ಜಿಲ್ಲಾ ಆಸ್ಪತ್ರೆಯಲ್ಲಿ ರೋಗಗ್ರಸ್ತವಾಗಿರುವ ದೂರವಾಣಿ
ಕ.ಪ್ರ.ವಾರ್ತೆ ಕೋಲಾರ ನ.1
ಬಡವರ ದವಾಖಾನೆಯಾದ ನರಹಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಹತ್ತಾರು ಸಮಸ್ಯೆಗಳಲ್ಲಿ ತುರ್ತು ಕರೆಗಳು ಸ್ವೀಕರಿಸಲು ಸಹಾಯವಾಣಿ ಸೌಲಭ್ಯ ಇಲ್ಲದಿರುವುದು ಹಾಗೂ ತುರ್ತು ಚಿಕಿತ್ಸಾ ಘಟಕದಲ್ಲಿನ ಸ್ಥಿರ ದೂರವಾಣಿಗೆ ಗ್ರಹಣ ಬಡಿದಿದ್ದರೂ ದುರಸ್ತಿಗೆ ಗಮನ ನೀಡದಿರುವುದು ದ್ಘೊಜ್ಘ ಲೋಪವೆಂದೇ ಪರಿಗಣಿಸಬೇಕಾಗಿದೆ.
ಕೋಲಾರದ ಜಿಲ್ಲಾ ಕೇಂದ್ರದಲ್ಲಿರುವ ಎಸ್.ಎನ್.ಆರ್ ಆಸ್ಪತ್ರೆಗೆ ಹೆಚ್ಚಾಗಿ ಬರುವುದು ಬಡ ರೋಗಿಗಳು. ಗ್ರಾಮೀಣ ಪ್ರದೇಶಗಳಲ್ಲಿ ಅಪಘಾತ ಅಥವಾ ಮಾರಣಾಂತಿಕ ರೋಗ ಕಂಡು ಬಂದಲ್ಲಿ ರೋಗಿಗಳು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಯ ಸಹಾಯ ಪಡೆಯಲು ದೂರವಾಣಿಯ ವ್ಯವಸ್ಥೆ ಕಲ್ಪಿಸದಿರುವುದು ಆಸ್ಪತ್ರೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇವರಿಗೆ ಆಸ್ಪತ್ರೆಯಲ್ಲಿ ಸಹಾಯವಾಣಿ ಸೌಲಭ್ಯ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ ಸ್ಥಿರ ದೂರವಾಣಿ ಕೆಲಸ ಮಾಡದಿರುವುದು ಗೊತ್ತಿಲ್ಲವೆಂದು ಕಾಣುತ್ತದೆ. ಆದರೆ, ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು ಸಹಾಯವಾಣಿ ಇಲ್ಲದಿರುವ ಬಗ್ಗೆ ಗಮನ ನೀಡದಿರುವುದಕ್ಕೆ ಕಾರಣವೇನು ಎಂಬುದು ಜಿಜ್ಞಾಸೆ ಮೂಡಿಸಿದೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಸಹಾಯವಾಣಿ ಇರಬೇಕು, ಜೊತೆಗೆ ತುರ್ತು ಚಿಕಿತ್ಸಾ ಘಟಕದಲ್ಲೂ ದೂರವಾಣಿ ಸೌಲಭ್ಯವಿರಬೇಕು. ಆದರೆ, ಈ ಎರಡೂ ಸೌಲಭ್ಯಗಳು ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲದಿರುವುದರಿಂದ ರೋಗಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟಾಕಿ ಹಬ್ಬ, ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತ, ಬೆಂಕಿ ದುರಂತಗಳ ಸಂದರ್ಭದಲ್ಲಿ ರೋಗಿಗಳು ಇಲ್ಲವೇ ಸಾರ್ವಜನಿಕರು ಸಹಾಯವಾಣಿ ಮೂಲಕ ತುರ್ತು ಪರಿಹಾರ ಕಂಡುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.
