ಕೋಲಾರ

ಬಿಜಿಎಂಎಲ್ ಕಾರ್ಮಿಕ ಸಂಘಗಳ ಒಕ್ಕೂಟಕ್ಕೆ 10 ದಿನದಲ್ಲಿ ಮಾಹಿತಿ ನೀಡಲು ಸುಪ್ರೀಂ ಆದೇಶ

Published On :

ಕೆಜಿಎಫ್: ಇಲ್ಲಿನ ಬಿಜಿಎಂಎಲ್ ಆಸ್ತಿ ವಿವರದ ಬಗ್ಗೆ ಬಿಜಿಎಂಎಲ್ ಕಾರ್ಮಿಕ ಸಂಘಗಳ ಒಕ್ಕೂಟಕ್ಕೆ 10 ದಿನಗಳೊಳಗೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯುಕ್ತರು ಆಡಳಿತ ಮಂಡಳಿಗೆ ಆದೇಶ ನೀಡಿದ್ದಾರೆ.
2001ರಲ್ಲಿ ಕೆಲಸ ಸ್ಥಗಿತಗೊಳಿಸಿದ್ದ ಚಿನ್ನದ ಗಣಿಯಲ್ಲಿ ಯಂತ್ರೋಪಕರಣಗಳು, ಉಪಕರಣ ಮತ್ತಿತರ ಆಸ್ತಿಗಳ ಅವ್ಯವಹಾರ ನಡೆದಿದ್ದರಿಂದ ಒಕ್ಕೂಟದ ಸಂಚಾಲಕ ಜಿ.ಜಯಕುಮಾರ್ ಮಾಹಿತಿ ಹಕ್ಕು ಕಾಯ್ದೆಯಡಿ ಆಡಳಿತ ಮಂಡಳಿಗೆ ವಿವರ ನೀಡುವಂತೆ ಕೋರಿದ್ದರು. ಆದರೆ, ಬಿಜಿಎಂಎಲ್ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಮಾಹಿತಿ ನೀಡಲು ನಿರಾಕರಿಸಲಾಗಿತ್ತು.
ಈ ಬಗ್ಗೆ ಅರ್ಜಿದಾರರಾದ ಜಿ.ಜಯಕುಮಾರ್ ಕೇಂದ್ರ ಮಾಹಿತಿ ಆಯುಕ್ತರಲ್ಲಿ ಮೇಲ್ಮನವಿ ಸಲ್ಲಿಸಿ ತಾವು ಸಲ್ಲಿಸಿದ 3 ಅರ್ಜಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ಕೋರಿದ್ದರು. ಈ ಬಗ್ಗೆ ಕೇಂದ್ರ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ ಅರ್ಜಿದಾರರು ಹಾಗೂ ಬಿಜಿಎಂಎಲ್ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದ್ದರು. ಚಿನ್ನದ ಗಣಿ ಆಸ್ತಿಯ ಬಗ್ಗೆ ಬಿಜಿಎಂಎಲ್ ಆಡಳಿತ ಮಂಡಳಿ ಅರ್ಜಿದಾರರಾದ ಜಿ.ಜಯಕುಮಾರ್ ಸಲ್ಲಿಸಿರುವ 3 ಅರ್ಜಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ 10 ದಿನಗಳಲ್ಲಿ ಮಾಹಿತಿ ನೀಡಲು 16 ಜುಲೈ, 2013ರಂದು ಆದೇಶ ನೀಡಿರುವುದಾಗಿ ಅರ್ಜಿದಾರ ಜಿ.ಜಯಕುಮಾರ್ ತಿಳಿಸಿದ್ದಾರೆ.
ಯಾವ್ಯಾವ ಮಾಹಿತಿ:  ಈ ಹಿಂದೆ ಬಿಜಿಎಂಎಲ್ ಆಡಳಿತ ಮಂಡಳಿಗೆ ಈಗಿನ ಒಟ್ಟಾರೆ ಚಿನ್ನದ ಗಣಿಯ ಯಂತ್ರೋಪಕರಣಗಳ ಮಾಹಿತಿ ಹಾಗೂ 2001 ರಿಂದ ಬಿಜಿಎಂಎಲ್ ವ್ಯಾಪ್ತಿಯ ಸಮುದಾಯ ಭವನ, ಕಲ್ಯಾಣ ಮಂಟಪ, ಖಾಸಗಿ ಆಸ್ತಿಯಿಂದ ಬಂದಿರುವ ಆದಾಯ, ಖಾಸಗಿಯವರಿಗೆ ನೀಡಿರುವ ಬಂಗಲೆ, ಜಮೀನಿನ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.
ಮುಚ್ಚಿದ ಚಿನ್ನದ ಗಣಿ ಜಾಗತಿಕ ಟೆಂಡರ್ ಮೂಲಕ ಪುನರಾರಂಭದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಕೇಂದ್ರ ಸರ್ಕಾರದ ವತಿಯಿಂದ ಜಾಗತಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಟೆಂಡರ್‌ಗೆ ಆಸ್ತಿಯ ಒಟ್ಟಾರೆ ಮೌಲ್ಯವಾಗಬೇಕಿದೆ. ಈ ಮಧ್ಯೆ ಒಕ್ಕೂಟ ಕೇಳಿರುವ ಮಾಹಿತಿಯಲ್ಲಿ ಬಹಿರಂಗವಾಗುವ ಸಂಗತಿಯಿಂದ ಬಿಜಿಎಂಎಲ್‌ನಲ್ಲಿ ಇದುವರೆಗೂ ಆಡಳಿತ ಮಂಡಳಿ ಅಧಿಕಾರಿಗಳು ನಡೆಸಿದ ಆಸ್ತಿ ಲೂಟಿಯ ಬಹು ದೊಡ್ಡ ಹಗರಣ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

-ಆರ್. ರಜನೀಕಾಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.