ಕೋಲಾರ

ಮಾಲೂರು ಪಟ್ಟಣ ಸ್ವಚ್ಛತೆಗೆ ಆಗ್ರಹ

Published On :

ಮಾಲೂರು:  ಇಲ್ಲಿನ ಪುರಸಭೆ ಆವರಣದಲ್ಲಿ ಅಪೂರ್ಣವಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಸೇರಿದಂತೆ ಪಟ್ಟಣದಲ್ಲಿ ಮೂಲಭೂತ ಸೌಕರ್ಯ- ಸ್ವಚ್ಛತೆ ಕೊರತೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ಕರವೇ ಕಾರ್ಯಕರ್ತರು ಶನಿವಾರ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಮುಂದಿನ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ಮಂಜುನಾಥ್ ಗೌಡ,ಪಟ್ಟಣದ ಚರಂಡಿಗಳಲ್ಲಿ ನಿತ್ಯ ಶುಚಿಗೊಳಿಸದೆ ಕೆಟ್ಟ ವಾಸನೆ ಹರಡಿ ರೋಗಗಳಿಗೆ ಕಾರಣವಾಗುತ್ತಿದೆ. ಅಪೂರ್ಣಗೊಂಡಿರುವ ಒಳಚರಂಡಿ ಕಾಮಗಾರಿಯಿಂದ ರಸ್ತೆ ಮಧ್ಯ ಭಾಗದಲ್ಲಿ ರಸ್ತೆಯ 3ನೇ ಚರಂಡಿ ನಿರ್ಮಾಣವಾಗಿದೆ. ಜನತೆ ಓಡಾಡಲು ತೊಂದರೆ ಅನುಭವಿಸಬೇಕಾಗಿದೆ. ಪಟ್ಟಣದ ರಸ್ತೆಗಳು ಡಾಂಬರೀಕಣ ಕಾಣದೆ ದಶಕಗಳಾಗಿವೆ. ಹಳ್ಳಗಳ ನಡುವೆ ರಸ್ತೆ ಹುಡುಕಿಕೊಂಡು ಚಲಿಸಬೇಕಾಗಿದೆ ಎಂದು ಆರೋಪಿಸಿದರು.
ಪುರಸಭೆ ಅಧಿಕಾರಿಗಳು ಪುರಸಭೆ ರಸ್ತೆ ಹಾಗೂ ಬಸ್ ನಿಲ್ದಾಣ ಸುತ್ತಮುತ್ತ ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವ ಜೊತೆಯಲ್ಲಿ ಪಟ್ಟಣದ ನೈರ್ಮಲ್ಯಕ್ಕಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಗರಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಕನ್ನಡದ ಆಸ್ತಿಯಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹೆಸರಿನ ರಂಗಮಂದಿರದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ನೂತನ ಶಾಸಕರ ಗಮನಕ್ಕೂ ವಿಷಯ ತಂದಿದೆ. ಕಾರ್ಯಗತವಾಗಿಲ್ಲ. ಇನ್ನಾದರೂ ಮುಖ್ಯಾಧಿಕಾರಿಗಳು ರಂಗಮಂದಿರ ಪುನಃಶ್ಚೇತನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನವೆಂಬರೊಳಗೆ ಕಾಮಗಾರಿ ಪೂರ್ಣಗೊಳಿಸಿ ಕನ್ನಡಾಭಿಮಾನಿಗಳಿಗೆ ತಮ್ಮ ಚಟುವಟಿಕೆ ನಡೆಸಲು ಅಣವು ಮಾಡಿಕೊಡಬೇಕಾಗಿ ಆಗ್ರಹಿಸಿದರು.
ಬಡಗಿ ಶ್ರೀನಿವಾಸ್, ಎಸ್.ಎಂ. ರಾಜು, ನವೀನ್, ರವಿಕುಮಾರ್, ಸಿ.ಚೆನ್ನಕೃಷ್ಣ, ಆಟೋ ಮಂಜು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.