ಕೋಲಾರ

ದಸರಾ ಮಾದರಿಯಲ್ಲಿ ರಾಜ್ಯೋತ್ಸವ ಮೆರವಣಿಗೆ

Published On :

ಬಂಗಾರಪೇಟೆ: ಪಟ್ಟಣದಲ್ಲಿ ಕನ್ನಡ ರಾಜೋತ್ಸವದ ಅಂಗವಾಗಿ ನಡೆದ ಭವ್ಯ ಮೆರವಣಿಗೆ ಮೈಸೂರಿನ ದಸರಾ ಮಾದರಿಯಲ್ಲಿ ನಡೆದು ಎಲ್ಲರ ಗಮನ ಸೆಳೆಯಿತಲ್ಲದೆ ಉರಿಬಿಸಿಲಲ್ಲಿ ಸಾವಿರಾರು ಮಂದಿ ನಿಂತು ಮೆರವಣಿಗೆ ವೀಕ್ಷಿಸಿದರು.
ಕನ್ನಡ ಸಂಘದ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಚಾಲನೆ ನೀಡಿದರು. ಮೊದಲು ತಾಯಿ ಭುವನೇಶ್ವರಿ ಭಾವಚಿತ್ರವನ್ನು ಹೊತ್ತು ಸಾಗಿದ ಪಲ್ಲಕಿ ನಂತರ ಅದರ ಹಿಂದೆ ಸುಮಾರು 40ಕ್ಕೂ ಹೆಚ್ಚಿನ ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸ್ತಬ್ಧ ಚಿತ್ರಗಳು ಹಿಂಬಾಲಿಸಿದವು.ಬಜಾರ್ ರಸ್ತೆ, ನಂದಿ ಮೆಡಿಕಲ್ಸ್, ಕುವೆಂಪು ವೃತ್ತ, ಕಾರಹಳ್ಳಿ ವೃತ್ತ ಮತ್ತು ಬಸ್ನಿಲ್ದಾಣದ ಕಡೆ ಮೆರವಣಿಗೆ ಸಾಗಿ ಸರ್ಕಾರಿ ಮಾದರಿ ಕನ್ನಡ ಶಾಲೆ ಆವರಣಕ್ಕೆ ಬಂದು ಮುಕ್ತಾಯವಾಯಿತು. ಮೆರವಣಿಗೆ ಉದ್ದಕ್ಕೂ ಕನ್ನಡ ಪರ ಜೈಕಾರಗಳು ಮೊಳಗಿದವು. ಯುವಕರು ಕನ್ನಡ ಗೀತೆಗಳಿಗೆ ಮೈಮರೆತು ಕುಣಿದರು. ಜಾನಪದ ಕಲಾವಿದರು ಬಿಸಿಲನ್ನು ಲೆಕ್ಕಿಸದೆ ಕುಣಿದು ಜನರನ್ನು ಖುಷಿಪಡಿಸಿದರು.
ಮೆರವಣಿಗೆಯಲ್ಲಿ ಮಹಿಳಾ ದೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಗಾರುಡಿ ಗೊಂಬೆ, ನವಿಲು, ಉದ್ದಮನುಷ್ಯ, ಕೀಲು ಕುದುರೆ ಮುಂತಾದ ಜಾನಪದ ಕುಣಿತಗಳು ನೋಡುಗರ ಗಮನಸೆಳೆಯಿತು. ಇದಕ್ಕೂ ಮುನ್ನ ಕನ್ನಡಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ರಾಜೋತ್ಸವದ ವೇಳೆ ಸಮಗ್ರ ಕರ್ನಾಟಕದ ಕನಸು ಸಾಕಾರಗೊಳಿಸಲು ಚದುರಿ ಹೋಗಿರುವ ಕನ್ನಡಿಗರು ಒಂದಾಗಬೇಕು ಆಗಲೆ ಉದಯವಾಯಿತು ನಮ್ಮ ಚಲುವ ಕನ್ನಡನಾಡು ಎಂಬುದಕ್ಕೆ ಅರ್ಥ ಬರುವುದು ಎಂದರಲ್ಲದೆ ಈಡೀ ರಾಜ್ಯದಲ್ಲಿ ನವೆಂಬರರ್ತಿಂಗಳಲ್ಲಿ ಮಾತ್ರ ರಾಜೋತ್ಸವ ಆಚರಣೆ ಮಾಡಿ ನಂತರ ಮರೆಯುವರು ಆದರೆ ಇಲ್ಲಿ ಮಾತ್ರ ವರ್ಷವಿಡೀ ಕನ್ನಡ ಕಾರ್ಯಕ್ರಮಗಳು ನಡೆಯುವ ಮೂಲಕ ಇತರರಿಗೆ ಮಾದರಿಯಾಗಿದೆ ಕ್ಷೇತ್ರ ಗಡಿ ಭಾಗವಾಗಿದ್ದರೂ ಇಲ್ಲಿ ಭಾಷೆ ಸಮಸ್ಯೆಯಿಲ್ಲ ಎಲ್ಲಾ ಭಾಷಿಗರು ಕನ್ನಡ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಮುಂದಿನ ವರ್ಷ ಕೋಟಿ ರು. ವೆಚ್ಚದಲ್ಲಿ ಎಲ್ಲರ ಸಹಕಾರದೊಂದಿಗೆ ಕನ್ನಡಭವನ ನೀರ್ಮಾಣ ಮಾಡಿ ಆ ಭವನದಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲಾಗುವುದು.ಮತ್ತು ಕ್ಷೇತ್ರವನ್ನು ಆವರಿಸಿರುವ ಬರವನ್ನು ದೂರ ಮಾಡಲು ಮುಂದಿನ ಪೆಬ್ರವರಿ ತಿಂಗಳಲ್ಲಿ ಪಟ್ಟಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲಾಗುವುದು ಎಂದು ಹೇಳಿ ಪ್ರತಿಯೊಬ್ಬರು ಕನ್ನಡ ನಾಡಿನಲ್ಲಿ ಹುಟ್ಟಿರುವ ವ್ಯಕ್ತಿಗಳು ಕನ್ನಡ ನಾಡು ನುಡಿ ಅಭಿವೃದ್ಧಿಗೆ ಕಂಕಣ ತೊಟ್ಟರೆ ತಾನಾಗೇ ಕನ್ನಡ ಭಾಷೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.
ತಹಸೀಲ್ದಾರ್ ಉಷಾ, ತಾಪಂ ಅಧ್ಯಕ್ಷೆ ರೇಣುಕಾ, ಕನ್ನಡಸಂಘದ ಅಧ್ಯಕ್ಷ ಪಲ್ಲವಿಮಣಿ, ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್, ಬಿಇಒ ಕೆ. ಜಯರಾಜ್,ಇಒ ಭಟ್, ರಂಗರಾಮಯ್ಯ, ಹೇಮಂತ್ಕುಮಾರ್ ಕಸಾಪ ಅಧ್ಯಕ್ಷ ಅಶ್ವಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.