ಕೋಲಾರ

'ಕನ್ನಡಿಗರು ಒಗ್ಗಟ್ಟಿನ ಸಂದೇಶ ಸಾರಬೇಕು'

Published On :

ಕೋಲಾರ: ಪರಭಾಷೆಯ ಹಾವಳಿಯಿಂದಾಗಿ ಪ್ರಸ್ತುತ ದಿನಗಳಲ್ಲಿ ಕನ್ನಡಿಗರಾದ ನಾವು ಅಲ್ಪಸಂಖ್ಯಾತರಾಗುತ್ತಿದ್ದು, ರಾಜ್ಯದಲ್ಲಿರುವ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ನಾವೆಲ್ಲರೂ ಕನ್ನಡಿಗರು ಎಂಬ ಒಗ್ಗಟ್ಟಿನ ಸಂದೇಶವನ್ನು ಸಾರಬೇಕೆಂದು ಕೆ.ಎಸ್.ಆರ್.ಟಿ.ಸಿ ಎಂ. ನಾರಾಯಣಸ್ವಾಮಿ  ಅಭಿಪ್ರಾಯಪಟ್ಟರು.
ಅವರು ಮುಳಬಾಗಿಲು ತಾಲೂಕಿನ ನಲ್ಲಾಂಡಹಳ್ಳಿ, ಶಿವನಾರಹಳ್ಳಿ, ಪೊಂಬರಹಳ್ಳಿ, ಮಜರಾ ರಾಮಾಪುರ ಮತ್ತು ನಾಗರೆಡ್ಡಿಹಳ್ಳಿ ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ಶಾಲೆ ಮಕ್ಕಳಿಗೆ ತಟ್ಟೆ ಲೋಟ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡುತ್ತಾ ಹರಿದು ಹಂಚಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ವೇದಿಕೆ ಬರಬೇಕೆಂಬ ಹೋರಾಟಗಾರರ, ಸಾಹಿತಿಗಳ, ವಿಚಾರವಂತರ ದೂರದೃಷ್ಟಿಯಿಂದಾಗಿ ಕರ್ನಾಟಕವೆಂದು ನ.1ರಂದು ರಾಜ್ಯವು ಉದಯವಾಯಿತು. ಅಂದಿನಿಂದ ಇಂದಿನವರೆಗೂ ನಾವೆಲ್ಲರೂ ರಾಜ್ಯದಲ್ಲಿ ಕನ್ನಡಿಗರಾಗಿ ಉಳಿದ್ದುಕೊಂಡಿದ್ದೇವೆ ಎಂದರು.
ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದಿದವರು ಒಳ್ಳೆಯ ಉದ್ಯೋಗಗಳನ್ನು ಪಡೆಯಲು ಸಾಧ್ಯವಿಲ್ಲ ಹಾಗೂ ಇಂಗ್ಲಿಷ್‌ನಿಂದಲೇ ಬದುಕು ಸಾಧ್ಯ ಎಂಬ ತಪ್ಪುಕಲ್ಪನೆಯಿಂದ ಪೋಷಕರು ಖಾಸಗಿ ಶಾಲೆಗಳಿಗೆ ಕಳುಹಿಸುವ ಮೂಲಕ ತಮ್ಮ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ.
ಇಂದು ದೇಶದಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಸರ್ಕಾರಿ ಶಾಲೆಗಳಲ್ಲಿ ಓದಿದವರು ಎಂಬುದನ್ನು ಮರೆಯಬಾರದು. ಹಾಗೂ ಕನ್ನಡ ಕಲಿಕೆಯಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದೆಂಬುದನ್ನು ಕೂಡ ಮನದಲ್ಲಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರಾಜ್ಯದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದವರಲ್ಲಿ ನಮ್ಮ ಮುಳಬಾಗಿಲಿನವರು ಅಗ್ರಸ್ಥಾನ ಪಡೆದಿದ್ದಾರೆಂಬುದು ಹೆಮ್ಮೆಯ ವಿಷಯ. ನಮ್ಮದು ಗಡಿಭಾಗವಾಗಿದ್ದರೂ ಇಲ್ಲಿ ಕನ್ನಡಕ್ಕೆ ಕೊರತೆಯಿಲ್ಲ ಹಾಗಾಗಿ ಜ್ಞಾನಕ್ಕೂ ಕೊರತೆಯಿಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವರಲಕ್ಷ್ಮೀನಾರಾಯಣಸ್ವಾಮಿ, ಯಲ್ಲೇಶ್, ಎನ್.ಎ. ರಮೇಶ್, ಸುಬ್ರಮಣಿ (ಸುಬ್ಬು), ಶ್ರೀನಿವಾಸ್, ಮೇಘರಾಜ್, ಕೃಷ್ಣಪ್ಪ, ಶಿಕ್ಷಕರಾದ ಹನುಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಆರ್. ಶಂಕರಪ್ಪ, ಉತ್ತನೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಉತ್ತನೂರು ಅರುಣ್, ಕಾರ್ಪೆಂಟರ್ ಮುನಿಯಪ್ಪ, ಶ್ರೀನಿವಾಸಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.