ಬಜೆಟ್ನಲ್ಲಿ ಭರಪೂರ ಘೋಷಣೆ, ಹಣ ಮಾತ್ರ ಇಲ್ಲ: ಶ್ರೀರಾಮರೆಡ್ಡಿ
ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯನ್ನು ಕೆಲ ಕಾಲ ಮಾತ್ರ ಕಣ್ಣೀರು ಹೊರಿಸುವಂತಾಗಿದೆ. ಜನರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿಲ್ಲ, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಸಿಪಿಎಂ(ಐ) ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಜನಪ್ರಿಯ ಯೋಜನೆ ಜಾರಿಗೆ ತರುವ ಬದಲು ಬಜೆಟ್ನಲ್ಲಿ ಕೇವಲ ಘೋಷಣೆ ಮಾಡಿದರೆ ಹೊರತು ಅದಕ್ಕೆ ಹಣ ಮೀಸಲಿಟ್ಟಿಲ್ಲ, ಮಂಡಿಸಿರುವ ಬಜೆಟ್ ಗಾತ್ರಕ್ಕೆ 17 ಸಾವಿರ ಕೋಟಿ ಕೊರತೆಯಿದೆ, ಅದಕ್ಕೆ ಎಲ್ಲಿಂದ ಹಣ ತರುತ್ತೇವೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಇಂದು 1 ಲಕ್ಷ 36 ಸಾವಿರ ಕೋಟಿ ರು. ಸಾಲ ಇದೆ. ಅದರಲ್ಲಿ 1 ಲಕ್ಷ 26 ಸಾವಿರ ಕೋಟಿ ಬಜೆಟ್ ಮಂಡಿಸಿದ್ದಾರೆ. ರೆವಿನ್ಯೂ ಆದಾಯ 97ಸಾವಿರ ಕೋಟಿ ಇದೆ.17449 ಕೊರತೆ ಬಜೆಟ್ ಮಂಡಿಸಿದ್ದಾರೆ. ಕೊರತೆ ತುಂಬಿಸಲು ಬಜೆಟ್ನಲ್ಲಿ ಏನು ಕ್ರಮ ಕೈಗೊಂಡಿದ್ದಾರೆ. ಬಜೆಟ್ ನೋಡಿದರೆ 126 ಸಾವಿರ ಕೋಟಿ, ರಾಜ್ಯದ ಆದಾಯ 97 ಸಾವಿರ ಕೋಟಿ,ಆದರೆ ಕೊರತೆಯ ಪ್ರಮಾಣ 17 ಸಾವಿರ ಕೋಟಿ ಇದೆ. ಯಾವ ಮೂಲಗಳಿಂದ ಆದಾಯಗಳಿಸುತ್ತಾರೆ ಎಂದು ಪ್ರಶ್ನಿಸಿದಲ್ಲದೇ, ಮುಖ್ಯಮಂತ್ರಿಗಳು ಮಂಡಿಸಿರುವ ಬಜೆಟ್ನಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಸದ್ಯಕ್ಕೆ ಕೃಷಿ ಕುಂಠಿತಗೊಂಡಿದೆ ಎಂದು ಮುಖ್ಯಮಂತ್ರಿಗಳು ಬಜೆಟ್ಣನಲ್ಲಿ ಹೇಳಿದ್ದಾರೆ. ಕೃಷಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ, ಬಜೆಟ್ನಲ್ಲಿ ಕೃಷಿ ಅಭಿವೃದ್ಧಿ ಮಾಡಲು ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದ್ದು ಹಾಗೂ ಕೈಗಾರಿಕೆ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಹೇಳಿ ಅದನ್ನು ಅಭಿವೃದ್ಧಿಪಡಿಸುವ ಯಾವುದೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಕಳೆದ ವರ್ಷ ಹೆಚ್ಚು ಹಣ ಮೀಸಲಿಡಲಾಗಿತ್ತು.ಆದರೆ ಈ ಬಾರಿ ಕಡಿಮೆ ಹಣ ನೀಡಿದ್ದಾರೆ. ವಿದ್ಯುತ್ ಉತ್ಪಾದನಾ ರಂಗಕ್ಕೆ ಈ ಹಿಂದಿನ ಬಜೆಟ್ಗಿಂತ 1 ಸಾವಿರ ಕೋಟಿ ಹಣ ಕಡಿಮೆ ನೀಡಿದ್ದಾರೆ. ಇನ್ನೂ ಕಾರ್ಮಿಕರ ವಿಭಾಗದಲ್ಲಿ ಅಸಂಘಟಿತ ಕಾರ್ಮಿಕರ ಮೂಲ ಸಮಸ್ಯೆ ಖಾಯಂ ಶುಲ್ಕದ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಮಾಡದೇ ಇರುವುದು ವಿಷಾದನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ(ಐ) ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಗೋಪಿನಾಥ್, ಬಿ.ಎನ್.ಮುನಿಕೃಷ್ಣಪ್ಪ, ಕುಂದಲಗುರ್ಕಿ ಮುನೀಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

