ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಗೌರಿಬಿದನೂರು: ಗುರುವಾರ ನಡೆದ ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಶಾಂತಲಾ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ತಾಲೂಕಿನಲ್ಲಿ ಒಟ್ಟು 25 ಕ್ಷೇತ್ರಗಳನ್ನು ಹೊಂದಿರುವ ತಾಪಂನಲ್ಲಿ ಕಾಂಗ್ರೆಸ್ 18, ಜೆಡಿಎಸ್ 3 ಹಾಗೂ ಬಿಜೆಪಿ 4 ಸದಸ್ಯರಿದ್ದು ಬಹುಮತದಂತೆ ಕಾಂಗ್ರೆಸ್ ಸದಸ್ಯರು 20ತಿಂಗಳ ಕಾಲದ ಒಪ್ಪಂದ ಮಾಡಿಕೊಂಡು ಅಧ್ಯಕ್ಷ ಸ್ಥಾನದ ಮೀಸಲು ಎಸ್ಟಿ ಮತ್ತು ಉಪಾಧ್ಯಕ್ಷರ ಕ್ಷೇತ್ರ ಸಾಮಾನ್ಯ ಮಹಿಳೆಗಿತ್ತು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಒಪ್ಪಂದದಂತೆ ತಲಾ 20 ತಿಂಗಳು ಕಳೆದಿದ್ದರಿಂದ ಉಳಿದ 6 ತಿಂಗಳ ಅವಧಿಗೆ ಇತರೆ ಸದಸ್ಯರಿಗೆ ತೆರವು ಮಾಡಲಾಗಿತ್ತು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ಇಒ ರೆಡ್ಡಪ್ಪ ಸದಸ್ಯರು ಉಪಸ್ಥಿತರಿದ್ದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಮದನಹಳ್ಳಿ ಗ್ರಾಪಂ ಅಧ್ಯಕ್ಷರ ಆಯ್ಕೆ
ಕೋಲಾರ: ತಾಲೂಕಿನ ಮದನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ವಡ್ಡರಪಾಳ್ಯದ ವಿ. ವೆಂಕಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಆದ ಧಮ್ಮ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಅ.31 ರಂದು ನಡೆದ ಚುನಾವಾಣೆಯಲ್ಲಿ ವಿ.ವೆಂಕಟಪ್ಪ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ಪಂಚಾಯತಿ 1994 ರಿಂದ ಈವರೆಗೂ ಕಾಂಗ್ರೆಸ್ ವಶದಲ್ಲಿದ್ದು ಕಾಂಗ್ರೆಸ್ನ ಹತ್ತು ಮಂದಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ವಿ. ವೆಂಕಟಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲ್ಕುಮಾರ್, ಜನ್ನಘಟ್ಟ ಕೃಷ್ಣಪ್ಪ, ಎಸ್.ಎನ್. ಮಂಜುನಾಥ್ ಇದ್ದರು.
ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ
ಶಿಡ್ಲಘಟ್ಟ: ಡಾಲ್ಪಿನ್ ಪಬ್ಲಿಕ್ ಶಾಲೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಜನ ಜಾಗೃತಿ ಆಂದೋಳನವನ್ನು ತಾಲ್ಲೂಕು ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿತ್ತು. ಡಾಲ್ಪಿನ್ ಪಬ್ಲಿಕ್ ಶಾಲೆಯ ಸಿಬಿಎಸ್ಸಿ ವತಿಯಿಂದ ಅ. 28 ರಿಂದ ನ.2 ವರೆಗೆ ಭ್ರಷ್ಟಾಚಾರ ನಿರ್ಮೂಲನೆ ವಾರವನ್ನಾಗಿ ಆಚರಣೆ ಮಾಡುತ್ತಿದ್ದು, ಮೆರವಣಿಗೆ ಹೊರಟು ಘೋಷಣೆ ಕೊಗಿ, ನಂತರ ತಾಲೂಕು ಕಚೇರಿ ಮುಂದೆ ಬಂದು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಪ್ರಾಂಶುಪಾಲ ಆರೀಫ್ ಅನಿಫ್, ಎಂ.ಡಿ ಅಶೋಕ್, ನಂದೀಶ್, ವಿನಯ್, ಹರಿ, ಸಂಪದ, ನೂರುಲ್ಲಾ ಬಿಸ್ಬಾ ಇದ್ದರು.
ರಸ್ತೆ ಕಾಮಗಾರಿ ಆರಂಭಕ್ಕೆ ಸ್ವಾಗತ
ಟೇಕಲ್: ಟೇಕಲ್ ಗ್ರಾಪಂ ವ್ಯಾಪ್ತಿಯ ಬಂಡೂರು ಅಗ್ರಹಾರದಿಂದ ವೀರಕಪುತ್ರದ ಮಧ್ಯೆ ನಬಾರ್ಡ್ ಯೋಜನೆಯಡಿ 50 ಲಕ್ಷ ರು. ವೆಚ್ಚದ ರಸ್ತೆ ಕಾಮಗಾರಿ ಪ್ರಾರಂಭಗೊಂಡಿರುವ ಬಗ್ಗೆ ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಹಾಗೂ ಬಂಡೂರು ಅಗ್ರಹಾರದ ಡಾ.ಪಿ. ನಾರಾಯಣಸ್ವಾಮಿ ಮಾತನಾಡಿ, 2008-09ನೇ ಸಾಲಿನಲ್ಲಿ ರಸ್ತೆಗೆ ಅಂದಿನ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಶ್ರಮದ ಪ್ರತಿಫಲ ಇದೀಗ ರಸ್ತೆಯನ್ನು ಶಾಸಕ ಕೆ.ಎಸ್. ಮಂಜುನಾಥಗೌಡ ಉದ್ಘಾಟಿಸಿದ್ದು ಗ್ರಾಮದ ಪರ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಬಂಡೂರು ಅಗ್ರಹಾರದಿಂದ ವೀರಕಪುತ್ರದ ಮಧ್ಯೆ ಬಹುತೇಕ ರೈತರು ರಸ್ತೆ ನಿರ್ಮಿಸಲು ಸ್ಥಳಾವಕಾಶ ನೀಡಿದ್ದು ಬಹಳ ವರ್ಷಗಳ ತರುವಾಯ ರಸ್ತೆಯೇ ಇಲ್ಲದ ಈ ಗ್ರಾಮಕ್ಕೆ ರೈತರು ಸ್ಥಳ ನೀಡಿ ತಮ್ಮ ಸಹಾಯ ಹಸ್ತ ನೀಡಿರುವುದಕ್ಕೆ ಧನ್ಯವಾದಗಳು ಎಂದು ಡಾ.ಪಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

