ಕೋಲಾರ

ಪತ್ರಕರ್ತರಿಗಾಗಿ ಕ್ರೀಡಾಕೂಟ...

Published On :

ಚಿಕ್ಕಬಳ್ಳಾಪುರ: ಸದಾ ಸುದ್ದಿಯ ಹಿಂದೆ ಬೆನ್ನತ್ತಿ ಹೋಗುವ ಪತ್ರಕರ್ತರಿಗಾಗಿ ನಗರದ ಹೊರ ವಲಯದಲ್ಲಿರುವ ಸಿವಿವಿ ಕ್ರೀಡಾಂಗಣದಲ್ಲಿ ಮಂಗಳವಾರ ಕ್ರೀಡಾಕೂಟ ನಡೆಯಿತು.
ಬಾಲ್‌ಬ್ಯಾಟಿಂಗ್, ಅನ್‌ಲಕ್ಕಿ ಸ್ಪಾಟ್, ಚೀಲದ ನಡಿಗೆ ಸ್ಪರ್ಧೆ ಸೇರಿದಂತೆ ನಾನಾ ಕ್ರೀಡೆಗಳಲ್ಲಿ ಭಾಗವಹಿಸಿದ ಪತ್ರಕರ್ತರು ಪೈಪೋಟಿಯಲ್ಲಿ ಬಹುಮಾನಗಳನ್ನು ಗೆದ್ದರು.
ಶ್ರೀ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಯು ಪ್ರತಿ ವರ್ಷ ದತ್ತಿ ದಿನಾಚರಣೆ ಪ್ರಯುಕ್ತ ಪತ್ರಕರ್ತರಿಗಾಗಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತ ಬಂದಿದ್ದು ಕ್ರೀಡಾಕೂಟವನ್ನು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಕವನಾ ಹಾಗೂ  ಶ್ರೀ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ. ವಿ. ನವೀನ್ ಕಿರಣ್ ಉದ್ಘಾಟಿಸಿದರು.
ನಂತರ ಮಾತನಾಡಿದ ದತ್ತಿಯ ಅಧ್ಯಕ್ಷ ನವೀನ್ ಕಿರಣ್, ಪತ್ರಕರ್ತರು ಸದಾ ಸುದ್ದಿ ಸಂಗ್ರಹದ ಗುಂಗಿನಲ್ಲಿದ್ದುಕೊಂಡು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದನ್ನರಿತುಕೊಂಡು ತಮ್ಮ ಸಂಸ್ಥೆ ಪ್ರತಿ ವರ್ಷ ಪತ್ರಕರ್ತರಿಗಾಗಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಬರುತ್ತಿದೆ. ಕ್ರೀಡಾಕೂಟದಲ್ಲಿ ಹಿರಿಯ ಪತ್ರಕರ್ತರು, ಯುವ ಪತ್ರಕರ್ತರು ಸೇರಿದಂತೆ ಅನೇಕರು ಕಿರಿಯ ಹಿರಿಯ ಎಂಬ ಭೇದಭಾವವಿಲ್ಲದೇ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಸಂತೋಷಪಡುತ್ತಾರೆ ಎಂದು ತಿಳಿಸಿದರು.
ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕ್ರೀಡೆಗಳಿಗಾಗಿ ಸಮಯವನ್ನು ಮೀಸಲಿಡಬೇಕೆಂದರು.
ಬಹುಮಾನ ವಿಜೇತರು: ಡಿಸ್ಕಸ್ ಥ್ರೋ (ಮಹಿಳಾ ವಿಭಾಗ)ದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಕವನಾ  ಪ್ರಥಮ ಮತ್ತು ಪುರುಷರ ವಿಭಾಗದಲ್ಲಿ ಮಲ್ಲಪ್ಪ (ಜನಶ್ರೀ) ಪ್ರಥಮ, ಹರಿಬಾಬು (ರಾಜ್ ನ್ಯೂಸ್) ದ್ವಿತೀಯ,  ಮಂಜುನಾಥ್ ( ವಾರ್ತಾ ಇಲಾಖೆ) ತೃತೀಯ, 100 ಮೀ. ಓಟದ ಸ್ಪರ್ಧೆಯಲ್ಲಿ ಸತೀಶ್ ( ಜನಶ್ರೀ) ಪ್ರಥಮ,  ಶಶಿಕುಮಾರ್ (ಸಂಯುಕ್ತ ಕರ್ನಾಟಕ) ದ್ವಿತೀಯ, ಮುರಳಿ (ವಿಜಯಧ್ವನಿ) ತೃತೀಯ, ಬ್ಯಾಸ್ಕೆಟಿಂಗ್ ಬಾಲ್ ಸ್ಪರ್ಧೆಯಲ್ಲಿ ಮಂಜುನಾಥ್ (ವಾರ್ತಾ ಇಲಾಖೆ) ಪ್ರಥಮ, ವಸಂತಕುಮಾರ್ (ವಿಜಯವಾಣಿ) ದ್ವಿತೀಯ, ದಯಾಸಾಗರ್( ಕಸ್ತೂರಿ) ತೃತೀಯ, ಅನ್‌ಲಕ್ಕಿ ಸ್ಪಾಟ್ ಸ್ಪರ್ಧೆಯಲ್ಲಿ  ನಾಗೇಂದ್ರಬಾಬು (ಸಂಜೆವಾಣಿ)  ಪ್ರಥಮ, ದಯಾಸಾಗರ್ (ಕಸ್ತೂರಿ)  ದ್ವಿತೀಯ, ವಸಂತಕುಮಾರ್( ವಿಜಯವಾಣಿ)  ತಣತೀಯ, ಬಾಲ್ ಬ್ಯಾಟಿಂಗ್ ಸ್ಪರ್ಧೆಯಲ್ಲಿ ಸಿ. ಬಾಲಕೃಷ್ಣ (ಈ ಟಿ.ವಿ. ಕನ್ನಡ)  ಪ್ರಥಮ, ಬ್ರಹ್ಮಚಾರಿ (ಪೊಲೀಸ್ ನ್ಯೂಸ್)ದ್ವಿತೀಯ, ವಿನ್ಸೆಂಟ್ ಕೆನಡಿ (ವಾರ್ತಾ ಭಾರತಿ) ತೃತೀಯ, ಚೀಲದ ನಡಿಗೆ ಸ್ಪರ್ಧೆಯಲ್ಲಿ ಮಂಜುನಾಥ್ (ವಾರ್ತಾ ಇಲಾಖೆ) ಪ್ರಥಮ, ಮುರಳಿ (ವಿಜಯಧ್ವನಿ) ದ್ವಿತೀಯ,  ಮುನಿರಾಜು (ನಂದಿ ವಿಜಯ) ತೃತೀಯ ಮತ್ತು ಕ್ರಿಕೆಟ್ ಪಂದ್ಯದಲ್ಲಿ ಪಾಲಾರ್ ಮಂಜುನಾಥ ನಾಯಕತ್ವದ  ತಂಡವು ಮುರಳಿ ನಾಯತ್ವದ ತಂಡವನ್ನು ಸೋಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.