ಆಸ್ಪತ್ರೆಯ ಜಿಲ್ಲಾ ಸರ್ಜನ್ ಮತ್ತು ವೈದ್ಯರ ದೂರವಾಣಿಗಳ ಸಂಖ್ಯೆಯನ್ನು ಆಸ್ಪತ್ರೆಯಲ್ಲಿ ಪ್ರಕಟಿಸಿಲ್ಲ, ಜಿಲ್ಲಾ ಸರ್ಜನ್ ಅವರ ಕಚೇರಿಯಲ್ಲಿ ಇರುವ ಲ್ಯಾಂಡ್ ಫೋನ್ ನಂ-08152-222305 ಶದ್ಧಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಗಳನ್ನು ಸ್ವೀಕರಿಸುವುದು ಅಪರೂಪ. ಇದೇ ರೀತಿ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ ಸ್ಥಿರ ದೂರವಾಣಿ ನಂ-08152- 2203554ಗೆ ಕರೆ ಮಾಡಿದರೆ ಔಟ್ ಆಫ್ ಆರ್ಡರ್ ಎಂಬ ಸಂದೇಶ ಕೇಳಿ ಬರುತ್ತದೆ. ದೂರವಾಣಿಯ ಸಲಕರಣೆಯನ್ನು ಮೂಲೆಗೆ ಹಾಕಲಾಗಿದೆ, ಫೋನ್ ಕೇಬಲ್ ಅನ್ನು ಸುತ್ತಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಜಿಲ್ಲಾ ಆಸ್ಪತ್ರೆಯ ದೂರವಾಣಿಗೆ ಕಾಣಿಸಿಕೊಂಡಿರುವ ವ್ಯಾದಿಯನ್ನು ಕೂಡಲೇ ನಿವಾರಣೆ ಮಾಡದಿದ್ದರೆ ಮುಂದಿನ ಅನಾಹುತಗಳಿಗೆ ಹೊಣೆ ಆಗಬೇಕಾಗುತ್ತದೆ ಎಂಬುದು ಸಾರ್ವಜನಿಕರ ಎಚ್ಚರಿಕೆಯಾಗಿದೆ.
ತುರ್ತು ಕೆರೆಗಳನ್ನು ಸ್ವೀಕರಿಸಲು 108 ವ್ಯವಸ್ಥೆ ಇದ್ದರೂ ಆಸ್ಪತ್ರೆಯಲ್ಲಿ ಸಹಾಯವಾಣಿ ಅತ್ಯಗತ್ಯ. ಜೊತೆಗೆ ಜಿಲ್ಲಾ ಸರ್ಜನ್ ಮತ್ತು ವೈದ್ಯರ ದೂರವಾಣಿ ನಂಬರ್ಗಳು ಜನತೆಗೆ ಗೊತ್ತಿದ್ದರೆ ಅನುಕೂಲವಾಗುತ್ತದೆ. ಕೆಲಸ ಮಾಡದೆ ಸ್ತಬ್ಧವಾಗಿರುವ ಸ್ಥಿರ ದೂರವಾಣಿಯನ್ನು ದುರಸ್ತಿ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ.
'ನಾಡು ನುಡಿ ರಕ್ಷಣೆಗೆ ಎಲ್ಲರೂ ಮುಂದಾಗಿ'
ಕೆಜಿಎಫ್: ಕನ್ನಡ ನಾಡು ಮತ್ತು ಕನ್ನಡ ಸಂಸ್ಕೃತಿ, ರಕ್ಷಣೆಗೆ ನಾಡಿನ ಎಲ್ಲಾ ಜನತೆ ಕೈಜೋಡಿಸಿದರೆ ರಾಜ್ಯೋತ್ಸವಕ್ಕೆ ಮಹತ್ವ ದೊರೆಯುತ್ತದೆ ಎಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ಹೇಳಿದರು. ನಗರದ ಕನ್ನಡ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೆರಿಸಿ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಭಾಷೆಯವರು ವಾಸಿಸುತ್ತಿದ್ದು ಇತರೆ ಭಾಷಿಗರನ್ನು ಕನ್ನಡದ ಪರ ಸೆಳೆಯಲು ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದರು. ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ಗಡಿ ಭಾಗ ಕೆಜಿಎಫ್ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಜಾರಿಯೊಂದಿಗೆ ಕನ್ನಡ ಪರ ಕಾರ್ಯಕ್ರಮಗಳನ್ನು ಅನ್ಯಭಾಷಿಗರನ್ನು ಒಗ್ಗೂಡಿಸಿ ಕನ್ನಡದ ಅಭಿವೃದ್ಧಿಗೆ ಶ್ರಮಿಸಿದ್ದು ಕ್ಷೇತ್ರದ ಜನರ ಆಶಯಗಳಿಗೆ ಸ್ಪಂದಿಸಿದ್ದೇನೆ ಎಂದರು. ನಗರಸಭೆ ಆಯುಕ್ತ ವಿ. ಬಾಲಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಟಿ.ಆರ್. ಭಾಮನೀಡಿ, ಜಿಪಂ ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರವೆಂಕಟಪ್ಪ, ವಿಶೇಷ ತಹಸೀಲ್ದಾರ್, ವೆಂಕಟರಾಮಯ್ಯ, ನೂರಿಶಾಹಜಾದ, ಬಾ.ಹಾ. ಶೇಖರಪ್ಪ, ಎನ್. ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

