾಡುತ್ತಿರುವ ಗ್ರಾಮದ ಕೆಲವರು ರೋಗಪೀಡಿತರಾಗಿದ್ದಾರೆ. ಹಲವಾರು ಮಂದಿ ಹಾಸಿಗೆ ಹಿಡಿದಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.
ಗ್ರಾಮದ ಆಟೋ ರಾಜಣ್ಣ, ವೆಂಕಟರಮಪ್ಪ, ಕೃಷ್ಣಪ್ಪ, ಕೇಶವ, ವೆಂಕಟೇಶಪ್ಪ, ಗಂಗಪ್ಪ, ಶೈಲಜ, ಗಂಗಮ್ಮ, ರತ್ನಮ್ಮ, ಗಂಗಮ್ಮ, ಹೇಮಲತಾ, ರತ್ನಮ್ಮ, ರವಿ, ಮುತ್ತಕ್ಕ, ಒಂದೇ ಕುಟುಂಬದ ಗಂಗೇಗೌಡ, ಪ್ರಮೀಳಮ್ಮ, ಸುಬ್ರಮಣಿ, ಇಂದಿರಾ, ಶ್ವೇತಾ, ನಾರಾಯಣಸ್ವಾಮಿ ಅನಾರೋಗ್ಯ ಪೀಡಿತರಾಗಿದ್ದಾರೆ. ಇವರೆಲ್ಲ ಬಡವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಗ್ರಾಮದ ಮುಖಂಡ ಡಿ.ಎಸ್. ನಾರಾಯಣಪ್ಪ ತಿಳಿಸಿದ್ದಾರೆ.
ಪರಿಶೀಲನೆ: ಡಿಎಚ್ಒ ಬಾಬುರೆಡ್ಡಿ ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲೀಕರಣ ವ್ಯವಸ್ಥೆ ಪರಿಶೀಲಿಸಿದರು. ಗ್ರಾಮಸ್ಥರು ಬಳಸುವ ನೀರಿನ ಮಾದರಿಯನ್ನುಪರೀಕ್ಷೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.
ನಾಮಗೊಂಡ್ಲು ಮಾಧ್ಯಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದೆ. ಅಲ್ಲಿನ ವೈದ್ಯಾಧಿಕಾರಿಗಳಾದ ಡಾ. ರಘುನಾಥ್ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ತಾತ್ಕಾಲಿಕ ಶೆಡ್ಡಿನಲ್ಲಿ ಜ್ವರದಿಂದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಪಿ.ಎನ್.ಪ್ರಕಾಶ್, ಜೆ.ವಿ. ಮೋಹನ್ಗೌಡ, ಮುನಿಕೃಷ್ಣೇಗೌಡ, ಜೆ.ಜೆ. ನಾರಾಯಣಪ್ಪ, ಜೆ.ಆರ್. ರವಿಕುಮಾರ್, ದಲಿತ ಮುಖಂಡ ಉಗ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

