ಕೋಲಾರ

ಸುದ್ದಿ ಸಂಕ್ಷೇಪ

Published On :

ಕನ್ನಡ ರಾಜ್ಯೋತ್ಸವ ನಿರ್ಲಕ್ಷ್ಯ; ಕನ್ನಡ ಸಂಘ ಒಕ್ಕೂಟ ಆಕ್ರೋಶ
ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವೆಂಕಟಾಚಲಪತಿ  ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಆರೋಪಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸಭೆ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವವು ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಕಳೆಗುಂದಿತ್ತು. ಇಂತಹ ಅಧಿಕಾರಿಯನ್ನು ಹತ್ತಾರು ವರ್ಷಗಳಿಂದ ಕೋಲಾರದಲ್ಲೇ  ಮುಂದುವರಿಸಿರುವುದು ಸರ್ಕಾರದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ  ಎಂದು ದೂರಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ಜನಪರ ರಾಜ್ಯೋತ್ಸವ ಆಚರಣೆಗೆ ತಿಲಾಂಜಲಿ ಇಟ್ಟು ತನ್ನ ಎಂದಿನ ಚಾಳಿಯಂತೆ ಸರ್ವಾಧಿಕಾರಿ ದೋರಣೆ ತೋರಿದ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಜಿಲ್ಲಾಧಿಕಾರಿಗೂ ದಿಕ್ಕು ತಪ್ಪಿಸಿ ರಾಜ್ಯೋತ್ಸವ ಕಳೆಗುಂದುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಅಧಿಕಾರಿಯು ಕನಿಷ್ಠ ಪತ್ರಿಕಾ ಮಾಧ್ಯಮಗಳಿಗೂ  ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ತೀವ್ರ ಸಮಾಧಾನ ವ್ಯಕ್ತಪಡಿಸಿದರು.  ಒಕ್ಕೂಟದ ಅಧ್ಯಕ್ಷ ಅ.ಕೃ.ಸೋಮಶೇಖರ್, ವಿಷ್ಣು, ಕೋ.ನಾ.ಪ್ರಭಾಕರ್, ಎ.ಪರಮೇಶ್ವರ್, ಜೆ.ಜಿ.ವಿಶ್ವನಾಥ್, ಕೆ.ಆರ್.ತ್ಯಾಗರಾಜು, ಮಹಮದ್ ಅಲಿ, ಎಂ.ಆರ್. ಚೇತನ್‌ಬಾಬು, ಜಯದೇವ ಪ್ರಸನ್ನ, ನಾ.ಮಂಜುನಾಥ್, ಡಾ.ಎಂ.ಚಂದ್ರಶೇಖರ್,  ಕೆ.ನರೇಂದ್ರಬಾಬು, ಎಂ.ಪಿ.ನಾರಾಯಣಸ್ವಾಮಿ, ಕೆ.ಎನ್. ಮಂಜುನಾಥ್, ಜಿ.ರವೀಂದ್ರಬಾಬು, ಡಿ.ಎಸ್.ಪಂಡರಿನಿಧಿ ಮತ್ತಿತರರು ಉಪಸ್ಥಿತರಿದ್ದರು.   
ಕೇಂದ್ರ ಸಚಿವರಿಗೆ ದೂರು: ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ಮತ್ತು ಕಳೆಗುಂದಿದ ಕನ್ನಡ ರಾಜ್ಯೋತ್ಸವ ಕುರಿತಂತೆ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪಗೆ  ವಿವರಿಸಲಾಯಿತು. ಒಕ್ಕೂಟದ ಕಿಕ್ಕಿರಿದು ತುಂಬಿದ ಸಭೆಗೆ ದಿಢೀರ್ ಆಗಮಿಸಿದ ಸಚಿವರು ಸಮಸ್ಯೆ ಕೇಳಿ ಮುಂದಿನ ದಿನಗಳಲ್ಲಿ ಎಲ್ಲರೂ ಕುಳಿತು ರಾಜ್ಯೋತ್ಸವ ಕಾರ್ಯಕ್ರಮ ರೂಪಿಸೋಣ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಆವಣಿ ಹೋಬಳಿ ಸಾಹಿತ್ಯ ಪರಿಷತ್ ಘಟಕ ಪ್ರಾರಂಭ
ಮುಳಬಾಗಲು: ತಾಲೂಕಿನ ಆವಣಿ ಗ್ರಾಮದಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಪರಿಷತ್ ಘಟಕ ಆರಂಭಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು. ತಾಲೂಕಿನ ಆವಣೆ ಗ್ರಾಮದಲ್ಲಿ ಗುರುವಾರ ಸಾಹಿತ್ಯ ಪರಿಷತ್ ಘಟಕ ಪ್ರಾರಂಭಿಸಿ ಮಾತನಾಡಿ, ನಿರಂತರ ಕನ್ನಡ ಚಟುವಟೆಕೆ ಹಮ್ಮಿಕೊಳ್ಳಲಾಗುವುದು ಎಂದರು. ಗೌರವಾಧ್ಯಕ್ಷ ಎನ್. ಜಗದೀಶ್, ಅಧ್ಯಕ್ಷ ಎನ್. ರಾಮಕೃಷ್ಣ, ಕಾರ್ಯದರ್ಶಿ ಬಲ್ಲ ಹನುಮಂತಪ್ಪ, ಶಿವರಾಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.