ಮಲ್ಲ ಕುಸ್ತಿ ಕಲೆ ಉಳಿಸುವ ಜವಾಬ್ದಾರಿ ಯುವಜನಾಂಗದ ಮೇಲೆ: ಚನಕೇಶವ
ಮಾಲೂರು: ಪ್ರಾಚೀನ ಕಲೆಗಳಲ್ಲಿ ಒಂದಾದ ಮಲ್ಲ ಕುಸ್ತಿ ಉಳಿಸಿ ಬೆಳಸಬೇಕಾದ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಚನಕೇಶವ ಹೇಳಿದರು.
ಪಟ್ಟಣದ ಪಟಾಲಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಯುವಕರಿಗಾಗಿ ದೇಶಿಯ ಕ್ರೀಡೆಗಳನು ಹಮ್ಮಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕ್ರೀಡೆಗಳಿಂದ ದೈಹಿಕವಾಗಿ ಸದೃಢವಾಗಿರಲು ಸಾಧ್ಯ ಎಂದರು.
ಕೆಪಿಸಿಸಿ ಸದಸ್ಯ ರಘುನಾಥ್ ಮಾತನಾಡಿ, ಈ ಹಿಂದೆ ರಾಜರ ಕಾಲದಲ್ಲಿ ಯುದ್ಧಕ್ಕೆ ಸನದ್ಧಗೊಳಿಸುವಲ್ಲಿ ಗರಡಿ ಮನೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಮಹಾರಾಜನಿಂದ ಹಿಡಿದು ಪ್ರತಿ ಪ್ರಜೆಗಳು ಕುಸ್ತಿ ವಿದ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಈಗ ಗರಡಿ ಮನೆಗಳೇ ಮಾಯವಾಗುತ್ತಿವೆ. ಯುವಕರಲ್ಲೂ ಈ ಕ್ರೀಡೆಯ ಮಹತ್ವ ಅರಿವಿಲ್ಲದೆ ಕುಸ್ತಿ ಕ್ರೀಡೆ ವಿರಳವಾಗುತ್ತಿದೆ ಎಂದರು.
ಕಸಾಪ ಅಧ್ಯಕ್ಷ ಗೋ.ಮಧುಸೂಧನ್ ಮಾತನಾಡಿ, ತಾಲೂಕಿನಲ್ಲಿನ ಯುವಕರಲ್ಲಿ ಕ್ರೀಡಾ ಸಾಮರ್ಥ್ಯ ಹೆಚ್ಚಿಸಲು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಕೇಂದ್ರ ಮಂತ್ರಿ ಕೆ.ಹೆಚ್.ಮುನಿಯಪ್ಪ ರವರ ಸಹಕಾರದಲ್ಲಿ ಪಟ್ಟಣದಲ್ಲಿ ಹೈಟೆಕ್ ಜಿಮ್ ತೆರೆಯಲು ಸಹಕಾರ ನೀಡಲಿದ್ದು, ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದರು.
ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ರಾಜ್ಯದ ಇತರಡೆಗಳಿಂದ 50ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಹಿರಿಯ ಕುಸ್ತಿಪಟು ಶಂಕರ್ ಸಿಂಗ್, ಪುರಸಭೆ ಸದಸ್ಯ ಸಿ.ಪಿ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಪ್ರವೀಣ್ಕುಮಾರ್, ರಾಜಗೋಪಾಲ್ ರೆಡ್ಡಿ, ಸಂಘಟನೆಯ ಗಾಂಧಿ ಸರ್ಕಲ್ ಮಂಜು, ವಿಶ್ವ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

