ಶೀಘ್ರದಲ್ಲೇ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ: ರತ್ನಮ್ಮನಂಜೇಗೌಡ
ಟೇಕಲ್: ಮಾಲೂರು ತಾಲೂಕಿನ ಪ್ರತಿ ಹಳ್ಳಿಗೂ ಕಾಂಕ್ರಿಟ್ ರಸ್ತೆ ಮಾಡಲು ಒಂದೂವರೆ ಕೋಟಿ ರುಪಾಯಿ ವಿನಿಯೋಗಿಸುತ್ತಿದ್ದು, ವಿಧಾನಸಭಾ ಅಧಿವೇಶನ ಮುಗಿದ ನಂತರ ಶಾಸಕ ಮಂಜುನಾಥಗೌಡ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸುತ್ತಾರೆ ಎಂದು ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ ತಿಳಿಸಿದರು.
ಅವರು ತಮ್ಮ ಸ್ವಕ್ಷೇತ್ರ ನೂಟವೆ ಗ್ರಾಪಂ ಸಾಮಾಜಿಕ ಪರಿಶೋಧನೆ ಮತ್ತು ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಈ ಹಿಂದಿನ ಶಾಸಕರು 28 ಗ್ರಾಪಂಗಳಲ್ಲಿ ಜೆಡಿಎಸ್ ಪರವಿದ್ದ 14 ಗ್ರಾಪಂ ಗಳಿಗೆ ಮನೆಗಳ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡಿದ್ದು, ಇದೀಗ ಶಾಸಕ ಮಂಜುನಾಥಗೌಡರು ಎಲ್ಲಾ 14 ಗ್ರಾಪಂಗಳಿಗೆ ಮನೆಗಳನ್ನು ಪ್ರಥಮವಾಗಿ ಪ್ರಾತಿನಿಧ್ಯ ನೀಡಿ ತರುವಾಯ ಇತರೆ ಗ್ರಾಪಂ ಗಳಿಗೆ ಅವಶ್ಯಕತೆಗೆ ಅನುಗುಣವಾಗಿ ತಾರತಮ್ಯವಿಲ್ಲದೆ ಮನೆಗಳನ್ನು ನೀಡಲು ನಿರ್ಧರಿಸಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು. ನೂಟವೆ ಗ್ರಾಪಂ ಅಧ್ಯಕ್ಷೆ ಮಮತಾಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದು, ನೋಡಲ್ ಅಧಿಕಾರಿಯಾಗಿ ಜಿಪಂ ಸಿಇಒ ಬದ್ರಿನಾಥ್ ಕಾರ್ಯನಿರ್ವಹಿಸಿದ್ದು, ಉಪಾಧ್ಯಕ್ಷೆ ಉಷಾ, ಸದಸ್ಯರಾದ ನಾರಾಯಣಮ್ಮ, ರುದ್ರಮ್ಮ, ಎನ್.ಟಿ. ಸೋಮಶೇಖರಯ್ಯ, ಶ್ರೀನಿವಾಸ ಕಿರಣ್, ದೊಡ್ಡ ವೆಂಕಟರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸ್ಪಂದನೆ: ಸಭೆಯಲ್ಲಿ ಬಹುತೇಕ ಜನ ಗ್ರಾಪಂ ಅಧ್ಯಕ್ಷೆ ಹಾಗೂ ಜಿಪಂ ಸದಸ್ಯೆಗೆ ಅಹವಾಲ ನೀಡಿದ ಅರ್ಜಿಗಳಿಗೆ ಸ್ಥಳದಲ್ಲೇ ಸರಿಯಾದ ಸ್ಪಂದನೆ ನೀಡಿದ್ದು ಸಭೆಯ ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

