ಕೋಲಾರ

'ಪ್ರಾಮಾಣಿಕ, ವ್ಯಕ್ತಿತ್ವ ವಿಕಸನಕ್ಕಾಗಿ ವಿವೇಕಾನಂದರ ವಿಚಾರಧಾರೆ ಅಗತ್ಯ'

Published On :

ಗೌರಿಬಿದನೂರು: ಇಂದಿನ ಯುವ ಪೀಳಿಗೆ ಶುದ್ಧ, ಪ್ರಾಮಾಣಿಕ ವ್ಯಕ್ತಿತ್ವ ವಿಕಸನ ಪಡೆಯಲು ಸ್ವಾಮಿ ವಿವೇಕಾನಂದ ವಿಚಾರಧಾರೆಯನ್ನು ದಿನನಿತ್ಯದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರು ಹಲಸೂರಿನ ರಾಮಕೃಷ್ಣಾಶ್ರಮದ ತ್ಯಾಗೀಶ್ವರಾನಂದಜೀ ಮಹರಾಜ್ ತಿಳಿಸಿದರು.
ಗೌರಿಬಿದನೂರು ನ್ಯಾಷನಲ್ ಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದು ಕರೆ ನೀಡಿದರು.
 ಇದೇ ಸಂದರ್ಭದಲ್ಲಿ ಮುಖ್ಯ ಭಾಷಣಕರರಾಗಿ ಎವಿಎನ್‌ಆರ್ ಕಾಲೇಜಿನ ಉಪನ್ಯಾಸಕರಾದ ಎಚ್‌ಎನ್ ಚಂದ್ರಶೇಖರ್ ಮಾತನಾಡಿ ಮುಖ್ಯವಾಗಿ ಈ ದೇಶದ ಶಿಕ್ಷಕರು ಸ್ವಾಮಿ ವಿವೇಕಾನಂದರ ವಿಚಾರ ಧಾರೆಯ ಮಹತ್ವವನ್ನು ಅರಿತು ಶಿಕ್ಷಣಾರ್ಥಿಗಳ ಮೇಲೆ ಪ್ರಭಾವ ಬೀರುವಲ್ಲಿ ಮಹತ್ವ ಪಾತ್ರ ವಹಿಸಬೇಕು ಎಂದು ಹೇಳಿದರು.
ಬೆಂಗಳೂರು ರಾಮಕೃಷ್ಣ, ಶಾರದ ಕೇಂದ್ರದ ಕಾರ್ಯದರ್ಶಿಗಳಾದ ಸ್ವಾಮಿ ರಾಘವೇಶಾನಂದ ಮಹರಾಜ್ ಆಶೀರ್ವಚನದ ಮಾತುಗಳಲ್ಲಿ ಸ್ವಾಮಿ ವಿವೇಕಾನಂದರ ಚೈತನ್ಯ, ಶಕ್ತಿಯ ಬಗ್ಗೆ ಅನೇಕ ನಿದರ್ಶನಗಳನ್ನು ನೀಡುತ್ತಾ ಜೀವನ ಮೌಲ್ಯಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಸ್ವಾಮಿ ಪೂರ್ಣಾನಂದ ಜೀ ಮಹಾರಾಜ್, ಸ್ವಾಮಿ ಶಿವಸ್ವರೂಪಾನಂದ ಜೀ ಮಹಾರಾಜ್, ಸ್ವಾಮಿ ಮಹಾಕಾವ್ಯಾನಂದ ಜೀ ಮಹಾರಾಜ್ ಉಪಸ್ಥಿತರಿದ್ದರು.
ತಾ.ಪಂ. ಅಧ್ಯಕ್ಷರಾದ ನಿರಂಜನ್ ಉದ್ಘಾಟಿಸಿದರು. ವಿಡಿ ನಾಗೇಶ್ ಸ್ವಾಗತಿಸಿದರು. ಹನುಮಂತರೆಡ್ಡಿ ವಂದಿಸಿದರು. ಕೆ. ವರಹಾಮೂರ್ತಿ ನಿರೂಪಿಸಿದರು. ಸಮಾರಂಭದಲ್ಲಿ ಮತ್ತು ಬೃಹತ್ ಯಾತ್ರೆಯಲ್ಲಿ ಗೌರಿಬಿದನೂರು ಪಟ್ಟಣದ ವಿವಿಧ ಪ್ರೌಢಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು ಮತ್ತು 3000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.