ಕೋಲಾರ

ಬಂಗಾರಪೇಟೆ- ಕೆಜಿಎಫ್ ರಸ್ತೆ ಅಗಲೀಕರಣಕ್ಕೆ ಕೆಲವರ ವಿರೋಧ

Published On :

ಬಂಗಾರಪೇಟೆ: ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣ ಯೋಜನೆ ಕಾರ್ಯಗತವಾದರೆ ಹಲವಾರು ಮಂದಿ ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಾರೆಂದು ಹಲವು ವರ್ತಕರು ಯೋಜನೆ ತಡೆಯಲು ಮುಂದಾಗಿದ್ದಾರೆ.
ಪಟ್ಟಣದಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ದ್ವಿಗುಣವಾಗುತ್ತಿದ್ದು, ವಾಹನಗಳ ಸಂಖ್ಯೆಗೆ ತಕ್ಕಂತೆ ರಸ್ತೆಗಳಿಲ್ಲದೆ ಪ್ರತಿದಿನ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದವು. ಈ ಅವಘಡಗಳಿಗೆ ಕಿರಿದಾದ ರಸ್ತೆಗಳೇ ಕಾರಣವೆಂದು ಸಾರ್ವಜನಿಕರು ದೂರಿ ಮೊದಲು ಎಸ್.ಎನ್.ರೆಸಾರ್ಟ್‌ನಿಂದ ದೇಶಿಹಳ್ಳಿವರೆಗೂ ಡಬಲ್ ರಸ್ತೆ ಮಾಡುವಂತೆ ಹಲವು ದಶಕಗಳಿಂದ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಯಾವೊಬ್ಬ ಶಾಸಕರು ಸಾರ್ವಜನಿಕರ ಕೂಗಿಗೆ ಬೆಲೆ ಕೊಟ್ಟಿರಲಿಲ್ಲ. ಈಗ ನೂತನ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶಾಸಕರಾದ ಕೂಡಲೆ ಪಟ್ಟಣದಿಂದ ಕೆಜಿಎಫ್‌ಗೆ ಹೋಗುವ ಪ್ರಮುಖ ರಸ್ತೆಯನ್ನು ಡಬಲ್ ರಸ್ತೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಲೋಕೋಪಯೋಗಿ ಇಲಾಖೆ ಮುಖಾಂತರ ಈ ಯೋಜನೆಗೆ ಕ್ರಿಯಾಯೋಜನೆ ರೂಪಿಸುವಂತೆ ಆದೇಶ ನೀಡಿ ಈಗಾಗಲೇ ಸರ್ವೆ ಕಾರ್ಯ ಸಹ ಮುಗಿಸಲಾಗಿದೆ. ಮಧ್ಯ ರಸ್ತೆಯಿಂದ 45ಅಡಿ ಜಾಗವನ್ನು ಡಬಲ್ ರಸ್ತೆಗಾಗಿ ವಶಪಡಿಸಿಕೊಳ್ಳಲು ಚಿಂತಿಸಲಾಗುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಹಲವು ದಶಕಗಳಿಂದ ವಾಸವಿರುವ ಮನೆಗಳು, ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ನೆಲಸಮವಾಗಲಿವೆ. ಅಲ್ಲದೆ ಕೆಲವರ ಮನೆಗಳು ಸಂಪೂರ್ಣವಾಗಿ ರಸ್ತೆಗೆ ಬಲಿಯಾಗಲಿರುವುದರಿಂದ ನಿರಾಶ್ರಿತ ವರ್ತಕರು ರಿಯಾಯಿತಿ ನೀಡುವಂತೆ ಶಾಸಕರಿಗೆ ಈಗಾಗಲೇ ಮನವಿ ಮಾಡಿದ್ದಾರೆ.
ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪರನ್ನು ಸಹ ವರ್ತಕರ ನಿಯೋಗ ಭೇಟಿ ಮಾಡಿ ಚರ್ಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.