ಕೋಲಾರ

'ಸಂವೇದನಾಶೀಲ ಕಾವ್ಯ ರಚನೆಯಾಗಲಿ'

Published On :

ಮಾಲೂರು: ಹೆಚ್ಚು ಹೆಚ್ಚು ಸಮಾಜಮುಖಿ ಕಾವ್ಯ ರಚನೆಯಿಂದ ಸಮಾಜದಲ್ಲಿ ಆಶಾದಾಯಕ ಬೆಳೆವಣಿಗೆ ಕಾಣಬಹುದು ಎಂದು ಕನ್ನಡ ಉಪನ್ಯಾಸಕ ಎಚ್.ಎಸ್.ಸತ್ಯನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ 'ಕಾವ್ಯ ಸಂಭ್ರಮ ಗೀತಾ ಗಾಯನ' ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ಕಾವ್ಯ ವನ್ನು ಗಂಭೀರವಾಗಿ ಪರಿಗಣಿಸಿರುವ ಇಂದಿನ ಬಹಳಷ್ಟು  ಖ್ಯಾತ ಕವಿಗಳಲ್ಲಿ ಅಳವಾದ ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿದೆ ಎಂದರು. ಕಾವ್ಯ ಇಂದು ಹೊರಳು ದಾರಿಯಲ್ಲಿದ್ದು, ಹೊಸ ಚಳುವಳಿಗೆ ಕಾದಿದೆ. ಈ ನಿಟ್ಟಿನಲ್ಲಿ ಕವಿಗಳು ಸಹ ಅಧ್ಯಯನಶೀಲರಾಗುವುದರ ಮೂಲಕ ಸೂಕ್ಷ್ಮ ಸಂವೇದನಾಶೀಲತೆ ಬೆಳೆಸಿಕೊಳ್ಳುವ ಮೂಲಕ ಕಾವ್ಯದಲ್ಲಿ ಹೂಸ ಪ್ರಯೋಗಕ್ಕೆ ಮುಂದಾಗಬೇಕಾಗಿದೆ ಎಂದರು.
ಇದೇ ವೇಳೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಲಕ್ಕೂರು ಆನಂದ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಕೋಗಿಲಹಳ್ಳಿ ಕೃಷ್ಣಪ್ಪ, ರಾಧಾಪ್ರಕಾಶ್,  ಮಕ್ಕಳ ಸಾಹಿತಿ ಡಾ.ಸಿ.ಎಂ.ಗೋವಿಂದರೆಡ್ಡಿ, ಡಾ.ಮುನಿರಾಜು, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಗೌರವಿಸಲಾಯಿತು.  ಸಾರಂಗರಂಗ ತಾಲೂಕು ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಕರವೇ ಅಧ್ಯಕ್ಷ ಜಿ.ಮಂಜುನಾಥ್‌ಗೌಡ, ಜಿಲ್ಲಾ ಗೌರವ ಕಾರ್ಯದರ್ಶಿ ಅಶ್ವಥ್‌ರೆಡ್ಡಿ, ಜ.ಮು.ಚಂದ್ರ, ಕುಂ.ಚಂದ್ರಪ್ಪ,   ಎಸ್.ಎಂ.ರಾಜು, ಮೈ. ಸತೀಶ್, ಚಾನ್‌ಪಾಷ, ಚಾಂಪಲ್ಲಿ ಚಂದ್ರಶೇಖರ್, ದೂಡ್ಡಕಲ್ಲಹಳ್ಳಿ ನಾರಾಯಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.