ಕೋಲಾರ

ಯರ್ರಕೋಟೆ ನರಮೇಧಕ್ಕೆ 2 ವರ್ಷ: ಮಾಸದ ಕಹಿ ನೆನಪು

Published On :

ಚಿಂತಾಮಣಿ: ತಾಲೂಕಿನ ಯರ್ರಕೋಟೆ ಗ್ರಾಮದಲ್ಲಿ 2 ಕಡೆ ನರಮೇಧ ನಡೆದು 10 ಜನರ ಕೊಲೆಗೈದ ಘಟನೆಗೆ 2 ವರ್ಷ ಸಂದರೂ ಆ ಕಹಿ ನೆನಪು ಜನರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ.
ಯರ್ರಕೋಟೆ ಗ್ರಾಮದಲ್ಲಿ 6 ಮಂದಿಯನ್ನು ಹಾಗೂ ಬಾರ್ಲಹಳ್ಳಿಯಲ್ಲಿ 4 ಜನರನ್ನು ಕಳ್ಳರೆಂದು ಭಾವಿಸಿ 10 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆಗೆ ಆ.2ಕ್ಕೆ 2 ವರ್ಷ ಕಳೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಟಾಟಾ ಸುಮೋದಲ್ಲಿ ಬಂದ ಗುಂಪೊಂದು ಆ. 2, 2011 ರಂದು ತಾಲೂಕಿನ ಯರ್ರಕೋಟೆ ಕ್ರಾಸ್ ಬಳಿ ಮದ್ಯಾಹ್ನ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಕಂಡ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಕಳ್ಳರೆಂದು ಭಾವಿಸಿ ರೊಚ್ಚಿಗೆದ್ದು ಕಲ್ಲು, ದೊಣ್ಣೆ, ಮಚ್ಚುಗಳಿಂದ 6 ಜನರನ್ನು ಸಾಯಿಸಿದರು.
ಇನ್ನು ಹಲವರು ತಪ್ಪಿಸಿಕೊಳ್ಳಲು ಹೋಗಿ ಬಾರ್ಲಹಳ್ಳಿ ಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಇವರನ್ನು ಹಿಡಿದು 4 ಜನರನ್ನು ಸ್ಥಳದಲ್ಲೆ ಹತ್ಯೆ ಮಾಡಿದರು.
ಅಮಾಯಕ ಜನರ ಬಂಧನ: ಬಾರ್ಲಹಳ್ಳಿ ಮತ್ತು ಯರ್ರಕೋಟೆ ಗ್ರಾಮದ ನರಮೇಧಕ್ಕೆ ಸಂಬಂಧಿಸಿ ಪೊಲೀಸರು ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ಜನರನ್ನು ಬಂಧಿಸಿದರು. ಬಂಧನಕ್ಕೊಳಗಾದ 71 ಮಂದಿಯನ್ನು ಬಿಡುಗಡೆಗೊಳಿಸಲು ಹಲವು ರಾಜಕೀಯ ಗಣ್ಯರು ಇದನ್ನೆ ಬಂಡವಾಳವನ್ನಾಗಿ ಮಾಡಿ ರಾಜಕೀಯ ಬಣ್ಣ ಬಳಿದು ಅವರವರ ಸ್ವಾರ್ಥಕ್ಕೆ ಮುಗ್ಧ ಜನರಿಗೆ ಆಶ್ವಾಸನೆಗಳನ್ನು ನೀಡಿದರು.
ಏನೇ ಆಗಲಿ ಮರಳಿ ಇಂತಹ ಘೋರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದೇ ಆದರೆ ಜನರು ಶಾಂತಿ ನೆಮ್ಮದಿಯಿಂದ ಜೀವಿಸಲು ಸಾಧ್ಯವೆಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.


- ಎನ್.ಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.