ತೇಜೋವಧೆ ಪತ್ರಕರ್ತರ ಉದ್ದೇಶ ಆಗದಿರಲಿ: ಸಚಿವ ಮುನಿಯಪ್ಪ
ಮಾಲೂರು: ವರದಿಗಾರಿಕೆಯಲ್ಲಿ ತೇಜೋವಧೆ ಮಾಡುವುದೇ ಪತ್ರಕರ್ತರ ಉದ್ದೇಶವಾಗಬಾರದು. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳಿಂದ ಮಾಡಿ ವರದಿ ಜನಮನ್ನಣೆಗೆ ಗಳಿಸಬಲ್ಲದು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪತ್ರಕರ್ತ ಭವನ ಉದ್ಘಾಟಿಸಿ ಮಾತನಾಡಿದ ಅವರು, ವಾಸ್ತವಾಂಶದ ವರದಿ ನೀಡುವುದು ಪತ್ರಿಕಾ ಧರ್ಮ. ಆದರೆ ಕೆಲವು ಪತ್ರಕರ್ತರು ಪತ್ರಿಕಾ ಧರ್ಮ ಉಲ್ಲಂಘಿಸಿ ವರದಿ ಮಾಡುವ ಮೂಲಕ ತೇಜೋವಧೆ ನಡೆಸುವುದು ಸಲ್ಲದು. ಪತ್ರಕರ್ತರು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಹಿಂದಿನ ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ಸಹಕಾರದಲ್ಲಿ 25 ವರ್ಷ ಕಳೆದಿರುವ ತಾಲೂಕು ಪತ್ರಕರ್ತ ಸಂಘಕ್ಕೆ ಕಟ್ಟಡ ಕೊಟ್ಟಿರುವುದು ಶ್ಲಾಘನೀಯವಾಗಿದೆ. ನನ್ನ ಸಂಸದ ನಿಧಿಯಿಂದ ಮಾಲೂರು ತಾಲೂಕು ಪತ್ರಕರ್ತ ಭವನಕ್ಕೆ ತಮ್ಮ ನಿಧಿಯಿಂದ 5 ಲಕ್ಷ ನೀಡುವುದಾಗಿ ತಿಳಿಸಿದ ಕೇಂದ್ರ ಸಚಿವರು, ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್, ಅರ್ಹ ಪತ್ರಕರ್ತರಿಗೆ ಗೃಹ ಯೋಜನೆಯಡಿ ನಿವೇಶನ ಹಾಗೂ ಮನೆಗಳನ್ನು ವಿತರಿಸುವ ಬಗ್ಗೆ ಸಂಬಂಧಪಟ್ಟ ರಾಜ್ಯ ಸರ್ಕಾರದ ಸಚಿವರೊಡನೆ ಚರ್ಚಿಸಿ ಮುಂಬರಲಿರುವ ಬಜೆಟ್ನಲ್ಲೇ ಪ್ರಕಟವಾಗುವ ರೀತಿಯಲ್ಲಿ ಮಾಡಲಾಗುವುದು ಎಂದರು.
ಶಾಸಕ ಮಂಜುನಾಥ್ ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾ.ಪಂ. ಸದಸ್ಯನಾಗಿರುವ ಹಿರಿಯ ಪತ್ರಕರ್ತ ಎಸ್.ವಿ. ಲೋಕೇಶ್ ಅವರನ್ನು ಗಣ್ಯರು ಅತ್ಮೀಯವಾಗಿ ಸನ್ಮಾನಿಸಿದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಎಂ.ವಿ. ರವೀಂದ್ರ, ಕಾರ್ಯದರ್ಶಿ ರವಿ ಕುಮಾರ್, ಉಪಾಧ್ಯಕ್ಷ ಮಂಜುನಾಥ್ ಗೌಡ, ತಾ.ಪಂ. ಅಧ್ಯಕ್ಷ ಕೆ.ಚಂದ್ರಪ್ಪ, ಉಪಾಧ್ಯಕ್ಷೆ ನಾಗವೇಣಿ ಚಂದ್ರಪ್ಪ, ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯ ವಾಸುದೇವ ಹೊಳ್ಳ, ಜಿಲ್ಲಾ ಕಾರ್ಯದರ್ಶಿ ಗಣೇಶ್, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

