ಎಸ್ಬಿಐನಿಂದ ಕೃಷಿ ಸಾಲ ಮೇಳ
ಶಿಡ್ಲಘಟ್ಟ: ವಿದ್ಯಾಭ್ಯಾಸಕ್ಕಾಗಿ 4 ಲಕ್ಷದವರೆಗೆ ಸಾಲವನ್ನು ಯಾವುದೇ ಭದ್ರತೆ ಇಲ್ಲದೆ ಕೊಡಲಾಗುವುದೆಂದು ಎಸ್ಬಿಐನ ಎಜಿಎಂ ವಾಸು ಪಟ್ಣಣದಲ್ಲಿ ಏರ್ಪಡಿಸಿದ್ದ ಕೃಷಿ ಸಾಲ ಮೇಳದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮೇಳದಲ್ಲಿ ಮಾತನಾಡಿದ ಎಜಿಎಂ ವಾಸು ಬ್ಯಾಂಕಿನ ಅಧಿಕಾರಿಗಳು ಜನರಿಗೆ ಸ್ವಂದಿಸಿ ಪ್ರೀತಿ ವಿಶ್ವಾಸದಿಂದ ಕಾಣಬೇಕೆಂದು ಹೇಳಿದರು. ಶಿಡ್ಲಘಟ್ಟ ರೇಷ್ಮೆಗೆ ಹೆಸರುವಾಸಿಯಾಗಿದ್ದು ಅತಿ ಹೆಚ್ಚು ಠೇವಣಿಯನ್ನು ಮಾಡಿ ಹೆಸರು ಮಾಡಿದೆಯೆಂದು ತಿಳಿಸಿದರು. ವಿದೇಶಗಳಲ್ಲಿ ಓದುವ ವಿದ್ಯಾರ್ಥಿಗಳಿಗಾಗಿ 20 ಲಕ್ಷದವರೆಗೆ ಸಾಲ ನೀಡುತ್ತಿದ್ದು ಭದ್ರತೆಯನ್ನು ಒದಗಿಸುವ ಅವಶ್ಯಕತೆಯಿದೆಯೆಂದು ತಿಳಿಸಿದರು. ಕೃಷಿಕರಿಗೆ 1 ಲಕ್ಷದವರೆಗಿನ ಸಾಲಕ್ಕೆ ಭದ್ರತೆ ಅವಶ್ಯಕತೆಯಿಲ್ಲವೆಂದು ಹೆಚ್ಚಿನ ಮೊತ್ತಕ್ಕೆ ಭದ್ರತೆಯ ಅವಶ್ಯಕತೆ ಇದೆಯೆಂದು ತಿಳಿಸಿದರು. ಶೆಟ್ಟಿಹಳ್ಳಿಯ ರೈತ ಎಸ್.ಬಿ ಮೂತರ್ ಮಾತನಾಡಿ, ಬ್ಯಾಂಕಿನಿಂದ ಸಾಲ ಪಡೆದು ಇಂದು 25 ಎಕರೆ ಜಮೀನು ಮಾಡಿಕೊಂಡು 5 ಬೋರ್ವೆಲ್ ಸಹ ಕೊರೆಸಿರುವುದಾಗಿ ತಿಳಿಸಿದರು. ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಕಟ್ಟಿದ ಗ್ರಾಹಕರಿಗೆ ಸನ್ಮಾನವನ್ನು ಮಾಡಲಾಯಿತು. ಕೃಷಿಕರಿಗೆ ಬ್ಯಾಂಕಿನಿಂದ ಸಾಲದ ಚೆಕ್ಕನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

