ಕೋಲಾರ

ಅವೈಜ್ಞಾನಿಕ ಸದಾಶಿವ ವರದಿ ತಿರಸ್ಕರಿಸಿ: ಸಿದ್ಧರಾಮೇಶ್ವರ ಸ್ವಾಮಿ ಒತ್ತಾಯ

Published On :

ಮಾಲೂರು: ಪರಿಶಿಷ್ಟ ಜಾತಿಯ ಪಟ್ಟಿಯಿಂದ ಭೋವಿ ಸಮಾಜವನ್ನು ಹೊರತೆಗೆಯಬೇಕೆಂಬ ನಿವೃತ್ತ ನ್ಯಾ. ಸದಾಶಿವ ವರದಿ ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರವು ವರದಿಯನ್ನು ತಿರಸ್ಕರಿಸಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಒತ್ತಾಯಿಸಿದರು.
ಅವರು ಪಟ್ಟಣದ ಕರ್ನಾಟಕ ಭೋವಿ ಸಂಘ, ಕರ್ನಾಟಕ ರಾಜ್ಯ ಭೋವಿ ಸರ್ಕಾರಿ ನೌಕರರ ಸಂಘ ಹಾಗೂ ಭೋವಿ ಯುವ ವೇದಿಕೆ ಸಂಯುಕ್ತವಾಗಿ ಶನಿವಾರದಂದು ಇಲ್ಲಿನ ರಾಜ್‌ಗೋಪಾಲ್ ಭೋವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ 60 ಲಕ್ಷ ರು.ವೆಚ್ಚದ ಸಮುದಾಯ ಭವನ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಈ ಅವೈಜ್ಞಾನಿಕ ವರದಿಯನ್ನು ಒಪ್ಪಬಾರದು. ಮೇಲ್ವರ್ಗದ ರಾಜಕೀಯ ಹಿತಾಶಕ್ತಿಗಳು ಒಗ್ಗಟಿನಿಂದಿರುವ 101 ಸಮಾಜಗಳನ್ನು ಅವೈಜ್ಞಾನಿಕ ವರದಿ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಪರಿಶಿಷ್ಟ ಸಮಾಜದ ಬಂಧುಗಳು ಎಚ್ಚರಿಕೆಯಿಂದ ಇರಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಗಾರಪೇಟೆಯ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಿಂದ 1905 ರಿಂದ ಇದ್ದ ನಮ್ಮ ಭೋವಿ ಜನಾಂಗವನ್ನು ತೆಗೆಯುವ ಹುನ್ನಾರ ನಡೆದಿದ್ದು, ಸಮುದಾಯ ಬಂಧುಗಳು ತಮ್ಮ-ತಮ್ಮಲ್ಲಿ ಇರುವ ವೈಮನಸ್ಸುಗಳನ್ನು ಬದಿಗೊತ್ತಿ ಸದಾಶಿವ ವರದಿ ವಿರುದ್ಧ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ಭಾನುವಾರ ದಂದು ಬೆಂಗಳೂರಿನ ನಡೆಯಲಿರುವ ಸಭೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಜುಲೈ 2 ರಂದು ರಾಜ್ಯಕ್ಕೆ ಬರಲಿರುವ ಕೇಂದ್ರ ಯೋಜನಾ ತಂಡಕ್ಕೆ ಸರಿಯಾದ ಮಾಹಿತಿ ನೀಡಬೇಕು ಎಂದರು.
ಸೋಮಶೇಖರ್, ವಿ.ಹನುಮಪ್ಪ, ಚಿಕ್ಕಬಳ್ಳಾಪುರ ಜಿ.ಪಂ.ಮಾಜಿ ಸದಸ್ಯ ಕೃಷ್ಣ, ಜಿ.ಪಂ.ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಕೆ.ಆರ್.ಬೀರೇಗೌಡ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಗಣೇಶ್, ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಕೃಷ್ಣಾ ರೆಡ್ಡಿ, ನಿರ್ದೇಶಕ ಹನುಮಂತಯ್ಯ, ತಾ.ಪಂ. ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎಸ್.ವಿ.ಲೋಕೇಶ್, ಮಾಜಿ ಉಪಾಧ್ಯಕ್ಷೆ ಪಾರ್ವತಮ್ಮ ಸ್ವಾಮಿ, ಪುರಸಭೆ ಸದಸ್ಯ ವೇಮನ, ಎಂ.ರಾಮಮೂರ್ತಿಸಿ,ಮಾಲಾದ್ರಿ, ಜಿ.ಶ್ರೀನಿವಾಸ್, ಕಾಮಸಮುದ್ರ ಅರಕ್ಷಕ ನಿರೀಕ್ಷಕ ರಾಘವೇಂದ್ರ ಪ್ರಕಾಶ್, ಇ.ಓ.ರಾಮಕೃಷ್ಣಪ್ಪ, ಲೋಕೇಶ್, ಅಶ್ವಥಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.