ಅಂಗವಿಕಲರ ಸಂಘಕ್ಕೆ ನೇಮಕ
ಚಿಂತಾಮಣಿ: ಬಾ ರಾಜ್ಯ ಅಂಗವಿಕಲರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ಈ ನಿಟ್ಟಿನಲ್ಲಿ ಬಾಬಾಜಾನ್ ಅಧ್ಯಕ್ಷ, ಮಕ್ಬೂಲ್ ಅಹಮದ್ ಉಪಾಧ್ಯಕ್ಷ, ಎಂ.ಯಶೋಧ ಕಾರ್ಯದರ್ಶಿ,ಬಿ.ಎಂ.ಮಂಜುನಾಥ್ ಖಜಾಂಚಿ ಹಾಗೂ ರಹಮತ್, ಲಕ್ಷ್ಮಿದೇವಮ್ಮ, ವೆಂಕಟಮ್ಮ, ವೆಂಕಟರವಣ, ಎಸ್.ಮಕ್ಬೂಲ್ ಅಹಮದ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಪಿ.ವಿ.ಕುಶಕುಮಾರ್, ಕಾರ್ಯದರ್ಶಿ ಎಸ್.ಸುನೀಲ್, ಮಹಿಳಾ ಸಂಚಾಲಕರಾದ ಕೆ.ಸಿ.ಮಮತಾ, ಸೌಭಾಗ್ಯಮ್ಮ, ವೈ.ಬಾಬಾಜಾ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಿಂತಾಮಣಿ: ಕಟಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಂಘದಿಂದ ಹಣ ಹೊಡೆಯಲು ಸಂಚು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಾಲೂಕಿನ ಕಟಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿವೇಶನದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಇಲ್ಲದ ಸವಲತ್ತುಗಳ ಬಗ್ಗೆ ಜನರಿಗೆ ಆಸೆ ಆಮಿಷ ತೋರಿ ದಾರಿ ತಪ್ಪಿಸಿ, ಸಹಕಾರ ಸಂಘಕ್ಕೆ ನಿವೇಶನದ ಬಗ್ಗೆ ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಎಂ.ಶ್ರೀನಾಥ್, ಮಾಜಿ ಅಧ್ಯಕ್ಷ ಶ್ರೀರಾಮರೆಡ್ಡಿ, ಚಿಕ್ಕಬೈರಾರೆಡ್ಡಿ,ಪ್ರಕಾಶ್, ಯರ್ರಪ್ಪ, ಸಂಪಂಗಿರಾಮಯ್ಯ, ಆನಂದ್,ಅಶೋಕ್, ನಾರಾಯಣಸ್ವಾಮಿ, ಆಂಜಪ್ಪ ಸೇರಿದಂತೆ ಇನ್ನೂ ಹಲವಾರು ಮಂದಿ ಅಧ್ಯಕ್ಷರ ಹೇಳಿಕೆ ಖಂಡಿಸಿ, ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜೂಜು: ಮೂವರ ಬಂಧನ
ಕೆಜಿಎಫ್: ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ. ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಣಮಾಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಅಕ್ರಮವಾಗಿ ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಜೂಜಾಡುತ್ತಿದ್ದ ಆಂಡ್ರಸನ್ಪೇಟೆ ನಿವಾಸಿಗಳಾದ ರವಿಚಂದ್ರನ್, ಧನಶೇಖರ್ ಹಾಗೂ ಕೃಷ್ಣಮೂರ್ತಿ ಎಂಬುವರನ್ನು ಪೊಲೀಸರು ಬಂಧಿಸಿ 2050 ನಗದು, ಇಸ್ಪೀಟ್ ಎಲೆ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪದ್ಮನಾಭರಾವ್ ತಾ. ಕಸಾಪ ಅಧ್ಯಕ್ಷ
ಮುಳಬಾಗಲು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಮು.ಕೃ. ಪದ್ಮನಾಭರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜೆ. ನಾಗರಾಜ್ ತಿಳಿಸಿದ್ದಾರೆ. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಮು.ಕೃ.ರವರು ಕನ್ನಡ ಪರವಾದ ಹೋರಾಟಗಳಲ್ಲಿ ತಾಲೂಕಿನಾದ್ಯಂತ ಪರಿಚಿತರಾಗಿದ್ದಾರೆ. ಹಾಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿಯೂ ಸಹ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಶಿಡ್ಲಘಟ್ಟದಲ್ಲಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ
