ಅಸಮರ್ಪಕ ಪಡಿತರ ಖಂಡಿಸಿ ಪ್ರತಿಭಟನೆ
ಚಿಂತಾಮಣಿ: ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಆಹಾರ ಧಾನ್ಯ ಪದಾರ್ಥಗಳನ್ನು ವಿತರಣೆ ಮಾಡುವಲ್ಲಿ ಡಿಪೋ ಮಾಲೀಕರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಗುಡಮಾರ್ಲಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಮಂಗಳವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಮುರುಗಮಲ್ಲ ಹೋಬಳಿ ಗುಡಮಾರ್ಲಹಳ್ಳಿ ಗ್ರಾಮದ ಡಿಪೋ ನಂ.51 ನ ಮಾಲೀಕ ವೆಂಕಟಶಿವಾರೆಡ್ಡಿ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ, ಸಕ್ಕರೆ ಸೇರಿದಂತೆ ಮತ್ತಿತರೆ ಆಹಾರ ಧಾನ್ಯ ಪದಾರ್ಥಗಳನ್ನು 70ಕ್ಕೂ ಹೆಚ್ಚು ಕಾರ್ಡ್ದಾರರಿಗೆ ನೀಡದೆ, ಕಿರಿ ಕಿರಿ ಉಂಟು ಮಾಡುತ್ತಾ ಸುತ್ತಮುತ್ತಲಿನ ಹಲವು ಗ್ರಾಮಸ್ಥರನ್ನು ಪರದಾಡಿಸುತ್ತಿರುವ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಬೆಳಗ್ಗೆ ಏಕಾಏಕಿ ನೂರಾರು ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ತಡೆಹಾಕಿ ಡಿಪೋ ಎದುರು ಪ್ರತಿಭಟನೆ ನಡೆಸಿದರು.
ಮಾತಿನ ಚಕಮಕಿ: ಕಳೆದ ಒಂದು ತಿಂಗಳಿಂದ ಪಡಿತರ ಚೀಟಿದಾರರಿಗೆ ಡಿಪೋ ಮಾಲೀಕ ಆಹಾರ ಧಾನ್ಯ ಪದಾರ್ಥಗಳನ್ನು ವಿತರಿಸದೆ ಮಹಿಳೆಯರನ್ನು ಹಾಗೂ ವೃದ್ಧರನ್ನು ಪರದಾಡಿಸುತ್ತಿರುವ ಮಾಲೀಕನ ಧೋರಣೆ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕಾಗಮಿಸಿದ ಆಹಾರ ಇಲಾಖೆ ನಿರ್ದೇಶಕರಾದ ಶಿವಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದರು.
ಡಿಪೋ ಮಾಲೀಕ ವೆಂಕಟಶಿವಾರೆಡ್ಡಿ ಪ್ರತಿಕ್ರಿಯೆ ನೀಡಿ, ಈ ಬಾರಿ 70 ಕ್ಕೂ ಹೆಚ್ಚು ಮಂದಿಗೆ ಹೊಸ ಪಡಿತರ ಚೀಟಿ ನೀಡಿರುವುದರಿಂದ ಪಡಿತರ ಕೊರತೆಯಾಗಿರುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಮುಂದಿನ ತಿಂಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜನರಿಗೆ ಅಧಿಕಾರಿಗಳು ಹಾಗೂ ಮಾಲೀಕರು ಭರವಸೆಯನ್ನು ನೀಡಿದರು. ನಂತರ ಗ್ರಾಮಸ್ಥರು ರಸ್ತೆ ತಡೆ ಕೈಬಿಟ್ಟರು.
ಗ್ರಾಮದ ಮುಖಂಡರಾದ ಮಿಲ್ಟ್ರಿ ಶ್ರೀನಿವಾಸ್, ಯರಕೋಟೆ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜ್,ಶ್ರೀನಿವಾಸರೆಡ್ಡಿ,ನಾರಾಯಣಸ್ವಾಮಿ, ಮುನಿವೆಂಕಟಮ್ಮ, ಜಯಮ್ಮ,ನಾರಾಯಣಮ್ಮ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

