ನಕಲಿ ಜಾತಿ ಪತ್ರ ಪಡೆದವರಿಗೆ ಸರ್ಕಾರಿ ಸವಲತ್ತು ರದ್ದು ಮಾಡಿ
ಕನಡಪ್ರಭ ವಾರ್ತೆ, ಕೋಲಾರ,ಜು.21
ನಕಲಿ ಜಾತಿ ಪ್ರಮಾಣ ಪತ್ರಗಳನು ಪಡೆದುಕೊಂಡು ದಲಿತರ ಸೌಲಭ್ಯಗಳನು ಕಬಳಿಸಿರುವವರನು ಬಂಧಿಸಿ ಅವರಿಗೆ ನೀಡಿರುವ ಸವಲತ್ತುಗಳನು ಮೊಟಕುಗೊಳಿಸಬೇಕೆಂದು ದಲಿತ ಮುಖಂಡರು ಜಿಲ್ಲಾ ಪೊಲೀಸ್ ಇಲಾಖೆಯನು ಆಗ್ರಹಿಸಿದರು.
ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಜರುಗಿದ ದಲಿತರ ಕುಂದುಕೊರತೆಗಳ ಸಭೆ ಮತ್ತು ಅಟ್ರಾಸಿಟಿ ಸಭೆಯಲ್ಲಿ ದಲಿತ ಮುಖಂಡರು ಈ ಕುರಿತು ಪೊಲೀಸ್ ಅಧಿಕಾರಿಗಳನು ಒತ್ತಾಯಿಸಿದರು.
ದಲಿತ ಮುಖಂಡ ಟಿ. ವಿಜಯಕುಮಾರ್ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನು ಪಡೆದುಕೊಂಡು ಅನೇಕ ಮಂದಿ ದಲಿತರ ಸೌಲಭ್ಯಗಳನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಇಂತವರ ವಿರುದ್ಧ ದೂರು ನೀಡಿದರೂ ಎಸ್.ಸಿ ಮತ್ತು ಎಸ್.ಟಿ ಸೆಲ್ ನ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ದೂರಿದರು.
ಇದಕ್ಕೆ ಪ್ರತಿಯಾಗಿ ದಲಿತ ಮುಖಂಡ ಹಾರೋಹಳ್ಳಿ ವಿ. ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನಬದ್ಧವಾಗಿ ಪರಿಶಿಷ್ಟರ ಪಟ್ಟಿಗೆ ಸೇರಿಸಿರುವ ಜಾತಿಯವರು ಸೌಲಭ್ಯಗಳನು ಪಡೆದುಕೊಳ್ಳಬೇಕು, ಸಂವಿಧಾನಬದ್ಧವಾಗಿ ಎಲ್ಲಾ ಪರಿಶಿಷ್ಟ ಜಾತಿಯವರಿಗೂ ಸೌಲಭ್ಯಗಳು ಸಿಗಬೇಕು, ಶೋಷಿತರಾಗಿರುವ ಕಟ್ಟ ಕಡೆಯ ಜಾತಿಗೂ ಮೀಸಲಾತಿ ಸವಲತ್ತುಗಳು ಸಿಗಬೇಕು, ದಲಿತರ ಸೌಲಭ್ಯಗಳನು ಸವರ್ಣೀಯ ಜಾತಿಯವರು ನಕಲಿ ಜಾತಿ ಪ್ರಮಾಣ ಪತ್ರಗಳನು ಪಡೆದುಕೊಂಡಿದ್ದರೆ ಅಂತವರನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ವಕೀಲ ಸೂಲಿಕುಂಟೆ ಆಂಜಿ ಮಾತನಾಡಿ, ಉಪವಿಭಾಗಾಧಿಕಾರಿ ಆಯೇಷಾ ಪರ್ವೀನ್ ತಮ್ಮ ಕಚೇರಿಯನು ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಡಿಸಿದ್ದಾರೆ, ಯಾವುದೇ ಕಡತ ಹಣ ನೀಡದೆ ವಿಲೇವಾರಿ ಆಗುತ್ತಿಲ್ಲ, ಇದನು ಪ್ರಶಿಸಿದವರ ಮೇಲೆಯೇ ಕೇಸು ದಾಖಲಿಸುತ್ತಾರೆಂದು ಆರೋಪಿಸಿದರು.
ನಾಗಕಚ್ಚನಹಳ್ಳಿಯ ರಾಜು ಮಾತನಾಡಿ, ದೇವಾಲಯ ವಿವಾದಕ್ಕೆ ಸಂಬಂಧಪಟ್ಟಂತೆ ಶಂಕರಪ್ಪ ಮತ್ತವರ ಬೆಂಬಲಿಗರ ನಡುವೆ ತಮಗೆ ಪ್ರಾಣ ಬೆದರಿಕೆ ಇದೆ, ಮೂರು ಬಾರಿ ಹಲ್ಲೆಯೂ ನಡೆದಿದೆ ಆದರೂ ಯಾವುದೇ ಕ್ರಮ ಜರುಗಿಸಿಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ಹಾರೋಹಳ್ಳಿ ರವಿ ಮಾತನಾಡಿ, ಮುಳಬಾಗಿಲು ಪಟ್ಟಣದಲ್ಲಿ ಗುಡಿಸಲುಗಳನು ಕಳೆದುಕೊಂಡ ಬಡವರಿಗೆ ಹಕ್ಕು ಪತ್ರಗಳನು ನೀಡಲಾಗಿದೆ, ಆದರೆ ಮನೆಗಳನು ನಿರ್ಮಿಸಿಕೊಟ್ಟಿಲ್ಲ ಈ ಬಗ್ಗೆ ಗಮನಹರಿಸಬೇಕೆಂದರು.
ಪಿವಿಸಿ ಕೃಷ್ಣಪ್ಪ ಮಾತನಾಡಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ಪಾಂಡುರಂಗ ಎನುವರು 1.40 ಕೋಟಿ ರು.ಗಳ ದುರುಪಯೋಗ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಅಲ್ಲಿಯೇ ಸಾವನಪ್ಪಿದರು, ಇದೀಗ ಈ ಪ್ರಕರಣದಲ್ಲಿ ಶಾಮೀಲಾದವರು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಪೊಲೀಸರು ಅವರನು ಬಂಧಿಸಿ ವಿಚಾರಣೆ ನಡೆಸುತ್ತಿಲ್ಲ ಎಂದರು.
ಸಭೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಶಿವಾನಂದ, ಮುನಿಯಪ್ಪ, ದಲಿತ ಮುಖಂಡ ಚಲಪತಿ ಇತರರು ಮಾತನಾಡಿ ವಿವಿಧ ವಿಚಾರಗಳ ಕುರಿತಂತೆ ಸಭೆಯ ಗಮನ ಸೆಳೆದರು.
ಎಸ್ಪಿ ರಾಮ್ ನಿವಾಸ್ ಸಪಟ್ ಮಾತನಾಡಿ, ದಲಿತ ಮುಖಂಡರು ಸಭೆಯ ಮುಂದಿಟ್ಟಿರುವ ವಿಚಾಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಸಮಸ್ಯೆಗಳನು ಬಗೆಹರಿಸುವುದಾಗಿ ಭರವಸೆ ನೀಡಿದರು. ಎಎಸ್ಪಿ ಜಮೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

