ಕೋಲಾರ

ನಿತ್ಯ ರಾಜ್ಯೋತ್ಸವ ಆಗಲಿ

Published On :

ಶಿಡ್ಲಘಟ್ಟ: ಕನ್ನಡವನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿಸದೆ ಪ್ರತಿನಿತ್ಯ ಅಳವಡಿಸಿಕೊಂಡರೆ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯ ಎಂದುಳಿದರು. ಪುರಸಭೆ ಮುಂಬಾಗದಿಂದ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ತಾಲೂಕು ಕಚೇರಿ ಮುಂಬಾಗದವರೆಗೊ ಸಾಗಿತು, ತಾಲೂಕು ದಂಡಾಧಿಕಾರಿ ನಾರಾಯಣಸ್ವಾಮಿ, ಶಾಸಕ ರಾಜಣ್ಣ ಇದ್ದರು. ತಾಲೂಕು ಕಚೇರಿ ಮುಂಬಾಗದಲ್ಲಿ ಶಾಸಕ ಎಂ. ರಾಜಣ್ಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ. ರಾಜಣ್ಣ, ರಾಜ್ಯೋತ್ಸವನ್ನು ನಾಡಿನ ಮನೆ ಮನೆಯಲ್ಲೂ ಹಬ್ಬದ ರೀತಿ ಆಚರಿಸಬೇಕೆಂದು ಕರೆ ನೀಡಿದರು. ತಾಪಂ ಅಧ್ಯಕ್ಷ ಯರಬಚ್ಚಪ್ಪ, ತಾಲೂಕು ದಂಡಾಧಿಕಾರಿ ನಾರಾಯಣಸ್ವಾಮಿ  ಮಾತನಾಡಿದರು. ಮುಖ್ಯ ಭಾಷಣಕಾರ ಎಸ್. ಜಗನ್ನಾಥರಾವ್ ಬಹುಳೆ ಮಾತನಾಡಿ, ರಾಮಾಯಣ, ಮಹಾಭಾರತದಲ್ಲಿ ಬರುವ ಕೆಲವು ಪ್ರದೇಶಗಳು ಕರ್ನಾಟಕದಲ್ಲಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ 3 ಜನ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ 58ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಬದಲಾಗಿ 60 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಎಂದು ಮುದ್ರಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿತ್ತು. ರಾಮಚಂದ್ರಪ್ಪ, ಡಾ. ಸತ್ಯನಾರಾಯಣರಾವ್, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ಆರಕ್ಷರ ವೃತ್ತ ನಿರೀಕ್ಷಕ ಬಿ.ಎಲ್. ಶ್ರೀನಿವಾಸ ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಚೆನ್ನರಾಯಪ್ಪ ಇದ್ದರು.
ಸ್ವಾಭಿಮಾನದ ಕೊರತೆ
ಮಾಲೂರು; ಕನ್ನಡ ಭಾಷೆ ತನ್ನ ನೆಲದಲ್ಲೇ ಅನಾಥವಾಗುತ್ತಿರುವುದಕ್ಕೆ ಕನ್ನಡಿಗರಲ್ಲಿರುವ ಸ್ವಾಭಿಮಾನದ ಕೊರತೆಯೇ ಕಾರಣ ಎಂದು ಶಾಸಕ ಮಂಜುನಾಥ್ಗೌಡ ಹೇಳಿದರು. ಪಟ್ಟಣದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮಿಳುನಾಡಿನ ಗಡಿಭಾಗದ ತಾಲೂಕಿನ ಗ್ರಾಮದಲ್ಲಿ ಜಯಲಲಿತಾ ಪೋಸ್ಟರ್ಗಳು ಕಾಣಿಸುತ್ತಿದ್ದು, ತಮಿಳು ಭಾಷೆ ಬೇರೂರುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಡಾ. ಸುಧಾ ಅವರು ಮಾತನಾಡಿ, ಕನ್ನಡಿಗರು ಸ್ವಪ್ರತಿಷ್ಟೆ ಬಿಟ್ಟು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದರು. ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಪುರಸಭೆ ಸದಸ್ಯರಾದ ರಾಮಮೂರ್ತಿ, ಭಾರತಮ್ಮ ನಂಜುಂಡಪ್ಪ, ಗೀತಾ ವೆಂಕಟೇಶ್, ಮುರಳೀಧರ್, ಅಲೂಮಂಜು, ನಂಜೇಗೌಡ,ಪ್ರದೀಪ್ ರೆಡ್ಡಿ, ಮಂಜುನಾಥ್ ಗೌಡ, ಬಿಇಓ ಸುಬ್ರಮಣಿ, ಎಇಇ ಬದ್ರಿನಾಥ್, ಇಒ ಸಂಜೀವಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.