ಶಿಡ್ಲಘಟ್ಟ: ಪಟ್ಟಣದ ಊರಿನ ಗ್ರಾಮದೇವತೆಗಳಾದ ಶ್ರೀ ಗಂಗಮ್ಮ ದೇವಿ, ಶ್ರೀ ಮಾರಮ್ಮ ದೇವಿ ಹಾಗೂ ಶ್ರೀ ಕರಗದಮ್ಮ ದೇವಿಯವರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಪಟ್ಟಣದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಊರಿನ ಪ್ರಮುಖ ಬೀದಿಗಳಲ್ಲಿ ಹೆಂಗಸರು ತಂಬಿಟ್ಟಿನಿಂದ ಮಾಡಿದ ದೀಪಗಳನ್ನು ಅಲಂಕಾರ ಮಾಡಿಕೊಂಡು ಮೆರವಣಿಗೆಯ ಮುಖಾಂತರ ಗ್ರಾಮದೇವತೆಗಳ ದೇವಸ್ಥಾನಕ್ಕೆ ತೆರಳಿ ಪೂಜೆಗಳನ್ನು ಸಲ್ಲಿಸಿದರು. ಬೆಳಗ್ಗೆ 9 ಗಂಟೆಯಿಂದ ಶ್ರೀ ಗಂಗಮ್ಮ ದೇವಿಯ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವವನ್ನು ನಡೆಸುತ್ತಿದ್ದು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ಶ್ರೀ ಗಂಗಮ್ಮ ದೇವಿ ಕಾರ್ಯಕಾರಿ ಮಂಡಳಿ ತಿಳಿಸಿದೆ. ಇದೆ ವೇಳೆ ಗಂಗಮ್ಮ ದೇವಿಯ ದೇವಸ್ಥಾನಕ್ಕೆ ಆಗಮಿಸಿದ ಶಾಸಕ ಎಂ. ರಾಜಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಲುಷಿತ ಆಹಾರ ತಿಂದು 3 ಸೀಮೆ ಹಸುಗಳು ಸಾವು
ಟೇಕಲ್: ಸುಮಾರು 1ಲಕ್ಷ 80 ಸಾವಿರ ಬೆಲೆ ಬಾಳುವ 3 ಸೀಮೆ ಹಸುಗಳು ಕಲುಷಿತ ಆಹಾರ ತಿಂದು ಮೃತಪಟ್ಟಿರುವ ಘಟನೆ ಟೇಕಲ್ ಗ್ರಾ.ಪಂ. ವ್ಯಾಪ್ತಿಯ ಮಿಟ್ಟಿಗಾನಹಳ್ಳಿಯಲ್ಲಿ ನಡೆದಿದೆ. ವೆಂಕಟೇಶಪ್ಪ ಬಿನ್ ಕ್ಛಷ್ಣಪ್ಪ ಎಂಬುವರ ಮನೆಯಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 7ಗಂಟೆಗೆ ವೆಂಕಟೇಶಪ್ಪ ಎಂಬುನವರ ಕುಟುಂಬದವರು ತಮ್ಮ 3 ಸೀಮೆ ಹಸುಗಳಿಗೆ ನೀರು ಹಾಗೂ ಮೇವು ನೀಡಿದ್ದು ಅದು ತಿಂದು ಸುಮಾರು ಅರ್ಧ ಗಂಟೆಯಲ್ಲೆ ಮೃತಪಟ್ಟಿದೆ.
ಗಾಬರಿಗೊಂಡ ಕುಟುಂಬದವರು ಟೇಕಲ್ನ ಪಶು ವೈದ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ವೈದ್ಯ ದೇವರಾಜ್ ಅವರು ಕಲುಷಿತ ಆಹಾರದಿಂದ ಈ ಹಸುಗಳು ಸಾವನ್ನಪ್ಪಿದೆ ಎಂಬುದನ್ನು ದೃಢಪಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ವೆಂಕಟೇಶಪ್ಪನ ಕುಟುಂಬ ಆ ಸೀಮೆ ಹಸುಗಳಿಂದ ಬರುತ್ತಿದ್ದ ಹಾಲಿನಿಂದ ಜೀವನ ನಡೆಸುತ್ತಿದ್ದು ಈ ಘಟನೆಯಿಂದ ಅವರ ಕುಟುಂಬ ತೀರ ದಿಗ್ಭ್ರಾಂತರಾಗಿದ್ದು ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಯವರಾಗಲಿ, ಇಲ್ಲವೆ ತಾಲೂಕಿನ ಶಾಸಕ ಮಂಜುನಾಥಗೌಡರು ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಬೇಕೆಂದು ಸ್ಥಳೀಯ ಗ್ರಾಮಸ್ಥರ ಮೊರೆಯಾಗಿದೆ.
ಮಂಚೇನಹಳ್ಳಿಯಲ್ಲಿ'ಅನ್ನಭಾಗ್ಯ'ಕ್ಕೆ ಚಾಲನೆ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಸಾದೇನಹಳ್ಳಿಯ ಪಡಿತರ ವಿತರಣಾ ಕೇಂದ್ರದಲ್ಲಿ ಅನ್ನಭಾಗ್ಯ ಯೋಜನೆಗೆ ಸಾದೇನಹಳ್ಳಿ ವಿ.ಎಸ್.ಎಸ್ಎನ್. ಅಧ್ಯಕ್ಷ ಹಾಗೂ ಕೋಮುಲ್ ನಿರ್ದೇಶಕ ಎಸ್.ವಿ. ಸುಬ್ಬಾರೆಡ್ಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಅವರು ಸಾರ್ವಜನಿಕ ಪಡಿತರದಾರರರಿಗೆ ಅಕ್ಕಿ ವಿತರಿಸಿ ಮಾತನಾಡಿ ಅನ್ನಭಾಗ್ಯ ಯೋಜನೆ ಹಸಿದ ಬಡಜನರ ಹಸಿವು ನೀಗುವುದಕ್ಕೆ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಶ್ಲಾಘನೀಯ. ಆದರೆ ಈ ಯೋಜನೆ ಎ.ಪಿ.ಎಲ್. ಪಡಿತರ ಕಾರ್ಡ್ದಾರರಿಗೂ ವಿಸ್ತರಿಸುವುದು ಉತ್ತಮ ಎಂದರು. ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಸಿ. ನಾರಾಯಣರೆಡ್ಡಿ, ಜಿ.ಪಂ ಮಾಜಿ ಸದಸ್ಯರಾದ ಪ್ರಮೀಳಮ್ಮ, ತಾ.ಪಂ. ಸದಸ್ಯ ನಾರಾಯಣಸ್ವಾಮಿ, ಗ್ರಾ.ಪಂ. ಸದಸ್ಯರಾದ ಸುದರ್ಶನ್, ಎಸ್.ಎನ್. ವೆಂಕಟೇಶ್, ಭಾಗ್ಯಮ್ಮ, ಲೋಕೇಶ್, ಹಾಗೂ ವಿ.ಎಸ್.ಎಸ್.ಎನ್. ನಿರ್ದೇಶಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

