ಕೋಲಾರ

'ನೋಮುಲ' ಖ್ಯಾತಿಯ ದೀಪಾವಳಿ ಹಬ್ಬ ಆಚರಣೆ

Published On :

ಕ.ಪ್ರ.ವಾರ್ತೆ  ಕೋಲಾರ  ನ.3
ನಗರದಲ್ಲಿ ದೀಪಾವಳಿ ಹಬ್ಬವನ್ನು ಭಾನುವಾರ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.ಹಿಂದಿನ ಸಂಪ್ರದಾಯದಂತೆ ನಗರದ ಅನೇಕ ಕಡೆ ಹೊಸ ಮರಗಳಲ್ಲಿ ಕಜ್ಜಾಯ ಮತ್ತು ಬಾಗಿನ ಹೊತ್ತು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ನೋಮುಲ ಹಬ್ಬ ಎಂದೇ ಖ್ಯಾತಿ ಪಡೆದ ದೀಪಾವಳಿಯನ್ನು ಜನತೆ ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.
ನಗರದ ವಿವಿಧ ದೇವಾಲಯಗಳಲ್ಲಿ ಕೇದಾರೇಶ್ವರ ವ್ರತ ನಡೆಸಲು ಅನುಕೂಲವಾಗುವಂತೆ ಕಳಸ ರೂಪದಲ್ಲಿ ಗೌರಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು, ಮಹಿಳೆಯರು ಬೆಳಿಗ್ಗಿನಿಂದಲೇ ಕಜ್ಜಾಯ ಮತ್ತು ನೋಮುದಾರಗಳನ್ನು ದೇವಾಲಯಗಳಿಗೆ ತೆಗೆದುಕೊಂಡು ಹೋಗಿ ಪೂಜಿಸಿಕೊಂಡು ಬರುತ್ತಿದ್ದ ದೃಶ್ಯ ಕಂಡು ಬಂದಿತು. ದೇವಾಲಯಗಳಿಂದ ತಂದ ನೋಮುದಾರಗಳನ್ನು ಕಜ್ಜಾಯ ಸಮೇತ, ಎಲೆ ಅಡಿಕೆ ತಾಂಬೂಲದೊಂದಿಗೆ ಹಿರಿಯರಿಗೆ ನೀಡಿ ನೋಮು ದಾರಗಳನ್ನು ಕೈಗಳಿಗೆ ಕಟ್ಟಿಕೊಂಡು ಸೌಹಾರ್ದತೆ ಸಾರಿದರು.ಪಟಾಕಿಗಳ ಮಾರಾಟವು ದೀಪಾವಳಿಯ ಹಬ್ಬದ ಮೂರು ದಿನಗಳಲ್ಲಿ ಕೊಂಚ ಚುರುಕಾಗಿ ನಡೆದಿದ್ದು, ವ್ಯಾಪಾರಿಗಳಿಗೆ ಸಂತಸ ತಂದಿದೆ. ಹಬ್ಬದ ದಿನವಾದ್ದರಿಂದ ಹೂವು-ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತು. ಜನತೆ ತಮ್ಮ ಹಿತಿ-ಮಿತಿಯಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥ ಖರೀದಿಸಿ ಹಬ್ಬ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.