'ಪಾಲಿಸಿ ಪ್ರೀಮಿಯಂ ಕಡಿತ ಮಾಡಲು ಎಲ್ಐಸಿ ನಿರ್ಧಾರ'
ಮಾಲೂರು: ವಿಮಾ ಕಂಪನಿಗಳ ಎಲ್ಲಾ ಪಾಲಿಸಿಗಳು ಹೊಸ ರೂಪದೊಂದಿಗೆ ಬರುವಂತೆ ಐಆರ್ಡಿಎ ಈಗಾಗಲೇ ಷರತ್ತು ವಿಧಿಸಿರುವುದರಿಂದ ಮುಂದಿನ ಅಕ್ಟೋಬರೊಳಗೆ ನಾವು ಸಜ್ಜಾಗಬೇಕಾಗಿದೆ ಎಂದು ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಚ್.ಎಲ್. ಲೋಕೇಶ್ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಮ್ಮ ಗುಂಪಿನ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಾ.ಜೀ.ವಿ. ನಿಗಮ ಹೊಸ ಪಾಲಿಸಿಗಳನ್ನು ಹೊರ ತರಲಿದ್ದು, ಎಂಜೆಟ್ಗಳು ಹೊಸ ಪಾಲಿಸಿಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಾಗಿರುವುದು ಅವಶ್ಯ ಎಂದರು.
ಇದುವರೆಗೂ ಎಲ್ಐಸಿಯೇ ಪಾಲಿಸಿಯ ಗ್ರಾಹಕರ ಸೇವಾ ತೆರಿಗೆ ಭರಿಸುತ್ತಿದೆ. ಇನ್ನು ಮುಂದೆ ಗ್ರಾಹಕರೇ ಸೇವಾ ತರೆಗೆ ಭರಿಸಬೇಕಾಗಿರುವುದರಿಂದ ಪಾಲಿಸಿಯ ಪ್ರೀಮಿಯಂ ಅನ್ನೇ ಕಡಿಮೆ ಮಾಡಲು ಎಲ್ಐಸಿ ನಿರ್ಧರಿಸಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಐಸಿಯು ನೀಡುತ್ತಿರುವ ಉತ್ತಮ ಸೇವೆಯಿಂದ ಮಾರುಕಟ್ಟೆಯ ಪಾಲಿಸಿಗಳಲ್ಲಿ ಶೇ.65ರ ಸಮೀಪ ಹೊಂದಿದ್ದರೂ ಪ್ರೀಮಿಯಂ ಗಳಿಕೆಯಲ್ಲಿ ಸ್ವಲ್ಪ ಇಳಿಮುಖ ಕಂಡಿದೆ. ಸ್ಥಳೀಯವಾಗಿ ನಮ್ಮ ಪ್ರತಿನಿಧಿಗಳು 2012- 13ನೇ ಅರ್ಥಿಕ ವರ್ಷದ ಸಾಲಿನಲ್ಲಿ ಸರಾಸರಿ 33.1 ಪಾಲಿಸಿಗಳು ಮತ್ತು 2.04 ಲಕ್ಷ ಸರಾಸರಿ ಪ್ರಥಮ ಪ್ರೀಮಿಯಂ ಗಳಿಸಿದೆ. ಪ್ರತಿನಿಧಿಗಳು ಇತರೆ ಕಂಪನಿಗಳ ಸ್ವರ್ಧೆ ನಡುವೆ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ನಂಜುಂಡಪ್ಪ ಅತಿ ಹೆಚ್ಚು ವಹಿವಾಟು ನಡೆಸಿ ಸಿ.ಎಂ. ಕ್ಲಬ್ ಸೇರಿದ್ದಾರೆ ಎಂದ ಲೋಕೇಶ್ ಅವರು, ನಮ್ಮ ಪ್ರತಿನಿಧಿಗಳ ಸಾಧನೆ ತೃಪ್ತಿ ತಂದಿದ್ದರೂ ಪ್ರಥಮ ಪ್ರೀಮಿಯಂ ಹೆಚ್ಟು ಮಾಡುವ ಕಡೆ ಗಮನ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಎಲ್ಐಸಿಯ ಮಾರುಕಟ್ಟೆ ವ್ಯವಸ್ಥಾಪಕ ಅಧಿಕಾರಿ ಸುಧೀಂದ್ರಕುಮಾರ್ ಶೆಟ್ಟಿ ಹೊಸ ಪಾಲಿಸಿಗಳ ಹಾಗೂ ಐಆರ್ಡಿಎ ರೀತ್ಯಾ ಬದಲಾವಣೆಯಾಗುವ ಪಾಲಿಸಿಗಳ ಸ್ವರೂಪಗಳ ಬಗ್ಗೆ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ನಂಜುಂಡಪ್ಪ, ವಿಮಲಮ್ಮ, ಕೆಂಪರತ್ನಂ, ರಾಜಣ್ಣ, ಹರಿನಾಥ್ ಗುಪ್ತ, ಸೋಮಶೇಖರ್, ಭಾಸ್ಕರ್, ವೇಣುಗೋಪಾಲ್, ಶಿವಾಚಾರಿ, ಹೆ.ಲಿಂ. ಮಹೇಶ್, ಕೆಂಪಣ್ಣ, ವೆಂಕಟೇಶ್,ನಾರಾಯಣರೆಡ್ಡಿ, ರವಿಶಂಕರ್, ಸುಗುಣಮ್ಮ, ಅಮುದಾವಲ್ಲಿ, ಆನಂದ್ ಬಾಬು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

