ಟೇಕಲ್ನಲ್ಲಿ ರಾಜ್ಯೋತ್ಸವ
ಟೇಕಲ್: ಪ್ರತಿದಿನ ಕನ್ನಡ ಎರಡು ಪದವನ್ನು ಬೇರೆಯವರಿಗೆ ಕಲಿಸಿದರೆ ತಾಯಿ ಕನ್ನಡಾಂಬೆ ಭುವನೇಶ್ವರಿ ಮಾತೆಗೆ ಋಣ ತೀರಿಸಿದಂತಾಗುತ್ತದೆ ಎಂದು ಟೇಕಲ್ ಶಾಖೆಯ ಕರವೇ ಅಧ್ಯಕ್ಷ ಬಿ.ಎಸ್. ಮಂಜುನಾಥಗೌಡ ತಿಳಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಟೇಕಲ್ ವೃತ್ತದಲ್ಲಿ ನಾಡಧ್ವಜ ಹಾರಿಸಿ ಮಾತನಾಡಿ, ಗಡಿ ಭಾಗದ ಈ ಸ್ಥಳವನ್ನು ಕನ್ನಡಮಯವಾಗಲು ಪ್ರತಿಯೊಬ್ಬ ಕನ್ನಡಿಗನು ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ನಾಡಗೀತೆಗಳನ್ನು ಹಾಡಲಾಯಿತು ಹಾಗೂ ಕನ್ನಡ ಭಾವುಟದ ಮಹತ್ವವನ್ನು ತಿಳಿಸಿಕೊಡಲಾಯಿತು. ಉಳ್ಳೇರಹಳ್ಳಿ ಮಂಜುನಾಥ್, ಬಿ.ಎಸ್. ವೆಂಕಟೇಶ್, ಗೋವರ್ದನ್ ಹಾಗೂ ಕರವೇ ಯಎಸ್.ಜಿ. ರಾಮಮೂರ್ತಿ, ಬಿ.ಜಿ. ಸತೀಶ್, ಉಳ್ಳೇರಹಳ್ಳಿ ವೆಂಕಟೇಶ್, ಗೋಪಸಂದ್ರದ ನಾಗರಾಜ್, ಆನಂದಪ್ಪ, ಆಟೋ ಶ್ರೀನಿವಾಸ್, ವೀರಭದ್ರಪ್ಪ ಮತ್ತು ಬಲ್ಲಹಳ್ಳಿಯ ಹನುಮಂತರಾವ್ ಸಾಯಿರಾಮ್ ಉಪಸ್ಥಿತರಿದ್ದರು.
ಶ್ರೀನಿವಾಸಪುರದಲ್ಲಿ ರಾಜ್ಯೋತ್ಸವ
ಶ್ರೀನಿವಾಸಪುರ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಾತಿ, ಹಣ, ಜನಬೆಂಬಲ ಇತ್ಯಾದಿಗಳನ್ನು ನೋಡಿ ಪ್ರಶಸ್ತಿಗಳನ್ನು ನೀಡುವ ದೌರ್ಭಾಗ್ಯ ಇಂದಿನ ಸರ್ಕಾರ ಅನುಸರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಿಸಿದ ರಾಜ್ಯೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡಕ್ಕೆ ವಾರಸುದಾರರಿಲ್ಲದಂತಾಗಿ ರಾಜ್ಯ ಎಲ್ಲಾ ಭಾಷೆಗಳೆವರಿಗೆ ತೆರೆದ ಬಾಗಲಾಗಿದೆ ಎಂದರು. ತಹಸೀಲ್ದಾರ್ ಎಚ್. ಜಯ ಹಾಗೂ ತಾಪಂ ಅಧ್ಯಕ್ಷ ಬಿ.ವಿ. ಕೃಷ್ಣಾರೆಡ್ಡಿ ಮಾತನಾಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಟಿ.ಕೆ. ರಾಘವೇಂದ್ರ, ಎಂ. ನಾಗರಾಜ್, ಆರ್. ರವಿಕುಮಾರ್, ದಿಂಬಾಲ ಅಶೋಕ, ಬಿ.ಎಂ. ಪ್ರಕಾಶ್, ಕೆ.ಕೆ. ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

