ಕೋಲಾರ

ವಿಜಯ ಬ್ಯಾಂಕಿನ ಸುವರ್ಣ ಮಹೋತ್ಸವ

Published On :

ಕೋಲಾರ: ಗ್ರಾಹಕರ ಸಹಕಾರದಿಂದ ಪ್ರಗತಿಯತ್ತ ಮುನ್ನಡೆದಿರುವ ವಿಜಯ ಬ್ಯಾಂಕ್ ಕರ್ನಾಟಕದಲ್ಲಿ ಬರುವ ಡಿಸೆಂಬರ್ 2013ರ ವೇಳೆಗೆ 2 ಲಕ್ಷ ಕೋಟಿ ರು. ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ ಎಂದು  ಬ್ಯಾಂಕಿನ  ಬೆಂಗಳೂರು ದಕ್ಷಿಣ ವಲಯದ ಮಹಾ ಪ್ರಬಂಧಕಿ ನಿರ್ಮಲ ಶ್ರೀಧರ್ ತಿಳಿಸಿದರು.
ವಿಜಯ ಬ್ಯಾಂಕಿನ ಕೋಲಾರ ಶಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಈವರೆಗೆ 1.75 ಕೋಟಿ ರುಪಬಾಯಿ ವಹಿವಾಟು ನಡೆಸಿದ್ದು ಇದಕ್ಕೆ ಗ್ರಾಹಕರ ಸಹಕಾರ ಕಾರಣವೆಂದರು.
1930ರಲ್ಲಿ ದಕ್ಷಿಣ ಕನ್ನಡದಲ್ಲಿ ವಿಜಯದಶಮಿಯಂದು ಪ್ರಾರಂಭವಾದ ಬ್ಯಾಂಕ್ ಇದುವರೆಗೂ ಯಶಸ್ವಿಯ ಹಾದಿಯಲ್ಲಿ ಸಾಗುತ್ತಾ ಬಂದಿದೆ . ರಾಜ್ಯಾದ್ಯಂತ ಸುಮಾರು 1400 ಶಾಖೆಗಳನ್ನು ಹೊಂದಿರುವ  ಬ್ಯಾಂಕ್ 2014ರ ವೇಳೆಗೆ 1500 ಶಾಖೆ ಮತ್ತು 500 ಎಟಿಎಂಗಳನ್ನು ತೆರೆಯಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ವಲಯದ ಮುಖ್ಯ ವ್ಯವಸ್ಥಾಪಕ  ಭಾಸ್ಕರ್ ಶಾಸ್ತ್ರಿ, ಬ್ಯಾಂಕಿನ ಖಾತೆದಾರರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹೊಳಲಿ ಪ್ರಕಾಶ್ ಮಾತನಾಡಿದರು. ವಿಜಯ ಬ್ಯಾಂಕ್ ದಕ್ಷಿಣ ವಲಯದ ಸಹಾಯಕ ಪ್ರಬಂಧಕ ವಿಠಲರಾವ್ ಆಚಾರ್ಯ, ಕೋಲಾರ ಶಾಖಾ ಪ್ರಬಂಧಕಿ ಅಂಕರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.